Sandalwood : ನಟ ಚೇತನ್ ಗೆ ಜಾಮೀನು ಮಂಜೂರು
ನಟ ಚೇತನ್ ಗೆ 32ನೇ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಇಬ್ಬರ ಶೂರಿಟಿ ಮತ್ತು ಒಂದು ಲಕ್ಷ ರುಪಾಯಿ ಬಾಂಡ್ ಬರೆಸಿಕೊಂಡು ಜಾಮೀನು ನೀಡಲಾಗಿದೆ.
ನ್ಯಾಯಾಧೀಶರ ಕುರಿತಾಗಿ ನಟ ಚೇತನ್ ಮಾನಹಾನಿ ಮಾಡುವಂತಹ ಟ್ವೀಟ್ ಮಾಡಿದ್ದರು ಎಂಬ ಕಾರಣಕ್ಕೆ ಅವರನ್ನ ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದರು.
ಆ ನಂತರ ಕೋರ್ಟ್ ನಟ ಚೇತನ್ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿತ್ತು.
ಈ ಹಿನ್ನೆಲೆಯಲ್ಲಿ ನಾಲ್ಕು ದಿನಗಳಿಂದ ಚೇತನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು.
ಹೀಗಾಗಿ ಚೇತನ್ ಕುಟುಂಬ ಜಾಮೀನಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.
ಚೇತನ್ ಗೆ ಇದೀಗ ಜಾಮೀನು ಮಂಜೂರಾಗಿದೆ.