ಸಿನಿ ಶುಕ್ರವಾರ – ಇಲ್ಲಿದೆ ಬಿಡುಗಡೆಯಾಗುತ್ತಿರುವ ಬಿಗ್ ಬಜೆಟ್ ಚಿತ್ರಗಳ ಮಾಹಿತಿ…
ಕರೋನಾದ ಮೂರನೇ ಅಲೆ ಕಡಿಮೆಯಾದಂತೆ ಸಾಲು ಸಾಲು ಸಿನಿಮಾದ ಬಿಡುಗಡೆ 4 ಅಲೆಯ ರೂಪದಂತೆ ಬರುತ್ತಿದೆ, ಇಷ್ಟು ದಿನ ಕರೋನಾ ಹಾವಳಿ ಕಡಿಮೆಯಾಗಲಿ ಎಂದು ಕಾಯುತ್ತಾ ಕುಳಿತಿದ್ದ ಚಿತ್ರ ನಿರ್ಮಾಕರು ಒಂದರ ಹಿಂದೊಂದರಂತೆ ಚಿತ್ರವನ್ನ ಬಿಡುಗಡೆ ಮಾಡುತ್ತಿದ್ದಾರೆ.
ಈ ಸಿನಿ ಶುಕ್ರವಾರವೂ ಸ್ಯಾಂಡಲ್ವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್ ಸೇರಿದಂತೆ ಬಿಗ್ ಬಜೆಟ್ ಚಿತ್ರಗಳು ರಿಲೀಸ್ ಆಗುತ್ತಿವೆ, ಯಾವ ಯಾವ ಚಿತ್ರಗಳು ರಿಲೀಸ್ ಆಗುತ್ತಿವೆ ಎಂಬ ಪ್ರಶ್ನೆಗೆ ಉತ್ತರೆ ಇಲ್ಲಿದೆ.
ಪ್ರೇಮ್ ನಿರ್ದೇಶನದಲ್ಲಿ ಮೊದಲ ಬಾರಿಗೆ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿರುವ ನಟ ರಾಣಾ ಅಭಿನಯದ ಏಕ್ ಲವ್ ಯಾ ಚಿತ್ರ ಕೂಡ ಇಂದು ತೆರೆಗೆ ಬರುತ್ತಿದೆ. ರಾಣಾ ಗೆ ನಾಯಕಿಯಾಗಿ ರಚಿತಾ ರಾಮ್ ಮತ್ತು ರೇಷ್ಮಾ ನಾಣಯ್ಯ ಜೊತೆಯಾಗಿದ್ದಾರೆ. ಚಿತ್ರದ ಹಾಡುಗಳು ಈಗಾಲೇ ಸೂಪರ್ ಹಿಟ್ ಆಗಿವೆ.
ಓಲ್ಡ್ ಮಾಂಕ್ ಅದಿತಿ ಪ್ರಭುದೇವ ಮತ್ತು ಶ್ರೀನಿ ಕಾಂಬಿನೇಷನ್ ಎರಡನೇ ಭಾರಿ ಓಲ್ಡ್ ಮಾಂಕ್ ಗೆ ಜೊತೆಯಾಗಿದ್ದಾರೆ. ಈ ಹಿಂದೆ ಇವರಿಬ್ಬರು ರಂಗನಾಯಕಿ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದರು. ಸೌರಭ್ ಮತ್ತು ವೈಭವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಅರುಣ್ ಬಾಲರಾಜ್ ಸುಜಯ್ ಶಾಸ್ತ್ರಿ ಮತ್ತು ಎಸ್ ನಾರಾಯಣ್ ಚಿತ್ರದಲ್ಲಿ ನಟಿಸಿದ್ದಾರೆ.
ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ತೆಲುಗು ಚಿತ್ರ ಭೀಮ್ಲಾ ನಾಯಕ್ ಕೂಡ ಇಂದು ರಿಲೀಸ್ ಆಗುತ್ತಿದೆ. ಮಲಯಾಳಂ ಚಿತ್ ಅಯ್ಯಪ್ಪನುಮ್ ಕೋಶಿಯಮ್ ಚಿತ್ರದ ರಿಮೇಕ್ ಇದಾಗಿದೆ. ಮಲಯಾಳಂ ನಲ್ಲಿ ಪೃಥ್ವಿರಾಜ್ ಮತ್ತು ಬಿಜು ಮೆನನ್ ನಟಿಸಿದ್ದರು, ಪೃಥ್ವಿರಾಜ್ ಪಾತ್ರದಲ್ಲಿ ರಾಣಾ ದಗ್ಗುಬಾಟಿ ಬಿಜು ಮೆನನ್ ಪಾತ್ರದಲ್ಲಿ ಪವನ್ ಕಲ್ಯಾಣ್ ನಟಿಸಿದ್ದಾರೆ.
ಗಂಗೂಬಾಯಿ ಕಥಿಯಾವಾಡಿ
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಕಥಿಯಾವಡಿ ಚಿತ್ರ ಸಾಕಷ್ಟು ನಿರೀಕ್ಷೆಗಳನ್ನ ಹುಟ್ಟಿಸಿದೆ. ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿರುವವ ಈ ಚಿತ್ರ ಮುಂಬೈನಾ ಕಾಮಾಟಿಪುರದ ನಿಜ ಜೀವನವನ್ನ ತೋರಿಸಲಿದೆ. ನಟ ಅಜಯ್ ದೇವಗನ್ ಮತ್ತು ಹುಮಾ ಖುರೇಷಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
ವಲಿಮೈ
ತಮಿಳು ಸೂಪರ್ ಸ್ಟಾರ್ ಅಜಿತ್ ನಟನೆಯ ಹೆಚ್ ವಿನೋದ್ ನಿರ್ದೇಶನದ ವಲಿಮೈ ಚಿತ್ರ ಗುರುವಾರ ವಿಶ್ವದಾದ್ಯಂತ ರಿಲೀಸ್ ಆಗಿದೆ. ಬಾಲಿವುಡ್ ನಟಿ ಹುಮಾ ಖುರೇಷಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತೆಲುಗು ನಟ ಕಾರ್ತಿಕೇಯ ನಟಿಸಿದ್ದಾರೆ. ಚಿತ್ರದ ಆಕ್ಷನ್ ಸೀಕ್ವೆನ್ಸ್ ಕುರಿತು ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ..
Cine Friday – Information on Big Budget Movies Releasing …