ನಿರ್ಮಾಪಕ ಕಾರಿಗೆ ಮೊಸರಿನ ಅಭಿಷೇಕ ಮಾಡಿದ ಅಜಿತ್ ಅಭಿಮಾನಿಗಳು…
ಸಿನಿಮಾ ತಾರೆಯರು ಎಂದರೆ ಅಭಿಮಾನಿಗಳಿಗೆ ಸಖತ್ ಕ್ರೇಜ್ ಇದ್ದೇ ಇರುತ್ತೆ. ಅದರಲ್ಲೂ ಕಾಲಿವುಡ್ ನಲ್ಲಿ ಸಿನಿಮಾ ಹೀರೋಗಳು ಅಂದ್ರೆ ಒಂದು ಕ್ರೇಜ್ ಇದ್ದೇ ಇರುತ್ತೆ. ನಟ, ನಟಿಯರ ಜೊತೆಗೆ ಫೊಟೋ ತೆಗೆಸಿಕೊಳ್ಳುವುದು, ನೆಚ್ಚಿನ ತಾರೆಯರ ಸಿನಿಮಾ ರಿಲೀಸ್ ಆದಾಗ ಹೀರೋ ಕಟೌಟ್ಗೆ ಹಾಲಿನ ಅಭಿಷೇಕ ಮಾಡೋದು ಕಾಮನ್ ಆದ್ರೆ ನಿರ್ಮಾಪಕನ ಕಾರಿಗೆ ಮೊಸರಿನ ಅಭಿಷೇಕ ಮಾಡೋದು ಎಲ್ಲಾದ್ರೂ ನೋಡಿದ್ದಾರೆ. ಕಾಲಿವುಡ್ ನಟ ಅಜಿತ್ ಕುಮಾರ್ ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ಕಾರಿಗೆ ಮೊಸರಿನ ಅಭಿಷೇಕ ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
@BoneyKapoor car status after his entry into @RohiniSilverScr for #Valimai #FDFS
Not a petrol car anymore. Its a curd car now. Lack of milk. pic.twitter.com/ZAFVoeUnA3
— Sivaprakash Velsamy (@sivareports) February 24, 2022
ಗುರುವಾರದಂದು ವಲಿಮೈ ಸಿನಿಮಾ ಬಿಡುಗಡೆಯಾಗಿದ್ದು ಜನರ ಪ್ರತಿಕ್ರಿಯೆ ತಿಳಿದುಕೊಳ್ಳುಲು ನಿರ್ಮಾಪಕ ಬೋನಿ ಕಪೂರ್ ಚಿತ್ರಮಂದಿರಕ್ಕೆ ವಿಸಿಟ್ ಮಾಡಿದ್ದರು. ಈ ವೇಳೆ ಅಜಿತ್ ಅಭಿಮಾನಿಗಳು ಬೋನಿ ಕಪೂರ್ ಕಾರಿನ ಮೇಲೆ ಮೊಸರಿನ ಅಭಿಷೇಕ ಮಾಡಿದ್ದಾರೆ. ಈ ವೀಡಿಯೋ ವೈರಲ್ ಆಗಿದೆ. ಈ ಮೊಸರನ್ನು ಅಭಿಮಾನಿಗಳು ಯಾವುದೋ ಅಂಗಡಿಯಿಂದ ಕದ್ದು ತಂದಿದ್ದು ಎಂಬ ಮಾಹಿತಿ ಕೂಡ ಕೇಳಿಬಂದಿದೆ.
ತಮಿಳು ಸೂಪರ್ ಸ್ಟಾರ್ ಅಜಿತ್ ನಟನೆಯ ಹೆಚ್ ವಿನೋದ್ ನಿರ್ದೇಶನದ ವಲಿಮೈ ಚಿತ್ರ ಗುರುವಾರ ವಿಶ್ವದಾದ್ಯಂತ ರಿಲೀಸ್ ಆಗಿದೆ. ಬಾಲಿವುಡ್ ನಟಿ ಹುಮಾ ಖುರೇಷಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತೆಲುಗು ನಟ ಕಾರ್ತಿಕೇಯ ನಟಿಸಿದ್ದಾರೆ. ಚಿತ್ರದ ಆಕ್ಷನ್ ಸೀಕ್ವೆನ್ಸ್ ಕುರಿತು ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ..