James : ಅಪ್ಪು ‘ಜೇಮ್ಸ್’ ಸಿನಿಮಾದ ಪ್ರೀರಿಲೀಸ್ ಈವೆಂಟ್ ಗೆ ಟಾಲಿವುಡ್ ನ ಇಬ್ಬರು ದಿಗ್ಗಜರು ಅತಿಥಿಗಳು..!!!
ಅಪ್ಪು ಅವರ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ 5 ಭಾಷೆಗಳಲ್ಲಿ ಮೂಡಿಬರುತ್ತಿದೆ.. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಈ ಪವರ್ ಪ್ಯಾಕ್ಡ್ ಸಿನಿಮಾ ರಿಲೀಸ್ ಗಾಗಿ ಕೇವಲ ಕರುನಾಡಿನ ಜನರಷ್ಟೇ ಅಲ್ದೇ ಪರಭಾಷಿಗರೂ ಕೂಡ ಕಾದುಕುಳಿತಿದ್ದಾರೆ.. ಅಪ್ಪು ಅಭಿಮಾನಿಗಳು ದಿನಗಣನೆ ಶುರು ಮಾಡಿದ್ದಾರೆ..
ಇತ್ತೀಚೆಗೆ ರಿಲೀಸ್ ಆದ ಜೇಮ್ಸ್ ಟೀಸರ್ ಕಾತರತೆಯನ್ನ ಹೆಚ್ಚಿಸಿದೆ… ಅಂದ್ಹಾಗೆ ಸಿನಿಮಾ ಮಾರ್ಚ್ 17 ಕ್ಕೆ ರಿಲೀಸ್ ಆಗುತ್ತಿದೆ… ಈ ನಡುವೆ ಸಿನಿಮಾದ ಬಗ್ಗೆ ಮತ್ತೊಂದು ಸೆನ್ಷೇಷನಲ್ ಸುದ್ದಿ ಹೊರಬಿದ್ದಿದೆ… ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ , ಅಪ್ಪು ಆತ್ಮೀಯ ಗೆಳೆಯ ಯಂಗ್ ಟೈಗರ್ ಜ್ಯೂನಿಯರ್ NTR ಜೇಮ್ಸ್ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಗೆ ಅತಿಥಿಗಳಾಗಿ ಆಗಮಿಸಲಿದ್ದಾರೆ ಎನ್ನಲಾಗಗ್ತಿದೆ..
ಹೌದು… ಹೊಸಪೇಟೆಯಲ್ಲಿ ಅದ್ಧೂರಿ ಪ್ರೀ ರಿಲೀಸ್ ಈವೆಂಟ್ ಮಾಡುವುದಾಗಿ ಸಿನಿಮಾದ ನಿರ್ದೇಶಕರಾದ ಬಹಹದ್ಧೂರ್ ಚೇತನ್ ಹೇಳಿದ್ದರು.. ಅಂತೆಯೇ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ತಯಾರಿ ಮಾಡಿಕೊಳ್ತಿದೆ ಸಿನಿಮಾತಂಡ.. ಇದೇ ಈವೆಂಟ್ ಗೆ ಟಾಲಿವುಡ್ ಈ ದಿಗ್ಗಜರು ಗೆಸ್ಟ್ ಗಳಾಗಿ ಆಗಮಿಸಲಿದ್ದಾರೆ ಎನ್ನಲಾಗ್ತಿದೆ..