KGF 2 ಅಭಿಮಾನಿಗಳಿಗೆ ಅಪ್ ಡೇಟ್ಸ್ ಬೇಕಾದ್ರೆ ಮೂರು ಆಪ್ಷನ್ ಗಳಿಗೆ ವೋಟ್ ಮಾಡಿ ಎಂದು ಟೀಮ್
ಇಡೀ ಭಾರತೀಯ ಸಿನಿಮಾರಂಗವೇ ಕಾದು ಕುಳಿತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ರಿಲೀಸ್ ಗೆ ಈಗಿನಿಂದಲೇ ಅಭಿಮಾನಿಗಳು ದಿನಗಣನೆ ಆರಂಭಿಸಿದ್ದಾರೆ… ಸಿನಿಮಾ ಏಪ್ರಿಲ್ 14 ಕ್ಕೆ ರಿಲೀಸ್ ಆಗಲಿದೆ…
ಈ ನಡುವೆ ಸಿನಿಮಾತಂಡದಿಂದ ಅಭಿಮಾನಿಗಳು ಹೊಸ ಅಪ್ ಟೇಟ್ಸ್ ನಿರೀಕ್ಷೆಯಲ್ಲಿದ್ದಾರೆ… ಆದ್ರೆ ಸಿನಿಮಾತಂಡ ಹೆಚ್ಚೇನು ಅಪ್ ಡೇಟ್ಸ್ ಬಿಟ್ಟುಕೊಟ್ಟಿಲ್ಲ.. ಆದ್ರೀಗ ಹೊಂಬಾಳೆ ಫಿಲಮ್ಸ್ ಅಧಿಕೃತವಾಗಿ ಟ್ವೀಟ್ ಒಂದನ್ನ ಮಾಡಿದ್ದು , ಕೆಜಿಎಫ್ ಅಭಿಮಾನಿಗಳ ವೋಟ್ ಕೇಳಿದೆ.. ಹೌದು.. ಟ್ವಿಟ್ಟರ್ ನಲ್ಲಿ ಮೂರು ಆಯ್ಕೆಗಳನ್ನ ಕೊಡಲಾಗಿದೆ.. ಒಂದು ಹಾಡು , ಮತ್ತೊಂದು ಟ್ರೇಲರ್ , ಮತ್ತೊಂದು ‘ಲೆಟ್ ಅಸ್ ಸರ್ಪ್ರೈಸ್ ಯೂ’ ಎಂದು ಆಪ್ಷನ್ ಕೊಟ್ಟಿದೆ..
ಟ್ವಿಟ್ಟರ್ ಸಮೀಕ್ಷೆಯನ್ನು ಪ್ರಕಟಿಸಿ, “ಕಾಯುವುದು ಉತ್ಸುಕವಾಗಿದೆ ಎಂದು ನಮಗೆ ತಿಳಿದಿದೆ. ಆದರೆ, ಕೆಜಿಎಫ್ : ಅಧ್ಯಾಯ 2 ರ ಗ್ಲಿಂಪ್ಸ್ ಪಡೆಯಲು ನಮ್ಮ ಪ್ರೀತಿಯ ಅಭಿಮಾನಿಗಳ ಉತ್ಸುಕತೆಯನ್ನು ನೋಡಲು ನಾವು ತುಂಬಾ ಉತ್ಸುಕರಾಗಿದ್ದೇವೆ. ನೀವು ಮೊದಲು ಏನನ್ನು ನೋಡಲು ಬಯಸುತ್ತೀರಿ..? ಕೆಜಿಎಫ್ ಆರ್ಮಿ ನಿರ್ಧರಿಸಿ ಎಂದು ಟ್ವೀಟ್ ಮಾಡಿದ್ದಾರೆ… ಅಲ್ಲದೇ #KGF2onApr14 ಎಂಬ ಹ್ಯಾಶ್ಟ್ಯಾಗ್ ಅನ್ನು ಬಳಸಿರುವುದು ಸಿನಿಮಾ ನಿಗದಿನ ದಿನಾಂಕಕ್ಕೆ ರಿಲೀಸ್ ಆಗುವುದು ಪಕ್ಕಾ ಆಗಿದೆ.
ಟ್ರೈಲರ್ ಆಯ್ಕೆಯು 70.5% ಮತಗಳನ್ನು ಪಡೆದಿದೆ. ಮತ್ತೊಂದೆಡೆ, ಹಾಡು ಮತ್ತು ‘ಲೆಟ್ ಅಸ್ ಸರ್ಪ್ರೈಸ್ ಯು’ ಆಯ್ಕೆಗಳು 13% ಮತ್ತು 16.4% ಮತಗಳನ್ನ ಪಡೆದಿದೆ. ಗಮನಾರ್ಹವೆಂದರೆ ಇದುವರೆಗೆ ಸುಮಾರು 14000 ಜನರು ಮತ ಚಲಾಯಿಸಿದ್ದಾರೆ ಮತ್ತು ಮತದಾನವನ್ನು 4 ದಿನಗಳವರೆಗೆ ನಿಗದಿಪಡಿಸಲಾಗಿದೆ. ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, ನೆಟಿಜನ್ಗಳು ನಮ್ಮಂತೆಯೇ ಕೆಜಿಎಫ್: ಅಧ್ಯಾಯ 2 ರ ಟ್ರೈಲರ್ಗಾಗಿ ಕಾತುರದಿಂದ ಕಾಯುತ್ತಿದ್ದಾರೆ.
We know the wait has been exasperating. But, we are very excited to see the eagerness of our beloved fans to get a glimpse of KGF: Chapter 2. What do you want to see first?
Let the KGF army decide the next move! #KGF2onApr14 #KGFChapter2— Hombale Films (@hombalefilms) February 23, 2022