ಬಿಗ್ ಬಜೆಟ್, ಬಿಗ್ ಸ್ಟಾರ್ಸ್, ಮಾರ್ಚ್ ತಿಂಗಳಲ್ಲಿ ಸಿನಿಮಾ ಮರೆವಣಿಗೆ
ಪುನೀತ್ ರಾಜ್ ಕುಮಾರ್, ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್, ಪ್ರಭಾಸ್, ಜೂನಿಯರ್ ಎನ್ಟಿಆರ್, ಮತ್ತು ರಾಮ್ ಚರಣ್ ಮಾರ್ಚ್ ತಿಂಗಳಲ್ಲಿ ದೂಳೆಬ್ಬಿಸಲು ರೆಡಿಯಾಗಿದ್ದಾರೆ. ಮಾರ್ಚ್ ತಿಂಗಳ ಪ್ರತಿ ವಾರವೂ ಬಿಗ್ ಸ್ಟಾರ್ ಗಳ ಬಿಗ್ ಬಜೆಟ್ ಚಿತ್ರಗಳು ಸಿನಿಪ್ರಿಯರನ್ನ ರಂಜಿಸಲು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿವೆ.
ಬಯೋಪಿಕ್ಗಳಿಂದ ಹಿಡಿದು ರೊಮ್ಯಾಂಟಿಕ್ ಡ್ರಾಮಾಗಳವರೆಗೆ ಎಲ್ಲಾ ಪ್ರಕಾರಗಳ ಚಲನಚಿತ್ರಗಳು ಪ್ರೇಕ್ಷಕರ ಮುಂದೆ ಬರಲಿವೆ. ಈ ಸಿನಿಮಾ ಉತ್ಸವಕ್ಕೆ ನೀವು ರೆಡಿಯಾಗುತ್ತಿದ್ದರೆ. ಯಾವ ಯಾವ ಚಿತ್ರಗಳು ರಿಲೀಸ್ ಗೆ ರೆಡಿಯಾಗಿವೆ ಎನ್ನುವುದನ್ನ ನಾವು ಹೇಳ್ತೀವಿ ನೋಡಿ..
ಚಿತ್ರ – ಝಂಡ್
ಬಿಡುಗಡೆ ದಿನಾಂಕ – ಮಾರ್ಚ್ 4, 2022
ಪಾತ್ರವರ್ಗ – ಅಮಿತಾಬ್ ಬಚ್ಚನ್, ಆಕಾಶ್ ಥೋಸರ್ ಮತ್ತು ರಿಂಕು ರಾಜಗುರು
ಪ್ರಕಾರ – ಕ್ರೀಡಾ ಸಾಮಾಜಿಕ ಕಾರ್ಯಕರ್ತ ವಿಜಯ್ ಬರ್ಸೆ ಅವರ ಜೀವನವನ್ನು ಆಧರಿಸಿದ ಚಲನಚಿತ್ರ..
ಚಿತ್ರ – ರಾಧೆ ಶ್ಯಾಮ್
ಬಿಡುಗಡೆ ದಿನಾಂಕ – ಮಾರ್ಚ್ 11, 2022
ಕಲಾವಿದರು – ಪೂಜಾ ಹೆಗ್ಡೆ ಮತ್ತು ಪ್ರಭಾಸ್
ಪ್ರಕಾರ – ರೋಮ್ಯಾಂಟಿಕ್ ಪ್ರೇಮ ಕಥೆ
ಚಿತ್ರ – ದಿ ಕಾಶ್ಮೀರ್ ಫೈಲ್ಸ್
ಬಿಡುಗಡೆ ದಿನಾಂಕ – ಮಾರ್ಚ್ 11, 2022
ಕಲಾವಿದರಾದ – ಮಿಥುನ್ ಚಕ್ರವರ್ತಿ ಮತ್ತು ಅನುಪಮ್ ಖೇರ್
ಪ್ರಕಾರ – ಕಾಶ್ಮೀರದ ಕುರಿತು ಥ್ರಿಲ್ಲರ್ ಸಿನಿಮಾ
ಚಿತ್ರ – ಜೇಮ್ಸ್
ಬಿಡುಗಡೆ ದಿನಾಂಕ – ಮಾರ್ಚ್ 17, 2022
ಕಲಾವಿದರಾದ – ಪುನೀತ್ ರಾಜ್ ಕುಮಾರ್, ಪ್ರಿಯಾ ಆನಂದ್
ಪ್ರಕಾರ – ಆಕ್ಷನ್ ಎಂಟರ್ಟೈನಮೆಂಟ್
ಚಿತ್ರ – ಬಚ್ಚನ್ ಪಾಂಡೆ
ಬಿಡುಗಡೆ ದಿನಾಂಕ – ಮಾರ್ಚ್ 18, 2022
ಪಾತ್ರವರ್ಗ – ಅಕ್ಷಯ್ ಕುಮಾರ್, ಜಾಕ್ವೆಲಿನ್ ಫರ್ನಾಂಡೀಸ್, ಕೃತಿ ಸನೋನ್, ಅರ್ಷದ್ ವಾರ್ಸಿ, ಪಂಕಜ್ ತ್ರಿಪಾಠಿ ಮತ್ತು ಪ್ರತೀಕ್ ಬಬ್ಬರ್
ಪ್ರಕಾರ – ಇದು ಆಕ್ಷನ್ ಮತ್ತು ಕಾಮಿಡಿ ಚಿತ್ರ
ಚಿತ್ರ – RRR
ಬಿಡುಗಡೆ ದಿನಾಂಕ – ಮಾರ್ಚ್ 25, 2022
ಪಾತ್ರವರ್ಗ – ಜೂನಿಯರ್ ಎನ್ಟಿಆರ್, ರಾಮ್ ಚರಣ್, ಆಲಿಯಾ ಭಟ್, ಒಲಿವಿಯಾ ಮೋರಿಸ್, ಅಜಯ್ ದೇವಗನ್ ಮತ್ತು ಶ್ರಿಯಾ ಸರನ್
ಪ್ರಕಾರ – ಬ್ರಿಟಿಷ್ ಕಾಲದ ಆಕ್ಷನ್ ಡ್ರಾಮ ಚಿತ್ರ