ಮಾರ್ಚ್ 11.11ಕ್ಕೆ ಅಪ್ಪು ಅಭಿಮಾನಿಗಳಿಗೆ ‘ಜೇಮ್ಸ್’ ತಂಡದಿಂದ ಬಿಗ್ ಗಿಫ್ಟ್
ಅಪ್ಪು ಅವರ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ 5 ಭಾಷೆಗಳಲ್ಲಿ ಮೂಡಿಬರುತ್ತಿದೆ.. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಈ ಪವರ್ ಪ್ಯಾಕ್ಡ್ ಸಿನಿಮಾ ರಿಲೀಸ್ ಗಾಗಿ ಕೇವಲ ಕರುನಾಡಿನ ಜನರಷ್ಟೇ ಅಲ್ದೇ ಪರಭಾಷಿಗರೂ ಕೂಡ ಕಾದುಕುಳಿತಿದ್ದಾರೆ.. ಅಪ್ಪು ಅಭಿಮಾನಿಗಳು ದಿನಗಣನೆ ಶುರು ಮಾಡಿದ್ದಾರೆ..
ಇತ್ತೀಚೆಗೆ ರಿಲೀಸ್ ಆದ ಜೇಮ್ಸ್ ಟೀಸರ್ ಕಾತರತೆಯನ್ನ ಹೆಚ್ಚಿಸಿದೆ… ಅಂದ್ಹಾಗೆ ಸಿನಿಮಾ ಮಾರ್ಚ್ 17 ಕ್ಕೆ ರಿಲೀಸ್ ಆಗುತ್ತಿದೆ… ಈ ನಡುವೆ ಸಿನಿಮಾತಂಡ ಭರ್ಜರಿ ಗುಡ್ ನ್ಯೂಸ್ ಒಂದನ್ನ ನೀಡಿದೆ.. ‘ಜೇಮ್ಸ್’ಚಿತ್ರದ ‘ಟ್ರೇಡ್ಮಾರ್ಕ್’ ಹಾಡಿನ ಲಿರಿಕಲ್ ವಿಡಿಯೋ ಮಾ.1ರಂದು ಬೆಳಗ್ಗೆ 11.11ಕ್ಕೆ ಬಿಡುಗಡೆ ಆಗಲಿದೆ. ಈ ವಿಷಯವನ್ನು ‘ಪಿಆರ್ಕೆ ಆಡಿಯೋ’ ಸೋಶಿಯಲ್ ಮೀಡಿಯಾ ಖಾತೆ ಮೂಲಕ ತಿಳಿಸಿದೆ. ಇದು “ಜೇಮ್ಸ್” ಚಿತ್ರದ ಪುನೀತ್ ರಾಜ್ ಕುಮಾರ್ ಇಂಟ್ರೋಡಕ್ಷನ್ ಸಾಂಗ್ ಆಗಿದೆ.
ಮಾರ್ಚ್ 1 ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ 5 ಭಾಷೆಗಳಲ್ಲಿ ಈ ಹಾಡನ್ನು ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಇನ್ನು ಈ ಹಾಡು ” ಟ್ರೇಡ್ ಮಾರ್ಕ್” ಅನ್ನೋ ಸಾಹಿತ್ಯದಿಂದ ಶುರುವಾಗಲಿದ್ದು ,ಚರಣ್ ರಾಜ್ ಸಂಗೀತಕ್ಕೆ ಚೇತನ್ ಸಾಹಿತ್ಯ ಬರೆದಿದ್ದಾರೆ.