ತಗ್ಗದ Natu Natu Song ಕ್ರೇಜ್…!
ನಿರ್ದೇಶಕ ರಾಜಮೌಳಿ, ಯಂಗ್ ಟೈಗರ್ ಎನ್ ಟಿಆರ್, ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಬಹುತಾರಾಗಣದ ಸಿನಿಮಾ ‘ಆರ್ ಆರ್ ಆರ್’. ಸಿನಿ ಪ್ರಿಯರಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಈ ಸಿನಿಮಾ ಮಾರ್ಚ್ 25 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದೆ.
ಅಂದಹಾಗೆ ಈ ಸಿನಿಮಾ ಈ ವರ್ಷದ ಆರಂಭದಲ್ಲಿ ಅಂದರೇ ಜನವಿ 7 ರಂದು ಬಿಡುಗಡೆಯಾಗಬೇಕಿತ್ತು. ಆದ್ರೆ ಕೊರೊನಾ ಸೇರಿದಂತೆ ನಾನಾ ಕಾರಣಗಳಿಂದಾಗಿ ಸಿನಿಮಾ ರಿಲೀಸ್ ಮುಂದೂಡುತ್ತಾ ಬರಲಾಗಿದೆ. ಇದಿಗ ಸಿನಿಮಾ ಮಾರ್ಚ್ 25ಕ್ಕೆ ರಿಲೀಸ್ ಆಗೋದು ಪಕ್ಕಾ ಆಗಿದೆ.
ಇನ್ನು ಸಿನಿಮಾದ ಪೋಸ್ಟರ್, ಟೀಸರ್, ಟ್ರೈಲರ್, ಹಾಡುಗಳು ಜನರು ಹೃದಯ ಗೆದ್ದಿವೆ. ಮುಖ್ಯವಾಗಿ ಸಿನಿಮಾದ ಹಾಡುಗಳು ಕೇಳುಗರ ಕಿವಿ ಇಂಪು ಮಾಡಿವೆ. ನಾಟು ನಾಟು ಹಾಡಿನಲ್ಲಿ ರಾಮ್ ಚರಣ್, ಎನ್ ಟಿಆರ್ ಒಟ್ಟಿಗೆ ಡ್ಯಾನ್ಸ್ ಮಾಡಿದ್ದು, ನಿರೀಕ್ಷೆ ಹೆಚ್ಚಿಸಿದೆ.
ಈ ಹಾಡಿನಲ್ಲಿ ಎನ್ಟಿಆರ್ ಮತ್ತು ರಾಮ್ ಚರಣ್ ಒಟ್ಟಿಗೆ ಹಾಕಿದ ಸ್ಟೆಪ್ಸ್ ದಾಖಲೆ ಸೃಷ್ಟಿಸಿದೆ. ಇದಲ್ಲದೆ, ವಿವಿಧ ಭಾಷೆಗಳಲ್ಲಿ ಅನೇಕ ಜನರು ಹಾಡನ್ನು ಅನುಕರಿಸಿದ್ದಾರೆ. ತಮ್ಮದೇ ಆದ ಶೈಲಿಯಲ್ಲಿ ಕವರ್ ಹಾಡುಗಳು, ರೀಲ್ಗಳು ಮತ್ತು ವೀಡಿಯೊಗಳನ್ನು ಮಾಡಿದ್ದಾರೆ. ಇನ್ನು ಯೂಟ್ಯೂಬ್ ನಲ್ಲಿ ಈ ಹಾಡು 200 ಮಿಲಿಯನ್ ವೀವ್ಸ್ ಕ್ಲಬ್ ಸೇರಿದೆ.
RRR Movie Natu Natu Song Got 200 Million Views