Tollywood : Pushpa 2 : ಉತ್ತರದ ಕಡೆ ಸುಕುಮಾರ್ ನಡೆ
ಅಲ್ಲು ಅರ್ಜುನ್ – ಸುಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿಬಂದ ಪುಷ್ಪ ಸಿನಿಮಾ ಭರ್ಜರಿ ಯಶಸ್ಸು ಸಾಧಿಸಿದೆ.
ಕಳೆದ ವರ್ಷ 17 ರಂದು ಬಿಡುಗಡೆಯಾದ ಪುಷ್ಪ ಸಿನಿಮಾಗೆ ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ, ದಿನ ಕಳೆದಂತೆ ಪುಷ್ಪ ಮೇನಿಯಾ ಜೋರಾಯ್ತು.
ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿ 300 ಕೋಟಿ ಕಲೆಕ್ಷನ್ ಕ್ಲಬ್ ಗೆ ಸೇರಿತು.0
ಮುಖ್ಯವಾಗಿ ಬಾಲಿವುಡ್ ನಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬಿ ಟೌನ್ ನಲ್ಲಿ ಭಾರಿ ಸದ್ದು ಮಾಡಿತ್ತು.
ಇದೀಗ ಸಿನಿಮಾದ ಸೀಕ್ವೆಲ್ ಶೂಟಿಂಗ್ ಆರಂಭಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.
ಮೊದಲ ಭಾಗದಲ್ಲಿ ಚಿತ್ರದ ಶೂಟಿಂಗ್ ಆಂಧ್ರದಲ್ಲಿ ಮಾಡಲಾಗಿತ್ತು.
ಆದ್ರೆ ಪುಷ್ಪ ಸಿನಿಮಾದ ಸೀಕ್ವೆಲ್ ಶೂಟಿಂಗ್ ಉತ್ತರದಲ್ಲಿ ಶೂಟ್ ಮಾಡಲು ನಿರ್ದೇಶಕ ಸುಕುಮಾರ್ ಪ್ಲಾನ್ ಮಾಡಿಕೊಂಡಿದ್ದರಂತೆ.
ಅಂದಹಾಗೆ ಪುಷ್ಪ 2 ಸಿನಿಮಾದಲ್ಲಿ ಬಾಲಿವುಡ್ ಮಂದಿ ಕೂಡ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.