ಅಜಿತ್ ವಲಿಮೈ ಸಿನಿಮಾದ ಕೆಲ ಸೀನ್ಸ್ ಕಟ್
ಫೆಬ್ರವರಿ 24 ರಂದು ರಿಲೀಸ್ ಆಗಿರುವ ತಮಿಳಿನ ಸ್ಟಾರ್ ನಟ ಅಜಿತ್ ಅಭಿನಯದ ಬಹುನಿರೀಕ್ಷೆಯ ವಲಿಮೈ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. .. ಆದ್ರೆ ಇದೀಗ ಸಿನಿಮಾದ ಕೆಲ ದೃಶ್ಯಗಳಿಗೆ ಕತ್ತರಿ ಬೀಳಲಿದೆ ಎನ್ನಲಾಗ್ತಿದೆ..
ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.. ಅದರಲ್ಲಿಯೂ ಸಿನಿಮಾದಲ್ಲಿನ ಕೌಟುಂಬಿಕ ಸೆಂಟಿಮೆಂಟ್ ದೃಶ್ಯಗಳು ತೀರಾ ಡ್ರಾಮ್ಯಾಟಿಕ್ ಆಗಿದೆ ಎನ್ನಲಾಗ್ತಿದು ಇದು ಹಲವರಿಗೆ ಇಷ್ಟವಾಗಿಲ್ಲ.. ಈ ದೃಶ್ಯಗಳು ಅನವಶ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗಾಗಿ ಈ ದೃಶ್ಯಗಳನ್ನ ಟ್ರಿಮ್ ಮಾಡುವ ತೀರ್ಮಾನ ಮಾಡಿದ್ಯಂತೆ ಸಿನಿಮಾತಂಡ.
ಸಿನಿಮಾದ ದ್ವಿತೀಯಾರ್ಧದಲ್ಲಿ ಕೆಲವು ದೃಶ್ಯಗಳನ್ನ ತೆಗೆದುಹಾಕಲು ನಿರ್ದೇಶಕ ಎಚ್ ವಿನೋತ್, ನಿರ್ಮಾಪಕ ಬೋನಿ ಕಪೂರ್ ಹಾಗೂ ನಟ ಅಜಿತ್ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ವಲಿಮೈ ತಮಿಳು ಆವೃತ್ತಿಯ 12 ನಿಮಿಷದ ದೃಶ್ಯಕ್ಕೆ ಕತ್ತರಿ ಹಾಕಿದರೆ ಹಿಂದಿಯ 15 ನಿಮಿಷಕ್ಕೆ ಕತ್ತರಿ ಹಾಕಲಿದೆಯಂತೆ ಚಿತ್ರತಂಡ.
ಬರಿ ದೃಶ್ಯಗಳು ಅಷ್ಟೇ ಅಲ್ದೇ ‘ನಾಂಗಾ ವಾರ ಮಾರಿ’ ಎಂಬ ಹಾಡನ್ನು ತೆಗೆಯಲು ಮೇಕರ್ಸ್ ನಿರ್ಧಾರ ಮಾಡಿದ್ದಾರೆ ಎನ್ನಲಾಗ್ತಿದೆ.. ಈ ಮೂಲಕ ಒಟ್ಟು ಸಿನಿಮಾದ ಅವಧಿಯನ್ನು 18 ನಿಮಿಷ ಕಡಿಮೆ ಮಾಡಲಾಗುತ್ತಿದೆ. ಎಡಿಟ್ ಮಾಡಿರುವ ಸಿನಿಮಾ ಶನಿವಾರದಿಂದ ವೀಕ್ಷಣೆಗೆ ಲಭ್ಯವಾಗಲಿದೆ.