Bheemla nayak | ಕರ್ನಾಟಕದಲ್ಲಿ ಭೀಮ್ಲಾನಾಯಕ್ ಕಲೆಕ್ಷನ್ ಹೇಗಿದೆ..?
ಟಾಲಿವುಡ್ ನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಭೀಮ್ಲಾ ನಾಯಕ್ ಸಿನಿಮಾ ಶುಕ್ರವಾರ ರಿಲೀಸ್ ಆಗಿದ್ದು, ಭರ್ಜರಿ ಸೆಸ್ಪಾನ್ಸ್ ಪಡೆದುಕೊಂಡಿದೆ.
ಪವನ್ ಕಲ್ಯಾಣ್ – ರಾಣಾ ಒಟ್ಟಾಗಿ ನಟಿಸಿದ್ದ ಕಾರಣಕ್ಕಾಗಿ ಹಾಗೂ ವಕೀಲ್ ಸಾಬ್ ಸಿನಿಮಾದ ಬಳಿಕ ತೆರರೆ ಮೇಲೆ ಬಂದ ಪವನ್ ಸಿನಿಮಾ ಆಗಿರೋದ್ರಿಂದ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು.
ಆ ನಿರೀಕ್ಷೆಗಳನ್ನ ತಣಿಸುತ್ತಾ ಶುಕ್ರವಾರ ರಿಲೀಸ್ ಆದ ಸಿನಿಮಾ ನೋಡುಗರ ದಿಲ್ ಕದ್ದಿದೆ. ಆಕ್ಷನ್, ಮಾಸ್ ಎಂಟರ್ ಟೈನರ್ ಆಗಿ ಸಿನಿಮಾ ಪವರ್ ಪ್ಯಾಕ್ಡ್ ಹಿಡ್ ಆಗಿದೆ.
ಇನ್ನು ಈ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿದ್ದು, ಗಲ್ಲಾ ಪೆಟ್ಟಿಗೆಯಲ್ಲೂ ಭಾರಿ ಕಮಾಯಿ ಮಾಡಿದೆ. ‘ಭೀಮ್ಲಾ ನಾಯಕ್’ ಚಿತ್ರ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಬಾಕ್ಸಾಫೀಸ್ ಚಿಂದಿ ಮಾಡಿದೆ.
ತೆಲಂಗಾಣದಲ್ಲಿ ಪವನ್ ಕಲ್ಯಾಣ್ ಚಿತ್ರ ಉತ್ತಮ ಗಳಿಕೆ ಕಂಡಿದೆ.
ವಿಶ್ವಾದಾದ್ಯಂತ ರಿಲೀಸ್ ಆದ ‘ಭೀಮ್ಲಾ ನಾಯಕ್’ ಸಿನಿಮಾ ಆಂಧ್ರ ಮತ್ತು ತೆಲಂಗಾಣ ಸೇರಿ ಒಟ್ಟು ಮೊದಲ ದಿನ 26.42 ಕೋಟಿ ರೂ. ಗಳಿಕೆ ಮಾಡಿದೆ. ಈ ಮೂಲಕ ಗಲ್ಲಾ ಪೆಟ್ಟಿಗೆಯಲ್ಲಿ ಹೊಸ ದಾಖಲೆ ಮಾಡಿದೆ.
ಇತ್ತ ಕರ್ನಾಟಕದಲ್ಲೂ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ಪ್ರಿಯರು ಭೀಮ್ಲಾ ನಾಯಕ್ ಸಿನಿಮಾಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡಿದ್ದಾರೆ.
ರಾಜ್ಯದಲ್ಲಿ ಭೀಮ್ಲಾ ನಾಯಕ್ ಸಿನಿಮಾ ಮೊದಲ ದಿನ ಮೂರು ಕೋಟಿಗೂ ಅಧಿಕ ರುಪಾಯಿ ಕಲೆಕ್ಷನ್ ಮಾಡಿದೆ.
ಓವರ್ಸೀಸ್ನಲ್ಲಿ ಚಿತ್ರ 6.85 ಕೋಟಿ ಗಳಿಕೆ ಮಾಡಿದೆ. ಹಾಗಾಗಿ ಒಟ್ಟಾರೆ ಭೀಮ್ಲಾ ನಾಯಕ್ ಸಿನಿಮಾ ಮೊದಲ ಕಲೆಕ್ಷನ್ 36.73 ಕೋಟಿ ಆಗಿದೆ.
ಇದೇ ಟ್ರೆಂಡ್ ಶನಿವಾರವೂ ಮುಂದುವರೆದಿದೆ. ಹೀಗಾಗಿ ಕೇವಲ ಎರಡನೇ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ 50 ಕೋಟಿ ಮೀರಿದೆ ಎಂದು ಚಿತ್ರತಂಡ ತಿಳಿಸಿದೆ.
bheemla-nayak-box office collection in karnataka