Bheemla nayak | ಭೀಮ್ಲಾ ನಾಯಕ್ ಪರ ನಿಂತ ಮಾಜಿ ಸಿಎಂ
ಪವರ್ ಸ್ಟಾರ್ ಅಂದ್ರೆ ಕ್ರೇಜ್…! ಕ್ರೇಜ್ ಅಂದ್ರೆ ಪವರ್ ಸ್ಟಾರ್..!! ಸಾಮಾನ್ಯವಾಗಿ ಹಬ್ಬಗಳಿಗೆ ಸಿನಿಮಾಗಳು ರಿಲೀಸ್ ಆಗುತ್ತವೆ.
ಆದ್ರೆ ಪವನ್ ಕಲ್ಯಾಣ್ ಸಿನಿಮಾ ರಿಲೀಸ್ ಆದ್ರೆ ಅಲ್ಲಿ ಹಬ್ಬ ಶುರುವಾಗುತ್ತೆ. ಸಿನಿಮಾದ ರಿಸಲ್ಟ್ ಹೇಗೆ ಇರಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾತ್ರ ಸದ್ದು ಮಾಡುತ್ತೆ.
ಹೀಗಾಗಿಯೇ ಪವನ್ ಕಲ್ಯಾಣ್ ರ ಪ್ರತಿ ಸಿನಿಮಾದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರ್ತಾರೆ.
ಇದೀಗ ಪವನ್ ಕಲ್ಯಾಣ್ ಮತ್ತು ರಾಣಾ ಅಭಿನಯದ ಭೀಮ್ಲಾನಾಯಕ್ ಸಿನಿಮಾ ರಿಲೀಸ್ ಆಗಿದ್ದು, ಬ್ಲಾಕ್ ಬ್ಲಸ್ಟರ್ ಟಾಕ್ ಸಂಪಾದಿಸಿದೆ.
ಸಿನಿಮಾ ಸೂಪರ್ ಹಿಟ್ ಅನ್ನೋ ಮಾತುಗಳು ಕೇಳಿಬರುತ್ತಿವೆ. ಆದ್ರೆ ಆಂಧ್ರ ಪ್ರದೇಶದ ಸರ್ಕಾರ ಭೀಮ್ಲಾ ನಾಯಕ್ ಸಿನಿಮಾವನ್ನು ಟಾರ್ಗೆಟ್ ಮಾಡುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ.
ಜಗನ್ ಮೋಹನ್ ರೆಡ್ಡಿ ಸರ್ಕಾರ ಸುಖಾಸುಮ್ಮನೆ ಸಿನಿಮಾ ಥಿಯೇಟರ್ ಗಳನ್ನು ಮುಚ್ಚಿಸಿ ಸಿನಿಮಾ ಪ್ರದರ್ಶನಕ್ಕೆ ಅಡ್ಡಿ ಮಾಡುತ್ತಿದೆ ಎಂದು ಪವನ್ ಅಭಿಮಾನಿಗಳು ಆರೋಪಿಸುತ್ತಿದ್ದಾರೆ.
ಇದೀಗ ಈ ವಿವಾದದ ಬಗ್ಗೆ ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಜಗನ್ ವಿರುದ್ಧ ಕಿಡಿಕಾಡಿರಿದ್ದಾರೆ.
‘ರಾಜ್ಯದಲ್ಲಿ ಯಾವ ಸಂಸ್ಥೆಯನ್ನೂ, ರಂಗವನ್ನೂ ಉಳಿಯಲು ಬಿಡುವಂತೆ ಕಾಣುತ್ತಿಲ್ಲ. ಸಿಎಂ ಜಗನ್ ಮೋಹನ್ ರೆಡ್ಡಿ. ಸಿನಿಮಾ ರಂಗವನ್ನು ತೀವ್ರವಾಗಿ ಬಾಧಿಸುತ್ತಿದ್ದಾರೆ.
‘ಭೀಮ್ಲಾ ನಾಯಕ್’ ಸಿನಿಮಾ ವಿಷಯಕ್ಕೆ ಸಂಬಂಧಿಸಿದಂತೆ ಜಗನ್ ನಡೆದುಕೊಳ್ಳುತ್ತಿರುವ ರೀತಿ ಉಗ್ರವಾದಿತನವನ್ನು ತೋರುತ್ತಿದೆ” ಎಂದಿದ್ದಾರೆ.
Bheemla nayak Film chandra-babu-naidu-slammed-cm-jagan