Megastar | ಚಿರಂಜೀವಿ ಟಾಲಿವುಡ್ ನ ಬಿಗ್ ಬಾಸ್.. ನಟ ಶ್ರೀಕಾಂತ್
ಟಾಲಿವುಡ್ ಇಂಡಸ್ಟ್ರೀ ಬಿಗ್ ಬಾಸ್ ಯಾರು ಎಂಬುದು ಸದ್ಯ ಹಾಟ್ ಪಾಪಿಕ್ ಆಗಿದೆ.
ಈ ನಡುವೆ ಹೀರೋ ಶ್ರೀಕಾಂತ್ ಇಂಡಸ್ಟ್ರಿಯ ಬಿಗ್ ಬಾಸ್ ಯಾರು ಎಂಬ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.
ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶ್ರೀಕಾಂತ್ ಹೇಳಿದ್ದು.. ನನ್ನ ಪ್ರಕಾರ ತೆಲುಗು ಇಂಡಸ್ಟ್ರೀಗೆ ಚಿರಂಜೀವಿ ಅವರೇ ದೊಡ್ಡವರು.
ಯಾಕೆಂದರೆ ‘ಚಿರಂಜೀವಿ ಬಹಳ ದಿನಗಳಿಂದ ಸಾಕಷ್ಟು ಜನರಿಗೆ ಸಹಾಯ ಮಾಡುತ್ತಿದ್ದಾರೆ.
ಇಂಡಸ್ಟ್ರಿಯಲ್ಲಿ ಯಾರಿಗೆ ಏನೇ ಸಮಸ್ಯೆ ಇದ್ದರೂ ಮೊದಲು ಚಿರಂಜೀವಿ ಭೇಟಿಯಾಗುತ್ತಾರೆ.
ಅವರನ್ನ ಭೇಟಿಯಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾರೆ. ಜೊತೆಗೆ ಚಿರಂಜೀವಿ ಅವರೂ ಕೂಡ ಬೇಗ ಸ್ಪಂದಿಸುತ್ತಾರೆ.
ದಾಸರಿನಾರಾಯಣ ಅವರ ನಂತರ ಇಂಡಸ್ಟ್ರಿ ಹಿರಿಯಣ್ಣ ಮೆಗಾಸ್ಟಾರ್ ಚಿರಜೀವಿ ಎಂದು ಶ್ರೀಕಾಂತ್ ತಿಳಿಸಿದರು.
ಅಲ್ಲದೇ ಟಿಕೆಟ್ ಬೆಲೆ ವಿಚಾರದಲ್ಲಿ ಸರ್ಕಾರ ಮೊದಲು ಆಹ್ವಾನಿಸಿದ್ದು ಮೆಗಾಸ್ಟಾರ್ ಚಿರಂಜೀವಿ ಅವರನ್ನೇ.
ಇದನ್ನ ನೋಡಿದ್ರೆ ಗೊತ್ತಾಗುತ್ತೆ ಇಂಡಸ್ಟ್ರೀಗೆ ಯಾರು ದೊಡ್ಡವರು ಅಂತಾ ಶ್ರೀಕಾಂತ್ ವಿವರಿಸಿದ್ದಾರೆ.
hero-srikanth tollywood megastar chiranjeevi