Salman Khan | ಸಲ್ಮಾನ್ ಖಾನ್ ಅವರನ್ನ ಕಾಡಿದ್ದ ಟ್ರೈಜಿಮಿನಲ್ ನ್ಯೂರಾಲ್ಜಿಯಾ
ನಟ ಸಲ್ಮಾನ್ ಖಾನ್ ಕಟ್ಟುಮಸ್ತಿನ ದೇಹದೊಂದಿಗೆ ಸದಾ ಫುಲ್ ಫಿಟ್ ಅಂಡ್ ಫೈನ್ ಆಗಿರ್ತಾರೆ.
ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನ ರಂಜಿಸುತ್ತಿರುವ ಸಲ್ಲು ಸೋಶಿಯಲ್ ಮೀಡಿಯಾದಲ್ಲೂ ಸಾಕಷ್ಟು ಆಕ್ಟೀವ್ ಆಗಿರುತ್ತಾರೆ.
ಈ ಮಧ್ಯೆ ಸಂದರ್ಶನವೊಂದರಲ್ಲಿ ಸಲ್ಮಾನ್ ಖಾನ್ ತಾವು ನರರೋಗದಿಂದ ಬಳಲುತ್ತಿದ್ದ ಬಗ್ಗೆ ಮಾಹಿತಿ ಅಂಚಿಕೊಂಡಿದ್ದಾರೆ.
ಅವರೇ ಹೇಳಿಕೊಳ್ಳುವಂತೆ ಸಲ್ಲು ಟ್ರೈಜಿಮಿನಲ್ ನ್ಯೂರಾಲ್ಜಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದರಂತೆ.
ಈ ಕಾಯಿಲೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರಂತೆ.
ಟ್ರೈಜಿಮಿನಲ್ ನ್ಯೂರಾಲ್ಜಿಯಾ ಕಾಯಿಲೆ ಅಂದ್ರೆ ಏನು..?
ಈ ಕಾಯಿಲೆ ಬಂದರೇ ಅತಿಯಾದ ನೋವು ಕಾಣಿಸಿಕೊಳ್ಳುತ್ತದೆ. ‘ಟ್ರೈಜಿಮಿನಲ್ ನ್ಯೂರಾಲ್ಜಿಯಾ‘ ರೋಗ ಮುಖದ ನರದಲ್ಲಿ ಕಂಡುಬರುತ್ತದೆ.
ತಲೆ, ದವಡೆ ಮುಂತಾದ ಮುಖದ ಅನೇಕ ಭಾಗಗಳಲ್ಲಿ ಸಾಕಷ್ಟು ನೋವು ಕಾಣಿಸಿಕೊಳ್ಳುತ್ತದೆ.
ಈ ಕಾಯಿಲೆ, ಮುಖದ ಮೇಲೆ ಭಯಾನಕ ಚುಚ್ಚುವಿಕೆಯ ಭಾವನೆ ಇರುತ್ತದೆ.
ಈ ರೋಗವನ್ನು ನಿಭಾಯಿಸುವುದು ಕಷ್ಟಕರ. ಉಂಟಾಗುವ ನೋವು ಮತ್ತು ಚುಚ್ಚುವಿಕೆ ಕೆಲವು ವಾರಗಳು ಅಥವಾ ತಿಂಗಳುಗಳವರೆಗೆ ಇರುತ್ತದೆ.
Salman Khan Suffers From Trigeminal Neuralgia