ಸಮಂತಾ ಸಿನಿ ಜರ್ನಿ ಶುರುವಾಗಿ 12 ವರ್ಷ – ಶುಭಾಶಯಗಳ ಮಹಾಪೂರ
ಇಂದಿಗೆ ಸರಿಯಾಗಿ 12 ವರ್ಷಗಳ ಹಿಂದೆ, ಏ ಮಾಯ ಚೇಸಾವೆ ಚಿತ್ರದ ಮೂಲಕ ಕ್ಯಾಮೆರಾ ಎದುರಿಸಿದ್ದ ನಟಿ ಇಂದು ಟಾಲಿವುಡ್ ಬಹು ಬೇಡಿಕೆಯ ನಟಿ. ಅದು ಬೇರಾರು ಅಲ್ಲ ಸಮಂತ ರುತು ಪ್ರಭು. ಏಮ್ ಮಾಯೆ ಚೇಸಾವೆ ಚಿತ್ರದಿಂದ ಪರಿಚಿತರಾದ ನಟಿ ಇಲ್ಲಿಯವರೆ ಹಿಂತಿರುಗಿ ನೋಡಿಯೇ ಇಲ್ಲ.
ಟಾಲಿವುಡ್ನಲ್ಲಿ ಮಾತ್ರವಲ್ಲದೆ ಸೌತ್ ಸಿನಿಮದಲ್ಲೆ ಅತ್ಯಂತ ಬ್ಯಾಂಕಬಲ್ ನಟಿಯಾಗಿ ತನಗಾಗಿ ಒಂದು ಸ್ಥಾನವನ್ನು ಸ್ಥಾಪಿಸಿದರು. ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು 12 ವರ್ಷ ಸಂದಿರುವ ಈ ಸಮಯದಲ್ಲಿ ಸಮಂತ ಸಂತೋಷದಲ್ಲಿ ಮುಳುಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮುದ್ದಾದ ಚಿತ್ರದೊಂದಿಗೆ ಕೃತಜ್ಞತೆಯ ಟಿಪ್ಪಣಿಯನ್ನು ಬರೆದಿದ್ದಾರೆ.
Today marks my 12th year in the Film Industry. It’s been 12 years of memories that revolve around Lights, Camera, action and incomparable moments. I am filled with gratitude for having had this blessed journey and the best, most loyal fans in the world ! pic.twitter.com/2kVjAenIQu
— Samantha (@Samanthaprabhu2) February 26, 2022
ಫೋಟೋ ಜೊತೆಗೆ ಇಂದು ಬೆಳಗ್ಗೆ ಎದ್ದ ಕೂಡಲೇ ನಾನು ಚಿತ್ರರಂಗದಲ್ಲಿ 12 ವರ್ಷ ಪೂರೈಸಿರುವ ವಿಚಾರ ನೆನೆಪಾಯಿತು. ಲೈಟ್ಸ್, ಕ್ಯಾಮೆರಾ, ಆ್ಯಕ್ಷನ್ ಮತ್ತು ಮರೆಯಲಾದ 12 ವರ್ಷಗಳ ಕ್ಷಣಗಳು ನನ್ನನ್ನು ಸತ್ತುವರೆಯಿತು. ಈ ಜರ್ನಿಯಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಪ್ರೀತಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಸಿನಿಮಾದ ಬಗೆಗಿರುವ ನನ್ನ ಪ್ರೀತಿ ಎಂದಿಗೂ ಕೊನೆಯಾಗುವುದಿಲ್ಲ ಮತ್ತು ದಿನದಿಂದ ದಿನಕ್ಕೆ ಪ್ರೀತಿ ಹೆಚ್ಚಾಗುತ್ತಲೇ ಇರುತ್ತದೆ ಎಂದು ಆಶಿಸುತ್ತೇನೆ ಎಂದು ಇನ್ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.
ಸಮಂತ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಮತ್ತು ಉದ್ಯಮದ ಸಹ- ನಟ ನಟಿಯರು ಸಮಂತಾಗೆ ಶುಭ ಕೋರಿದ್ದಾರೆ. ಕಾಜಲ್ ಅಗರ್ವಾಲ್ ಎಸ್ಎಸ್ ಥಮನ್ ಅನುಪಮ ಪರಮೇಶ್ವರನ್ , ರಾಶಿ ಖನ್ನ ಸೇರಿದಂತೆ ವರೆಗೆ ಅನೇಕ ಸೆಲೆಬ್ರಿಟಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ.
ಸಮಂತ ಸದ್ಯಕ್ಕೆ ಕಾಥುವಾಕುಲ ರೆಂಡು ಕಾದಲ್ ಎಂಬ ತಮಿಳು ಸಿನಿಮಾದಲ್ಲಿ ವಿಜಯ್ ಸೇತುಪತಿಯೊಂದಿಗೆ ನಟಿಸಿದ್ದಾರೆ. ವಿಘ್ನೇಶ್ ಶಿವನ್ ನಿರ್ದೇಶನದ ಈ ಚಿತ್ರದಲ್ಲಿ ನಟಿ ನಯನತಾರ ಕೂಡ ಅಭಿನಯಿಸಿದ್ದಾರೆ.