Ram | ರಾಮ್ ಚರಣ್, ಶಂಕರ್ ಸಿನಿಮಾದಲ್ಲಿ ಸೂರ್ಯ ವಿಲನ್..!
ಸ್ಟಾರ್ ನಿರ್ದೇಶಕ ನಶಂಕರ್, ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಚಿತ್ರ ಆರ್ ಸಿ 15, ಈಗ ಟಾಲಿವುಡ್ ನಲ್ಲಿ ಟಾಕ್ ಆಫ್ ದಿ ಟೌನ್ ಆಗಿದೆ.
ಯಾಕಂದರೇ ರಾಮ್ ಚರಣ್ ಚಿತ್ರದಲ್ಲಿ ಮಾಜಿ ಸ್ಟಾರ್ ಡೈರೆಕ್ಟರ್ ಎಸ್ ಜೆ ಸೂರ್ಯ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸೂರ್ಯ ಅವರು ಸ್ಪೈಡರ್, ಅದಿರಿಂದಿ, ಮನಾಡು ಚಿತ್ರಗಳಲ್ಲಿ ಹೀರೋಯಿಸಂ ಜೊತೆಗೆ ವಿಲನಿಸಂ ಕೂಡ ತೋರಿಸಿದ್ದಾರೆ.
ವಿಲನ್ ಪಾತ್ರದಲ್ಲಿ ಸೂರ್ಯ ಅವರು ಪ್ರತ್ಯೇಕವಾಗಿ ನಟಿಸೋದು ಎಲ್ಲರಿಗೂ ಗೊತ್ತೇ ಇದೆ.
ಹೀಗಾಗಿ ಚರ್ರಿ ಸಿನಿಮಾದಲ್ಲಿ ಅವರು ವಿಲನ್ ಆಗಲಿದ್ದಾರೆ ಅನ್ನೋದು ಮೆಗಾ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡುತ್ತಿದೆ.
ಅಂದಹಾಗೆ ಈ ಸಿನಿಮಾದ ಕಥೆ ಕೇಳಿರುವ ಸೂರ್ಯ ಅವರು ಈಗಾಗಲೇ ವಿಲನ್ ಪಾತ್ರದಲ್ಲಿ ನಟಿಸಲು ಓಕೆ ಅಂದಿದ್ದಾರಂತೆ.
ಇನ್ನು ಶಂಕರ್ ಮೇಕಿಂಗ್ ನಲ್ಲಿ ರಾಮ್ ಚರಣ್ ನಾಯಕನಾಗಿ ನಟಿಸುತ್ತಿರುವ ಭಾರೀ ಮಹತ್ವಾಕಾಂಕ್ಷೆಯ ಚಿತ್ರವಾಗಿದೆ.
ಈ ಚಿತ್ರದಲ್ಲಿ ಎಸ್.ಜೆ.ಸೂರ್ಯ ವಿಲನ್ ಪಾತ್ರದಲ್ಲಿ ನಟಿಸುತ್ತಿರುವುದು ಕುತೂಹಲ ಮೂಡಿಸಿದೆ.
sj-surya-play-villain-role-ram-charan-movie