ರಾಧೇ ಶ್ಯಾಮ್ ಅಡ್ಡಾದಲ್ಲಿ ಕಾಣಿಸಿಕೊಂಡ ಸೆಂಚುರಿ ಸ್ಟಾರ್ ಶಿವಣ್ಣ….
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ರಾಧೇ ಶ್ಯಾಮ್ ಚಿತ್ರ ತೆರೆಗೆ ಬರಲು ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದೆ. ಪೂಜಾ ಹೆಗ್ಡೆ ಮತ್ತು ಪ್ರಭಾಸ್ ಅಭಿನಯದ ರೊಮ್ಯಾಂಟಿಕ್ ಪ್ರೇಮ ಕಥೆಯನ್ನ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ಇದೀಗ ರಾಧೇ ಶ್ಯಾಮ್ ತಂಡದಿಂದ ಹೊಸ ಅಪ್ಡೇಟ್ ಬಂದಿದೆ. ಸ್ಯಾಂಡಲ್ವುಡ್ ನ ಸೆಂಚುರಿ ಸ್ಟಾರ್ ಶಿವಣ್ಣ ರಾಧೇಶ್ಯಾಮ್ ಬಳಗವನ್ನ ಕೂಡಿಕೊಂಡಿದ್ದಾರೆ. ಈ ಬಗ್ಗೆ ಚಿತ್ರದ ನಿರ್ಮಾಪಕರೇ ಸ್ವತಃ ಮಾಹಿತಿ ನೀಡಿದ್ದಾರೆ.
ಶಿವರಾಜ್ ಕುಮಾರ್ ಮಾತ್ರವಲ್ಲದೇ ಎಸ್ ಎಸ್ ರಾಜಮೌಳಿ, ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್, ಕೂಡ ರಾಧೇ ಶ್ಯಾಮ್ ಚಿತ್ರತಂಡ ಸೇರಿಕೊಂಡಿದ್ದಾರೆ. ಇವರೆಲ್ಲ ಸಿನಿಮಾದಲ್ಲಿ ಏನ್ ಮಾಡ್ತಾರೆ ಅಂತ ಕೆಳ್ತೀರಾ ?? ಇಲ್ಲಿದೆ ಉತ್ತರ..
ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತವ ಚಿತ್ರ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಐದು ಭಾಷೆಗಳಲ್ಲಿ ಬರುವ ಸಿನಿಮಾದ ನಿರೂಪಣಾ ಧ್ವನಿಯನ್ನ ಆಯಾ ಚಿತ್ರರಂಗದ ಘಟಾನುಘಟಿಗಳು ವಹಿಸಿಕೊಂಡಿದ್ದಾರೆ.
ರಾಧೇ ಶ್ಯಾಮ್ ಚಿತ್ರದ ಕನ್ನಡ ಅವತರಣಿಕೆಯ ಸಿನಿಮಾಗೆ ನಮ್ಮ ಶಿವಣ್ಣ ನಿರೂಪಣಾ ಧ್ವನಿಯನ್ನ ನೀಡುತ್ತಿದ್ದಾರೆ. ತೆಲುಗಿನಲ್ಲಿ ರಾಜಮೌಳಿ ಮತ್ತು ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರು ಆಯಾ ಭಾಷೆಗೆ ಧ್ವನಿ ನೀಡಿದ್ದಾರೆ. ಈ ಮೂಲಕ ರಾಧೇ ಶ್ಯಾಮ್ ಚಿತ್ರಕ್ಕೆ ಇನ್ನಷ್ಟು ಬೆರಗು ಮೂಡಿಸಲು ಘಟಾನುಘಟಿಗಳು ರಾಧೇ ಶ್ಯಾಮ್ ನ ಭಾಗವಾಗಿದ್ದಾರೆ..
https://twitter.com/RadheShyamFilm/status/1497867973968936961
ನಿಮ್ಮ ಧ್ವನಿಯಿಂದ ಈ ರೊಮ್ಯಾಂಟಿಕ್ ಕಥೆಯಿಂದ ಇನ್ನಷ್ಟು ವಿಶೇಷವಾಗಿಸಿದ್ದಕ್ಕೆ ಧನ್ಯವಾದಗಳು ಎಂದು ಶಿವರಾಜ್ ಕುಮಾರ್ ರಾಜಮೌಳಿ ಪೃಥ್ವಿರಾಜ್ ಸುಕುಮಾರನ್ ಅವರಿಗೆ ರಾಧೆ ಶ್ಯಾಮ್ ಚಿತ್ರದ ನಿರ್ಮಾಪಕ ಸಂಸ್ಥೆ ಧನ್ಯವಾದ ತಿಳಿಸಿದೆ.
‘ರಾಧೆ ಶ್ಯಾಮ್’ ಹಿಂದಿ ವರ್ಷನ್ಗೆ ಬಾಲಿವುಡ್ನ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಹಿನ್ನೆಲೆ ಧ್ವನಿ ನೀಡಿದ್ದಾರೆ. ಆ ಕಾರಣದಿಂದ ಹಿಂದಿ ಪ್ರೇಕ್ಷಕರಲ್ಲೂ ನಿರೀಕ್ಷೆ ಹೆಚ್ಚುವಂತಾಗಿದೆ. ಮಾ.11ರಂದು ವಿಶ್ವಾದ್ಯಂತ ಈ ಸಿನಿಮಾ ಬಿಡುಗಡೆ ಆಗಲಿದೆ. ರಾಧಾಕೃಷ್ಣ ಕುಮಾರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್ಗೆ ಸಿನಿಪ್ರಿಯರಿಂದ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ಕಣ್ತಂಬಿಕೊಳ್ಳಲು ಫ್ಯಾನ್ಸ್ ಕಾಯುತ್ತಿದ್ದಾರೆ.