Vikranth Rona : ವಿಕ್ರಾಂತ್ ರೋಣ 2 ಬರುತ್ತಾ..??
ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ ವಿಕ್ರಾಂತ್ ರೋಣ ಬಗ್ಗೆ ಮತ್ತೊಂದು ಸೆನ್ಷೇಷನಲ್ ಸುದ್ದಿ ಹರಿದಾಡ್ತಿದೆ.. ಅದೇನೆಂದ್ರೆ ಬಾಹುಬಲಿ , ಕೆಜಿಎಫ್ ಪುಷ್ಪ , ಮಾದರಿಯಲ್ಲೇ ಈ ಸಿನಿಮಾದ ಪಾರ್ಟ್ 2 ಬರಬಹುದು ಎನ್ನಲಾಗ್ತಿದೆ.
ಕಿಚ್ಚ ಸುದೀಪ್ ಮತ್ತು ವಿಕ್ರಾಂತ್ ರೋಣ ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ ಮತ್ತೊಂದು ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಈ ಹಿಂದೆಯೇ ಖಚಿತವಾಗಿತ್ತು. ಆದ್ರೆ ಯಾವುದು ಅನ್ನೋದು ಖಾತ್ರಯಾಗಿಲ್ಲ.. ಆದ್ರೆ ಇದೀಗ ಹರಿದಾಡ್ತಿರುವ ಸುದ್ದಿ ನೋಡಿದ್ರೆ ,, ಇವರಿಬ್ಬರ ಕಾಂಬಿನೇಷನ್ ನಲ್ಲಿ ವಿಕ್ರಾಂತ್ ರೋಣ 2 ಬರಬಹುದು ಎನ್ನಲಾಗ್ತಿದೆ.. ಹಾಗೆ ನೋಡಿದ್ರೆ ಮುಂದೆ ಸುದೀಪ್ ಅವರು ಬಿಲ್ಲ ರಂಗ ಭಾಷಾ ಸಿನಿಮಾದಲ್ಲಿ ನಟಿಸಲಿದ್ದಾರೆ.. ಇನ್ನೂ ಈ ಸಿನಿಮಾ ವಿಕ್ರಾಂತ್ ರೋಣಾಗಿಂತಲೂ ಮುಂಚೆಯೇ ಸೆಟ್ಟೇರಬೇಕಿತ್ತು.. ಆದ್ರೆ ವಿಕ್ರಾಂತ್ ರೋಣ ಮೊದಲು ಶುರುವಾಯಿತು..
ಅಂದ್ಹಾಗೆ ಇತ್ತೀಚೆಗೆ ಸುದೀಪ್ ಅವರ ಬಳಿ ನಟ ಪ್ರದೀಪ್ ಅವರು ಮುಂದಿನ ಸಿನಿಮಾದ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಾರೆ. ಕಿಚ್ಚ ಸುದೀಪ್ ಅವರು ತಮ್ಮ ಮುಂದಿನ ಸಿನಿಮಾ ಯಾವುದು ಅಅಂತ ಹೇಳ್ದೇ , ಸಿನಿಮಾ ಮಾಡೋದಾಗಿ ಟ್ವೀಟ್ ಮಾಡಿದ್ದರು.. ಆ ಬಗ್ಗೆ ಪ್ರಶ್ನಿಸಿರುವ ಪ್ರದೀಪ್ ವಿಕ್ರಾಂತ್ ರೋಣ 2 ಅಥವಾ ಬಿಲ್ಲ ರಂಗ ಬಾಷಾ ನಿಮ್ಮ ಮುಂದಿನ ಸಿನಿಮಾ ಯಾವುದು ಅಂತ ಕೇಳಿದ್ದಾರೆ. ಆದ್ರೆ ಇದಕ್ಕೆ ಸೂಕ್ತ ುತ್ತರ ಸಿಕ್ಕಿಲ್ಲವಾದ್ರೂ ವಿಕ್ರಾಂತ್ ರೋಣ 2 ಬರಬಹುದಾ ಎಂಬ ಕುತೂಹಲ ಹುಟ್ಟಿದೆ..