ಮಹಾಶಿವರಾತ್ರಿಗೆ ಬಿಗ್ ಅಪ್ಡೇಟ್ ಕೊಟ್ಟ ಆದಿಪುರುಷ್ ಚಿತ್ರತಂಡ….
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ಧಿ ಕೊಟ್ಟಿದ್ದಾರೆ. ಪ್ರಭಾಸ್, ನಟಿ ಕೃತಿ ಸನೋನ್ ಅಭಿನಯದ, ಬಹು ನಿರೀಕ್ಷಿತ ‘ಆದಿಪುರುಷ್’ ಚಿತ್ರದ ಹೊಸ ಬಿಡುಗಡೆಯ ದಿನಾಂಕ ಘೋಷಿಸಿದ್ದಾರೆ.
ಓಂ ರಾವುತ್ ನಿರ್ದೇಶನದ ಆದಿಪುರುಷ್ ಸಿನಿಮಾ ಮುಂದಿನ ವರ್ಷ ಜನವರಿಯಂದು ಬಿಡುಗಡೆಯಾಗಲಿದೆ. ಈ ಕುರಿತು ಆದಿಪುರುಷ್ ಚಿತ್ರ ತಂಡ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಅಧ್ಬುತ ದೃಶ್ಯ ಕಾವ್ಯವನ್ನ ಹೊಂದಿರುವ ಈ ಚಿತ್ರದ ವಿಎಫ್‌ಎಕ್ಸ್ ಅಭಿಮಾನಿಗಳಿಗೆ ರಸದೌತಣವನ್ನೇ ನೀಡಲಿದೆ.
ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಕುರಿತ ಪ್ರಭಾಸ್ ಮತ್ತು ಕೃತಿ ಸನೂನ್ ಪೋಸ್ಟ್ ಹಂಚಿಕೊಂಡಿದ್ದಾರೆ. ಆದಿಪುರುಷ್ ಸಿನಿಮಾ ತ್ರಿಡಿಯಲ್ಲಿ 2023ರ ಜನವರಿ 12ಕ್ಕೆ ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.
ಆದಿಪುರುಷ್‌ನಲ್ಲಿ ಗ್ರಾಫಿಕ್ಸ್ ಬಾಹುಬಲಿ ಸರಣಿಗಿಂತ ಮೂರು ಪಟ್ಟು ವಿಎಫ್‌ಎಕ್ಸ್ ಇರುತ್ತೆ ಎಂದು ಹೇಳಲಾಗಿದೆ. ಹಾಗಾಗಿ, ನಿರೀಕ್ಷೆಗಳು ಗರಿಗೆದರಿವೆ. ಚಿತ್ರದ ಬಜೆಟ್ ಬರೊಬ್ಬರಿ 350 ರಿಂದ 400 ಕೋಟಿಯಷ್ಟಿದೆ. ಇಷ್ಟು ದೊಡ್ಡ ಕ್ಯಾನ್ವಾಸ್ ನಲ್ಲಿ ತಯಾರಾಗುತ್ತಿರುವ ಈ ಚಿತ್ರದ ಒಂದೇ ಪೋಸ್ಟರ್ ಅನ್ನ ಚಿತ್ರತಂಡ ಬಿಡುಗಡೆ ಮಾಡಿಲ್ಲ.
ರಾಮಾಯಣ ಆಧಾರಿತ ಪೌರಾಣಿಕ ಚಲನಚಿತ್ರವನ್ನು ಹಿಂದಿ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ಅದರ ಡಬ್ಬಿಂಗ್ ಆವೃತ್ತಿಗಳೊಂದಿಗೆ ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ 2023ರ ಜನವರಿ 12ರಂದು ತೆರೆಗೆ ಬರಲಿದೆ. 2023ರ ಸಂಕ್ರಾಂತಿಯನನ್ನ ಆದಿಪುರುಷ್ ವಿಶೇಷವಾಗಿಸಲಿದೆ.