Sandalwood : Amulya : ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯ
ಚೆಲುವಿನ ಚಿತ್ತಾರದ ಬೆಡಗಿ , ಸ್ಯಾಂಡಲ್ ವುಡ್ ನ ಕ್ಯೂಟ್ ನಟಿ ಅಮೂಲ್ಯ ಅವರು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಅಮೂಲ್ಯ ಅವರ ಪತಿ ಜಗದೀಶ್ ಆರ್ ಚಂದ್ರ ಅವರು ಮಾಹಿತಿ ನೀಡಿದ್ದಾರೆ.
ಅಮೂಲ್ಯ ಅವರು ಗಂಡು ಮಕ್ಕಳಿಗೆ ಜನ್ಮ ನೀಡಿರುವ ಬಗ್ಗೆ ಜಗದೀಶ್ ಅವರು ಇನ್ ಸ್ಟಾದಲ್ಲಿ ಪೋಸ್ಟ್ ಹಾಕಿದ್ದಾರೆ.
‘ಅಮೂಲ್ಯ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ. ಈ ಪಯಣದಲ್ಲಿ ಜತೆ ನಿಂತು ಹಾರೈಸಿದ ಎಲ್ಲರಿಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ. ಅಮೂಲ್ಯ ಅವರು ಜಯನಗರದ ಕ್ಲೈಡ್ ನೈಟ್ ಆಸ್ಪತ್ರೆಯಲ್ಲಿ ಬೆಳಗ್ಗೆ 11.45ಕ್ಕೆ ಮಕ್ಕಳಿಗೆ ಜನ್ಮ ನೀಡಿದ್ದಾರೆ.
Amulya became mother of twins
ಬಾಲನಟಿಯಾಗಿ ಸಿನಿಮಾರಂಗಕ್ಕೆ ಎಮಟ್ರಿಯಾಗಿದ್ದ ಅಮ್ಮು ಚೆಲುವಿನ ಚಚಿತ್ತಾರದ ನಂತರ ನಾಯಕಿಯಾಗಿ ಬಡ್ತಿ ಪಡೆದರು.. ಆ ನಂತರ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು.. ಗಣೇಶ್ , ಯಶ್ , ಪ್ರೇಮ್ , ಅಜಯ್ ರಾವ್ , ದುನಿಯಾ ವಿಜಿ ಹೀಗೆ ಅನೇಕರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಕಡೆಯದಾಗಿ ಮಾಸ್ತಿಗುಡಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.. ಆನಂತರ ಮದುವೆಯಾದ ಮೇಲೆ ಸಿನಿಮಾರಂಗದಿಂದ ದೂರವೇ ಉಳಿದರು..