ಶಿವರಾತ್ರಿಗೆ ಚಿರಂಜೀವಿ “ಬೋಲಾ ಶಂಕರ” ಫಸ್ಟ್ ಲುಕ್ ಬಿಡುಗಡೆ
ಮಹಾ ಶಿವರಾತ್ರಿಯ ಪ್ರಯುಕ್ತ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ನಟನೆಯ ಬಹು ನಿರೀಕ್ಷಿತ ಭೋಲಾ ಶಂಕರ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ತಮಿಳಿನ ಬ್ಲಾಕ್ ಬಸ್ಟರ್ ವೇದಾಲಂನ ತೆಲುಗು ರಿಮೇಕ್ ಚಿತ್ರವನ್ನ ಮೆಹರ್ ರಮೇಶ್ ನಿರ್ದೇಶನ ಮಾಡುತ್ತಿದ್ದಾರೆ. ಬೋಲಾ ಶಂಕರ್ ಚಿತ್ರ ಇನ್ನೂ ನಿರ್ಮಾಣ ಹಂತದಲ್ಲಿದೆ.
ಶಿವರಾತ್ರಿ ಶುಭಾಶಯಗಳನ್ನ ತಿಳಿಸಿದ ಚಿರಂಜೀವಿ ಇನ್ಸ್ಟಾಗ್ರಾಮ್ನಲ್ಲಿ ಭೋಲಾ ಶಂಕರ್ ಫಸ್ಟ್ಲುಕ್ ಪೋಸ್ಟರ್ ಹಂಚಿಕೊಂಡಿದ್ದಾರೆ. ಚಿರಂಜೀವಿ ಜೊತೆ ನಾಯಕಿಯಾಗಿ ತಮನ್ನಾ ಭಾಟಿಯಾ ಅಭಿನಯಿಸುತ್ತಿದ್ದಾರೆ. ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಚಿರಂಜೀವಿ ಅವರ ಸಹೋದರಿಯಾಗಿ ಕಾಣಿಸಿಕೊಂಡಿದ್ದಾರೆ.
https://twitter.com/i/status/1498502344094662662
ಭೋಲಾ ಶಂಕರ್ ಸಿನಿಮಾ ಅನಿಲ್ ಸುಂಕರ ಅವರ ಎಕೆ ಎಂಟರ್ಟೈನ್ಮೆಂಟ್ಸ್ ಮತ್ತು ಕ್ರಿಯೇಟಿವ್ ಕಮರ್ಷಿಯಲ್ಸ್ನಡಿ ನಿರ್ಮಾಣ ಮಾಡಲಾಗುತ್ತಿದೆ. ಮಹತಿ ಸ್ವರ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ತಮಿಳಿನಲ್ಲಿ ಹಿಟ್ ಆಗಿರುವ ಚಿತ್ರ ವೇದಾಲಂನ ಅಧಿಕೃತ ರೀಮೇಕ್ ಚಿತ್ರವನ್ನ ತೆಲುಗಿನಲ್ಲಿ ಯಾವೆಲ್ಲ ಬದಲಾವಣೆಗಳೊಂದಿಗೆ ಹೊರ ತರಲಾಗುತ್ತದೆ ಎಂಬುದನ್ನ ಕಾದು ನೋಡಬೇಕು.
ಮೆಗಾಸ್ಟಾರ್ ನಟನೆಯ ಆಚಾರ್ಯ ಚಿತ್ರೀಕರಣ ಮುಗಿದ್ದು, ಶೀಘ್ರದಲ್ಲೇ ತೆರೆಗೆ ಬರಲಿದೆ. ಇವರ ಮತ್ತೊಂದು ಸಿನಿಮಾ ಗಾಡ್ಫಾದರ್ ಚಿತ್ರೀಕರಣ ನಡೆಯುತ್ತಿದೆ.