‘ಗಂಗೂಬಾಯಿ ಕಾಥೇಯವಾಡಿ’ಗೆ ಆಲಿಯಾ ಪಡೆದ ಸಂಭಾವನೆ ಎಷ್ಟು ..??
ಗಂಗೂಬಾಯಿ ಕಾಥೇಯವಾಡಿ ಫೆಬ್ರವರಿ 25 ರಂದು ಥಿಯೇಟರ್ ಗಳಲ್ಲಿ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ.. ಆಲಿಯಾ ಭಟ್ ನಟನೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.. ಸತ್ಯ ಘಟನೆಯಾಧಾರಿತವಾಗಿರುವ ಈ ಸಿನಿಮಾ ಆರಂಭದಿಂದಲೂ ವಿವಾದಗಳಿಂದಲೇ ಸುದ್ದಿಯಾಗಿದ್ದು ಹೆಚ್ಚು.. ಈ ಸಿನಿಮಾದಲ್ಲಿ ಅಜಯ್ ದೇವಗನ್ ಅವರದ್ದೂ ಸಹ ಪ್ರಮುಖ ಪಾತ್ರವಿದೆ.
ಮತ್ತೊಂದೆಡೆ ಈ ಸಿನಿಮಾಗಾಗಿ ಆಲಿಯಾ ಭಟ್ , ಅಜಯ್ ದೇವಗನ್ ಅವರು ಪಡೆದಿರುವ ಸಂಭಾವನೆಯ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.. ಅಂದ್ಹಾಗೆ ಮೂಲಗಳ ಪ್ರಕಾರ ಆಲಿಯಾ ಭಟ್ ಈ ಸಿನಿಮಾಗಾಗಿ 20 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರೆ ಎನ್ನಲಾಗ್ತಿದೆ. ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ( ಅತಿಥಿ ಪಾತ್ರ) ಕಾಣಿಸಿಕೊಂಡಿರುವ ಅಜಯ್ ದೇವಗನ್ ಅವರು ಸುಮಾರು 11 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ಧಾರೆ ಎನ್ನಲಾಗ್ತಿದೆ.