“ಜೇಮ್ಸ್” ಅಪ್ಪು ಅಭಿಮಾನಿಗಳಿಗಾಗಿ ಟ್ರೇಡ್ ಮಾರ್ಕ್ ಹಾಡು ಬಿಡುಗಡೆ….
ಬಹುದಿನಗಳಿಂದ ಅಪ್ಪು ಅಭಿಮಾನಿಗಳು ಕಾದಿದ್ದ ಜೇಮ್ಸ್ ಚಿತ್ರದ ಮೊದಲ ಹಾಡು ಶಿವರಾತ್ರಿ ಪ್ರಯುಕ್ತ ರಿಲೀಸ್ ಆಗಿದೆ. ಅಪ್ಪು ಹೆಸರಿನಲ್ಲಿ ಅಭಿಮಾನಿಗಳಿಗಾಗಿ ಟ್ರೇಡ್ ಮಾರ್ಕ್ ಹಾಡನ್ನ ಚಿತ್ರತಂಡ ಬಿಡುಗಡೆ ಮಾಡಿದೆ. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಹಾಡು ಅಪಾರ ವಿಕ್ಷಣೆ ಗಳಿಸಿಕೊಳ್ಳುತ್ತಿದೆ. ಚಿತ್ರ ನಿರ್ದೇಶಕ ಚೇತನ್ ಕುಮಾರ್ ಬರೆದಿರುವ ಸಾಹಿತ್ಯಾಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಇದು ಕೇವಲ ಹಾಡಲ್ಲ ಅಭಿಮಾನಿಗಳದ್ದೇ ದನಿಯಿದು ಎನ್ನುವ ಮೊದಲ ಸಾಲು ಅಭಿಮಾನಿಗಳನ್ನ ಕನೆಕ್ಟ್ ಮಾಡಿಬಿಡುತ್ತದೆ. ಬಿಡುಗಡೆಯಾಗಿರುವ ಟ್ರೇಡ್ ಮಾರ್ಕ್ ಹಾಡಿನಲ್ಲಿ ಹಲವು ಸರ್ಪ್ರೈಸ್ ಗಳನ್ನ ನೋಡಬಹುದು. ಚಂದನ್ ಶೆಟ್ಟಿ, ಶ್ರೀಲೀಲಾ, ರಚಿತಾ ರಾಮ್ ಸೇರಿದಂತೆ ಹಲವು ಕಲಾವಿದರು ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ.
ಎಂ ಸಿ ವಿಕ್ಕಿ, ಅದಿತಿ ಸಾಗರ್, ಚಂದನ್ ಶೆಟ್ಟಿ, ಶರ್ಮಿಳಾ, ಯುವರಾಜ್ ಕುಮಾರ್ ಹಾಗು ಚರಣ್ ರಾಜ್ ಗೀತೆಯನ್ನ ಹಾಡಿದ್ದಾರೆ. ಮಾರ್ಚ್ 17 ರಂದು ಪುನೀತ್ ಹುಟ್ಟು ಹಬ್ಬದ ಪ್ರಯುಕ್ತ ಕನ್ನಡ ತಮಿಳು ತೆಲುಗು ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ.