ಜನಾರ್ಧನ್ ರೆಡ್ಡಿ ಪುತ್ರ “ಕಿರೀಟಿ” ಚಿತ್ರರಂಗಕ್ಕೆ ಪದಾರ್ಪಣೆ….
ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ಚಿತ್ರರಂಗಕ್ಕೆ ಬರುತ್ತಾರೆ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನವ ಮಾತುಗಳು ಹಲವು ದಿನಗಳಿಂದ ಕೇಳಿಬರುತ್ತಿದ್ದವು. ಇದೀಗ ಸುದ್ಧಿ ನಿಜವಾಗಿದೆ. ತೆಲುಗಿನ ಪ್ರಸಿದ್ಧ ಸಿನಿಮಾ ನಿರ್ಮಾಣ ಸಂಸ್ಥೆ ವಾರಾಹಿ ಪ್ರೊಡಕ್ಷನ್ ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿಯನ್ನ ಲಾಂಚ್ ಮಾಡಲು ಮುಂದಾಗಿದೆ.
ಹೈ ಬಜೆಟ್ ಸಿನಿಮಾಗಳನ್ನ ನಿರ್ಮಿಸುವ ವಾರಾಹಿ ಪ್ರೊಡಕ್ಷನ್ ಶಿವರಾತ್ರಿ ಹಬ್ಬದಂದು ತಮ್ಮ ಬ್ಯಾನರ್ ನ 15 ನೇ ಚಿತ್ರದ ಮೂಲಕ ಕಿರೀಟಿಯನ್ನ ಪರಿಚಿಯಿಸುತ್ತಿದ್ದೇವೆ ಎಂದು ಪೋಸ್ಟರ್ ಹಂಚಿಕೊಂಡಿದೆ. ಇನ್ನೂ ಹೆಸರಿಡದ ಸಿನಿಮಾವನ್ನ ರಾಧಕೃಷ್ಣ ಎನ್ನುವವರು ನಿರ್ದೇಶನ ಮಾಡಲಿದ್ದಾರೆ. ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ಸಿನಿಮಾ ನಿರ್ಮಾಣಗೊಳ್ಳಲಿದೆ. ತೆಲುಗಿನ ಖ್ಯಾತ ಸ್ಟಾರ್ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.
ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿರುವುದರಿಂದ ಎರಡು ಭಾಷಗೂ ಒಂದಿಕೊಳ್ಳುವಂತ ಟೈಟಲ್ ಇಡಬೇಕು ಎನ್ನುವುದು ಚಿತ್ರತಂಡದ ಪ್ಲಾನ್, ಯಾವ ಯಾವ ನಟ ನಟಿಯರು ಅಭಿನಯಿಸುತ್ತಾರೆ ಎನ್ನುವುದು ಇನ್ನೂ ಕುತೂಹಲದಲ್ಲಿದೆ.
ಮಾರ್ಚ್ 4 ರಂದು ಅದ್ದೂರಿಯಾಗಿ ಸಿನಿಮಾಗೆ ಚಾಲನೆ ಸಿಗಲಿದೆ, ಸಿನಿಮಾಗೆ ನಾಯಕಿ ಯಾರು ಎಲ್ಲಿಶೂಟಿಂಗ್ ಆಗಲಿದೆ ಎನ್ನುವು ಎಲ್ಲಾ ಮಾಹಿತಿ ಮಾರ್ಚ್ 4 ರಂದೇ ರಿವಿಲ್ ಆಗಲಿದೆ. ತೆಲುಗಿನ ಘಟಾನುಘಟಿ ತಂತ್ರಜ್ಞರು ಈ ಸಿನಿಮಾಗೆ ಕೈ ಜೋಡಿಸಿದ್ದಾರೆ. ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಬಾಹುಬಲಿ ಸಿನಿಮಾದ ಕ್ಯಾಮರ್ ಮ್ಯಾನ್ ಸೆಂಥಿಲ್ ಕುಮಾರ್ ಛಾಯಾಗ್ರಾಹಣ, ಭಾರತದಲ್ಲಿ ಅದ್ದೂರಿ ಸಾಹಸ ದೃಶ್ಯಗಳನ್ನ ನಿರ್ದೇಶಿಸುವ ಪೀಟರ್ ಹೆನ್ ಚಿತ್ರಕ್ಕಾಗಿ ಕೆಲಸ ಮಾಡಲಿದ್ದಾರೆ. ಕನ್ನಡದ ನಟ ಸಾರ್ವಭೌಮ ಚಿತ್ರಕ್ಕೆ ಇವರು ಫೈಟ್ ಕಂಪೋಸ್ ಮಾಡಿದ್ದರು.
ಕಿರೀಟಿ ತಂದೆಯಂತೆ ರಾಜಕೀಯದ ಹಾದಿ ತುಳಿಯುತ್ತಾರೆ ಎನ್ನಲಾಗಿತ್ತು. ಬಾಲ್ಯದಿಂದ ಸಿನಿಮಾ ಕಡೆ ಒಲವಿದ್ದಿದ್ದರಿಂದ ಸಿನಿಮಾವನ್ನ ವೃತ್ತಿ ಜೀವನವಾಗಿ ಆಯ್ದು ಕೊಂಡಿದ್ದಾರೆ. Janardhan Reddy’s son ‘kireeti’ debuts in kannada & telugu cinema industry