2023 ರಲ್ಲಿ ಬಿಡುಗಡೆಯಾಗಲಿದೆ ಶಾರುಖ್ ನಟನೆಯ ಪಠಾಣ್ …..
ಶಾರುಖ್ ಖಾನ್ ಅಭಿಮಾನಿಗಳು ಕೊನೆಗೂ ನಿಟ್ಟುಸಿರು ಬಿಡುವಂತಹ ಸಮಯ ಬಂದಿದೆ. ಕಿಂಗ್ ಖಾನ್ ನಟನೆಯ ಬಹು ನಿರೀಕ್ಷಿತ ಚಿತ್ರ ಪಠಾಣ್ ಅಪ್ಡೇಟ್ ಹೊರಬಿದ್ದಿದೆ. ಪಠಾಣ್ ಚಿತ್ರ 25 ಜನವರಿ 2023 ರಂದು ಥಿಯೇಟರ್ ಗೆ ಬರಲಿದೆ ಎಂದು ಶಾರುಖ್ ಖಾನ್ ಟ್ವಿಟ್ ಮಾಡಿ ತಿಳಿಸಿದ್ದಾರೆ. ಈ ಚಿತ್ರ ಹಿಂದಿ ತಮಿಳಿ ಮತ್ತು ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಲಿದೆ.
ಶಾರುಖ್ ಖಾನ್ ಟ್ವಿಟ್ಟರ್ನಲ್ಲಿ ಪಠಾಣ್ನ ಟೀಸರ್ ಅನ್ನು ಹಂಚಿಕೊಂಡಿದ್ದಾರೆ . ” ತುಂಬಾ ತಡವಾಗಿದೆ ಎಂದು ನನಗೆ ಗೊತ್ತು. ಪಠಾಣ್ ಚಿತ್ರದ ಟೈಮ್ ಶುರುವಾಗಿದೆ. ಡೇಟ್ ನೆನಪಿಸಿಕೊಳ್ಳಿ 25 ಜನವರಿ, 2023 ರಂದು ಚಿತ್ರಮಂದಿರಗಳಲ್ಲಿ ನಿಮ್ಮನ್ನು ನೋಡೋಣ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಎಂದು ಟ್ವೀಟ್ ಮಾಡಿದ್ದಾರೆ.
https://twitter.com/i/status/1498901170399879170
ಶಾರುಖ್ ಖಾನ್ 2018 ರಲ್ಲಿ ಬಿಡುಗಡೆಯಾದ ಝೀರೋ ನಂತರ ಬಾಲಿವುಡ್ಗೆ ಪುನರಾಗಮನ ಮಾಡುತ್ತಿದ್ದಾರೆ. ಟೀಸರ್ನಲ್ಲಿ, ಜಾನ್ ಅಬ್ರಹಾಂ ಮತ್ತು ದೀಪಿಕಾ ಪಡುಕೋಣೆ ಶಾರುಖ್ ಖಾನ್ ನ ಪರಿಚಯಿಸಿದ್ದಾರೆ. . ಆದರೆ ಟೀಸರ್ ನಲ್ಲಿ ಬಾಲಿವುಡ್ ಬಾದ್ ಶಾ ಲುಕ್ ರಿವೀಲ್ ಆಗಿಲ್ಲ.
Shah Rukh Khan, Deepika Padukone’s Pathaan in cinemas on Jan 25, 2023