Ajith | ತಲಾ ಅಜಿತ್ ಕುಮಾರ್ ನ್ಯೂ ಲುಕ್ ಗೆ ಫ್ಯಾನ್ಸ್ ಫಿದಾ
ತಮಿಳಿನ ಸ್ಟಾರ್ ಹೀರೋ ಅಜಿತ್ ಸದ್ಯ ವಲಿಮೈ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬೋನಿ ಕಪೂರ್ ನಿರ್ಮಾಣದ ಈ ಚಿತ್ರ ಫೆಬ್ರವರಿ 24 ರಂದು ಬಿಡುಗಡೆಯಾಯಿತು. ತಮಿಳು, ತೆಲುಗು, ಹಿಂದಿ ಮತ್ತು ಕನ್ನಡದಲ್ಲಿ ಬಿಡುಗಡೆಯಾದ ವಲಿಮೈ ಸಿನಿಮಾ, ತಮಿಳುನಾಡಿನಲ್ಲಿ ದಾಖಲೆಯ ಕಲೆಕ್ಷನ್ ಮಾಡಿದೆ. ಬಿಡುಗಡೆಯಾದ 3 ದಿನಗಳಲ್ಲಿ ರೂ. 100 ಕೋಟಿ ಕ್ಲಬ್ ಸೇರಿದೆ. ಇದರೊಂದಿಗೆ ವಲಿಮೈ ಸಿನಿಮಾ ಸುಮಾರು ರೂ. 130 ಕೋಟಿ ರೂ. 140 ಕೋಟಿಯವರೆಗೂ ಬಾಚಿಕೊಂಡಿದೆ ಅನ್ನೋದು ಸಿನಿ ವಿಶ್ಲೇಷಕರು ಅಂದಾಜು.
ವಲಿಮೈ ಬ್ಲಾಕ್ಬಸ್ಟರ್ ಜೋಶ್ನಲ್ಲಿ ಅಜಿತ್ ತಮ್ಮ ಮಗ ಅದ್ವಿಕ್ ಹುಟ್ಟುಹಬ್ಬವನ್ನು ತಮ್ಮ ಕುಟುಂಬದೊಂದಿಗೆ ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ. ಇದರಕ್ಕೆ ಸಂಬಂಧಿಸಿದ ವಿಡಿಯೋ- ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಆದ್ರೆ ಈ ಫೋಟೋಗಳನ್ನು ನೋಡಿರುವ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಸದಾ ಪಂಚೆ ಕಟ್ಟಿಕೊಂಡು, ಬಿಳಿಗೂದಲಿನೊಂದಿಗೆ ಇರುತ್ತಿದ್ದ ಅಜಿತ್ ಈ ಫೋಟೋಗಳಲ್ಲಿ ಸಕತ್ ಸ್ಟ್ರೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ದೊಡ್ಡ ಗಡ್ಡ, ಕಿವಿಯೋಲೆಯೊಂದಿಗೆ ಅವರು ಗ್ಯಾಂಗ್ ಸ್ಟಾರ್ ರಂತೆ ಕಾಣಿಸುತ್ತಿದ್ದಾರೆ. ಅಜಿತ್ ಅವರ ಹೊಸ ಲುಕ್ ನೋಡಿ ಅಭಿಮಾನಿಗಳೆಲ್ಲಾ ಶಾಕ್ ಆಗಿದ್ದಾರೆ. ಅಲ್ಲದೆ ಮುಂದಿನ ಸಿನಿಮಾದಲ್ಲಿ ಅಜಿತ್ ಅವರ ಲುಕ್ ಇದೇ ಇರಬಹುದಾ ಎಂದು ಚರ್ಚೆ ಶುರುವಚ್ಚಿಕೊಂಡಿದ್ದಾರೆ. Ajith Kumar fans praise his new look