ಬೆಂಗಳೂರು ಸಿನಿಮೋತ್ಸವ , ದರ್ಶನ್ ಅತಿಥಿ…!!!
ಇಂದಿನಿಂದ ( ಮಾರ್ಚ್ 3 ) 13ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮಾ ಉತ್ಸವಕ್ಕೆ ಚಾಲನೆ ಸಿಗಲಿದೆ.. ಈ ಸಿನಿಮಾ ಉತ್ಸವು ಸಾಕಷ್ಟು ವಿಶೇಷತೆಗಳನ್ನ ಒಳಗೊಂಡಿದೆ. ಪ್ರಮುಖವಾಗಿದೆ.. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿಆಗಮಿಸುತ್ತಿದ್ದಾರೆ.. ಜೊತೆಗೆ ಅನೇಕ ಸಿನಿಮಾ ತಾರೆಯರು , ಸಿಎಂ ಬಸವರಾಜ ಬೊಮ್ಮಯಿ ಅವರು ಸೇರಿದಂತೆ ರಾಜಕೀಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 4.30ಕ್ಕೆ ಸರಿಯಾಗಿ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ.
ಕೃಷಿ ವಿವಿಯ ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಸಭಾಭವನದಲ್ಲಿ ಸಿನಿಮೋತ್ಸವದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದುದ್ಘಾಟನೆಯನ್ನು ಬ್ಯಾಟರಾಯನಪುರ ಶಾಸಕ ಕೃಷ್ಣಬೈರೇಗೌಡ ವಹಿಸಿಕೊಳ್ಳಲಿದ್ದಾರೆ. ಸಿಎಂ ಬೊಮ್ಮಾಯಿ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ವೀಶೇಷ ಆಹ್ವಾನಿತರಾಗಿ ನಟ ದರ್ಶನ್ ಭಾಗವಹಿಸಲಿದ್ದಾರೆ. ಅಲ್ಲದೇ ಚಿತ್ರೋತ್ಸವ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನಟಿ ಭಾರತಿ ವಿಷ್ಣುವರ್ಧನ್ ಸಹ ಭಾಗಿಯಾಗಲಿರುವುದು ವಿಶೇಷ.
ಮಾರ್ಚ್ 03 ರಿಂದ ಆರಂಭವಾಗುವ ಸಿನಿಮಾ ಉತ್ಸವ 10ನೇ ತಾರೀಕಿನ ವರೆಗೂ ಇರಲಿದ್ದು , 55 ದೇಶಗಳ ಒಟ್ಟು 200 ಸಿನಿಮಾಗಳು ಪ್ರದರ್ಶನಗೊಳ್ಳಲಿದೆ. ಏಷ್ಯಾ ಚಲನಚಿತ್ರ ವಿಭಾಗ, ಭಾರತೀಯ ಚಲನಚಿತ್ರ ವಿಭಾಗ, ಕನ್ನಡ ಚಲನಚಿತ್ರ ಸ್ಪರ್ಧಾ ವಿಭಾಗ, ಕನ್ನಡ ಜನಪ್ರಿಯ ಮನೊರಂಜನಾ ಚಲನಚಿತ್ರ ವಿಭಾಗಗಳಲ್ಲಿ ಸ್ಪರ್ಧೆ ಸಹ ನಡೆಯಲಿದೆ. ಗೆದ್ದ ಸಿನಿಮಾಗಳಿಗೆ ನಗದು ಬಹುಮಾನ ಹಾಗೂ ಪಾರಿತೋಷಕ ಸಸಿಗಲಿದೆ. ಸಾಧನೆ ಸ್ಮರಣೆ ವಿಭಾಗದಲ್ಲಿ ನಟ ಪುನೀತ್ ರಾಜ್ಕುಮಾರ್ ಹಾಗೂ ಸಂಚಾರಿ ವಿಜಯ್ ಅವರ ಸಿನಿಮಾಗಳು ಪ್ರದರ್ಶನಗೊಳ್ಳಲಿದೆ. ತುಳು ಚಿತ್ರರಂಗದ ಸುವರ್ಣೋತ್ಸವ ಅಂಗವಾಗಿ ಕೆಲವು ಕಾರ್ಯಕ್ರಮಗಳ ಜೊತೆಗೆ ಸಿನಿಮಾ ಪ್ರದರ್ಶನ ಇರಲಿದೆ.
ಆಜಾದಿ ಕೀ ಅಮೃತ್ಮಹೋತ್ಸವ್ ಅಡಿ ಸ್ವಾತಂತ್ರ್ಯ ಬಂದ 75ನೇ ವರ್ಷದ ಸವಿನೆನಪಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಸಿನಿಮಾಗಳ ಪ್ರದರ್ಶನ ನಡೆಯಲಿರುವುದು ವಿಶೇಷ.