Isha Koppikar | ಏಕಾಂತದಲ್ಲಿ ಮಾತಾಡೋಣ ಎಂದಿದ್ದ ಆ ಹೀರೋ
ಕಾಸ್ಟಿಂಗ್ ಕೌಚ್.. ಇದು ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಕೇಳಿ ಬರುತ್ತಿದೆ. ಸ್ಟಾರ್ ಹೀರೋಯಿನ್ಸ್ ಗಳಿಂದ ಹಿಡಿದು ಕ್ಯಾರೆಕ್ಟರ್ ಆರ್ಟಿಸ್ಟ್ ಗಳ ವರೆಗೂ ಕಾಸ್ಟಿಂಗ್ ಕೌಚ್ ಗೆ ಬಲಿಯಾಗಿದ್ದಾರೆ. ಅದರಂತ ಇದೀಗ ಟಾಲಿವುನ್ ನಟ ನಾಗಾರ್ಜುನ ‘ಚಂದ್ರಲೇಖಾ‘ ಸಿನಿಮಾದ ನಾಯಕಿ ಇಶಾ ಕೊಪ್ಪಿಕರ್ ಕೂಡ ಕಾಸ್ಟಿಂಗ್ ಕೌಚ್ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಇತ್ತೀಚೆಗೆ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಾನು ಕೂಡ ಕಾಸ್ಟಿಂಗ್ ಕೌಚ್ ಗೆ ಬಲಿಯಾಗಿದ್ದೆ ಎಂದು ಇಶಾ ಕುತೂಹಲಕಾರಿ ಮಾತುಗಳನ್ನಾಡಿದ್ದಾರೆ. ”ನಾನು ಓದುವಾಗ ಪಾಕೆಟ್ ಮನಿಗಾಗಿ ಮಾಡೆಲಿಂಗ್ ಮಾಡುತ್ತಿದ್ದೆ.
ಇದರೊಂದಿಗೆ ನನಗೆ ಸಿನಿಮಾ ಅವಕಾಶಗಳು ಬರತೊಡಗಿದವು. ಈ ಅನುಕ್ರಮದಲ್ಲಿ “ಏಕ್ ಥಾ ದಿಲ್ ಥಾ ಧಡ್ಕನ್” ಚಿತ್ರದ ಆಫರ್ ನೊಂದಿಗೆ ನಾಯಕಿ ಆದೆ. ಆದರೆ, ಇಂಡಸ್ಟ್ರಿಗೆ ಬಂದ ಆರಂಭದಲ್ಲಿ ನಿರ್ಮಾಪಕರೊಬ್ಬರು ಕರೆ ಮಾಡಿ ಸಿನಿಮಾದಲ್ಲಿ ಆಕ್ಟ್ ಮಾಡುವ ಚಾನ್ಸ್ ಇದೆ ಎಂದು ಹೇಳಿದ್ದರು. ಇದಕ್ಕಾಗಿ ನೀವು ಮೊದಲು ನಾಯಕನನ್ನು ಭೇಟಿ ಮಾಡಬೇಕು ಎಂದರು. ಆಗ ನಾನು ಆ ಹೀರೋಗೆ ಕಾಲ್ ಮಾಡಿದ್ರೆ, ನೀವು ಒಬ್ಬರೇ ಬನ್ನಿ, ಏಕಾಂತವಾಗಿ ಮೀಟ್ ಆಗೋಣ. ನಿಮ್ಮ ಜೊತೆ ಯಾರನ್ನು ಕರೆದುಕೊಂಡು ಬರಬೇಡಿ ಎಂದು ಹೇಳಿದ್ದರು.
ಅವರ ಮಾತುಗಳಿಂದ ನನಗೆ ಎಲ್ಲವೂ ಅರ್ಥವಾಯಿತು. ಬಳಿಕ ನಾನು ಆ ನಿರ್ಮಾಪಕರಿಗೆ ಕರೆ ಮಾಡಿ, ನಾನು ನನ್ನ ಪ್ರತಿಭೆಯಿಂದ ಇಲ್ಲಿಯವರೆಗೂ ಬಂದಿದ್ದೇನೆ. ಅದೇ ರೀತಿ ನನಗೆ ಅವಕಾಶಗಳು ಬರುತ್ತವೆ ಎಂದು ರೇಗಿದ್ದರಂತೆ. ಇದರಿಂದ ಕೋಪಗೊಂಡ ನಿರ್ಮಾಪಕ ಹೀರೋ ನನ್ನನ್ನು ಆ ಪ್ರಾಜೆಕ್ಟ್ ನಿಂದ ತೆಗೆದು ಹಾಕಿದ್ದರು ಎಂದು ನಟಿ ಹೇಳಿಕೊಂಡಿದ್ದಾರೆ.
Isha Koppikar reaction Casting Couch