ಬಾಕ್ಸ್ ಆಫಿಸ್ ಲ್ಲಿ 100 ಕೋಟಿ ಗಡಿ ದಾಟಿದ ಗಂಗೂಬಾಯಿ ಕಥಿಯಾವಾಡಿ…
ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯದ ‘ಗಂಗೂಬಾಯಿ ಕಥಿಯಾವಾಡಿ’ ಸಿನಿಮಾ ಗೆದ್ದು ಬೀಗಿದೆ. ಫೆಬ್ರವರಿ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಒಂದು ವಾರ ಉತ್ತಮ ಪ್ರದರ್ಶನ ಕಂಡು ಮುನ್ನುಗ್ಗುತ್ತಿದೆ. ವಿಶೇಷವೆಂದರೆ ಈ ಚಿತ್ರ ಭಾರತ ಮಾತ್ರವಲ್ಲದೆ ವಿಶ್ವದ ಬೇರೆ ಬೇರೆ ಭಾಗದ ಜನರು ಇಷ್ಟ ಪಟ್ಟು ಥಿಯೇಟರ್ಗಳತ್ತ ಮುಖ ಮಾಡುತ್ತಿದ್ದಾರೆ, ಇದರಿಂದಾಗಿ ಆಲಿಯಾ ಅಭಿನಯದ ಚಿತ್ರ ‘ಗಂಗೂಬಾಯಿ ಕಥಿಯಾವಾಡಿ’ 100 ಕೋಟಿ ಗಳಿಕೆಯ ಗಡಿ ದಾಟಿದೆ. ಈ ಮಾಹಿತಿಯನ್ನ ಖುದ್ದು ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ಮಾಣ ಸಂಸ್ಥೆ ತಿಳಿಸಿದೆ.
‘ಗಂಗೂಬಾಯಿ ಕಥಿಯಾವಾಡಿ’ ವಿಶ್ವಾದ್ಯಂತ ಒಟ್ಟು 108.3 ಕೋಟಿ ಗಳಿಸಿದೆ, ಚಿತ್ರದ ಗಳಿಕೆ 100 ಕೋಟಿ ದಾಟಿದ ನಂತರ ಸಂಜಯ್ ಲೀಲಾ ಬನ್ಸಾಲಿ ಅವರ ಪ್ರೊಡಕ್ಷನ್ ಹೌಸ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿ ಹಂಚಿಕೊಳ್ಳಲಾಗಿದೆ. ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ. ಆಲಿಯಾ ಭಟ್ ‘ಗಂಗೂಬಾಯಿ’ ಆಗಿ ಕಾಣಿಸಿಕೊಂಡಿರುವ ಚಿತ್ರ ‘ವರ್ಲ್ಡ್ ವೈಡ್ ಬಾಕ್ಸ್ ಆಫೀಸ್ ನಲ್ಲಿ 108.3 ಕೋಟಿ ಕಲೆಕ್ಷನ್’ ಮಾಡಿದೆ ಎಂದು ಬರೆದುಕೊಂಡಿದ್ದಾರೆ.
‘ಗಂಗೂಬಾಯಿ ಕಾಥಿಯಾವಾಡಿ’ ಬಿಡುಗಡೆಯಾಗಿ ಎಂಟು ದಿನಗಳು ಕಳೆದಿದ್ದು, ಮೊದಲ ವಾರದಲ್ಲಿ ಚಿತ್ರವು ದೇಶದಾದ್ಯಂತ ಉತ್ತಮ ಪ್ರದರ್ಶನ ಕಂಡಿದೆ.
‘ಗಂಗೂಬಾಯಿ ಕಥಿಯಾವಾಡಿ’ ಚಿತ್ರವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಆಲಿಯಾ ‘ಗಂಗೂಬಾಯಿ’ ಎಂಬ ಸೆಕ್ಸ್ ವರ್ಕರ್ ಪಾತ್ರದಲ್ಲಿ ನಟಿಸಿದ್ದಾರೆ. ಒಂದು ಕಾಲದಲ್ಲಿ 1000 ರೂಪಾಯಿಗೆ ಮಾರಾಟವಾಗಿದ್ದ ಕಾಮಟಿಪುರದ ಗಂಗೂಬಾಯಿ ಅವರ ಜೀವನಾಚರಿತ್ರೆಯನ್ನ ಆಧರಿಸಿ ಸಿನಿಮಾ ತೆಗೆಯಲಾಗಿದೆ.
ಈ ಚಿತ್ರದಲ್ಲಿ ಆಲಿಯಾ ಭಟ್ ಹೊರತಾಗಿ ಬಾಲಿವುಡ್ ನಟ ಅಜಯ್ ದೇವಗನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರಹೀಮ್ ಲಾಲಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ನಟ ಮತ್ತು ನೃತ್ಯಗಾರ್ತಿ ಶಂತನು ಮಹೇಶ್ವರಿ ಕೂಡ ಈ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು.
Gangubai Kathiawadi Box Office Collection: Alia Bhatt’s film enters Rs 100 cr club