ಶೇನ್ ವಾರ್ನ್ ನಿಧನಕ್ಕೆ ಕಂಬನಿ ಮಿಡಿದ ಭಾರತೀಯ ಸಿನಿಮಾ ಜಗತ್ತು…
ಕ್ರಿಕೆಟ್ ಜಗತ್ತಿನ ಲೆಜೆಂಡ್ ಸ್ಪಿನ್ನರ್ಗಳಲ್ಲಿ ಒಬ್ಬರಾಗಿರುವ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಶುಕ್ರವಾರ ನಿಧನರಾಗಿದ್ದಾರೆ. ಆಸ್ಟ್ರೇಲಿಯಾದ ಶ್ರೇಷ್ಠ ಕ್ರಿಕೆಟಿಗ ಶೇನ್ ವಾರ್ನ್ ಅವರಿಗೆ 52 ವರ್ಷ ವಯಸ್ಸಾಗಿತ್ತು. ಶೇನ್ ವಾರ್ನ್ ಅವರ ಹಠಾತ್ ನಿಧನಕ್ಕೆ ಕ್ರೀಡಾ ಲೋಕ ಕಂಬನಿ ಮಿಡಿದಿದೆ. ವಿಶ್ವದಾದ್ಯಂತ ಅವರ ಅಭಿಮಾನಿಗಳು ದುಃಖದಲ್ಲಿ ಮುಳುಗಿದ್ದಾರೆ.
ಈ ಮಹಾನ್ ಕ್ರಿಕೆಟಿಗ ಜಗತ್ತಿಗೆ ವಿದಾಯ ಹೇಳಿದ ಬೆನ್ನಲ್ಲೇ ಭಾರತೀಯ ಚಿತ್ರ ಜಗತ್ತಿನ ತಾರೆಗಳು ಕೂಡ ಶಾಕ್ ಆಗಿದ್ದಾರೆ. ಬಾಲಿವುಡ್ ಸೌತ್ ಸಿನಿಮಾದ ವಿವಿಧ ಕಲಾವಿದರು ಶ್ರೇನ್ ವಾರ್ನ್ ನಿಧನಕ್ಕೆ ಸಂತಾಪ ಸೂಚಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಶೇನ್ ವಾರ್ನ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಟ್ವೀಟ್ ಮಾಡಿ, ಶೇನ್ ವಾರ್ನ್ ಅವರ ಹಠಾತ್ ನಿಧನದ ಸುದ್ದಿ ಕೇಳಿ ಬೇಸರವಾಯಿತು. ಈ ವ್ಯಕ್ತಿಯನ್ನು ತಿಳಿಯದೆ ನೀವು ಕ್ರಿಕೆಟ್ ಆಟವನ್ನು ಪ್ರೀತಿಸಲು ಸಾಧ್ಯವಿಲ್ಲ. ಇದು ತುಂಬಾ ಹೃದಯ ವಿದ್ರಾವಕವಾಗಿದೆ, ಓಂ ಶಾಂತಿ. ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಕೂಡ ಶೇನ್ ವಾರ್ನ್ ಅವರಿಗೆ ಗೌರವ ಸಲ್ಲಿಸಿದ್ದಾರೆ. “ಶ್ರೇಷ್ಠ ಸ್ಪಿನ್ ಬೌಲರ್ಗಳಲ್ಲಿ ಒಬ್ಬರಾದ ಶೇನ್ ವಾರ್ನ್ ಅವರ ಹಠಾತ್ ನಿಧನದ ಬಗ್ಗೆ ಕೇಳಿ ಆಘಾತ ಮತ್ತು ದುಃಖವಾಗಿದೆ” ಎಂದು ನಟ ಟ್ವೀಟ್ ಮಾಡಿದ್ದಾರೆ. ಅವರು ಮೈದಾನದಲ್ಲಿ ಮಾಂತ್ರಿಕರಾಗಿದ್ದರು. ಲಂಡನ್ನ ಹೋಟೆಲ್ ಲಾಬಿಯಲ್ಲಿ ಅವರನ್ನು ಭೇಟಿಯಾಗುವ ಸುಯೋಗ ನನಗೆ ಸಿಕ್ಕಿತು. ಅವರು ನಿಜವಾಗಿಯೂ ಸುಲಭವಾಗಿ ನಗುತ್ತಿದ್ದರು. RIP, ನಿಮ್ಮ ಪ್ರತಿಭೆಯನ್ನು ನಾವು ಕಳೆದುಕೊಳ್ಳುತ್ತೇವೆ. ಎಂದು ಟ್ವೀಟ್ ಮಾಡಿದ್ದಾರೆ.
ಟಾಲಿವುಡ್ ನಟ ಮಹೇಶ್ ಬಾಬು ಕೂಡ ಶೇನ್ ವಾರ್ನ್ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ದಿಗ್ಗಜ ಕ್ರಿಕೆಟಿಗನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. “ಈ ಸುದ್ದಿಯಿಂದ ಆಘಾತ ಮತ್ತು ದುಃಖವಾಗಿದೆ. ವಿಶ್ವ ಕ್ರಿಕೆಟ್ಗೆ ಅತ್ಯಂತ ದುಃಖದ ದಿನ. ರೆಸ್ಟ್ ಇನ್ ಪೀಸ್ ರೋಡ್ ಮೋರ್ಷ್ ಮತ್ತು ಶೇನ್ ವಾರ್ನ್. ಎಂದು ಮಹೇಶ್ ಬಾಬು ಟ್ವೀಟ್ ಮಾಡಿದ್ದಾರೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡ ಶೇನ್ ವಾರ್ನ್ಗೆ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ತಮ್ಮ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಪೋಟೋ ಹಂಚಿಕೊಂಡ ನಟಿ, “ಮಹಾಪುರುಷರು ಬದುಕುತ್ತಾರೆ” ಎಂದು ಬರೆದಿದ್ದಾರೆ. ಶಿಲ್ಪಾ ಶೆಟ್ಟಿ ಮತ್ತು ಶೇನ್ ವಾರ್ನ್ ಅವರು IPL ನ ರಾಜಸ್ಥಾನ್ ರಾಯಲ್ಸ್ನಲ್ಲಿದ್ದಾಗ ಒಟ್ಟಿಗೆ ಕೆಲಸ ಮಾಡಿದ್ದ ಚಿತ್ರ ಹಂಚಿಕೊಂಡಿದ್ದಾರೆ.
ಇದಲ್ಲದೇ ಬಾಲಿವುಡ್ ನಟ ಅನಿಲ್ ಕಪೂರ್ ಕೂಡ ಶೇನ್ ವಾರ್ನ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ಟ್ವೀಟ್ ಮಾಡಿದ್ದಾರೆ. ಈ ಸುದ್ದಿ ನನ್ನಂತಹ ಲಕ್ಷಾಂತರ ಜನರನ್ನು ಆಘಾತ ಮತ್ತು ಅಪನಂಬಿಕೆಗೆ ತಳ್ಳಿದೆ. ಬೇಗನೆ ಹೊರಟುಬಿಟ್ಟಿರಿ . ಸ್ಪಿನ್ ಕಿಂಗ್ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಎಂದು ಅನಿಲ್ ಕಪೂರ್ ಟ್ವೀಟ್ ಮಾಡಿದ್ದಾರೆ.
RIP Shane Warne: The entertainment world was also shocked by the death of veteran cricketer Warne.