25 ನೇ ವಸಂತಕ್ಕೆ ಕಾಲಿಟ್ಟ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್…..
ಧಡಕ್ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿರುವ ನಟಿ ಶ್ರೀದೇವಿ ಅವರ ಹಿರಿಯ ಮಗಳು ಜಾನ್ವಿ ಕಪೂರ್ ಇಂದು 25ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಾಯಿಯಂತೆ ಬಾಲಿವುಡ್ ನಲ್ಲಿ ವೃತ್ತಿ ಜೀವನವನ್ನ ಕಂಡುಕೊಳ್ಳುತ್ತಿರುವ ಧಡಕ್ ನಟಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಜಾನ್ವಿ ಸಂಬಂಧಿಸಿದ ಕೆಲವು ವಿಶೇಷ ಮಾಹಿತಿ ಇಲ್ಲಿದೆ.
ಜಾನ್ವಿ ಕಪೂರ್ 6 ಮಾರ್ಚ್ 1995 ರಂದು ಜನಿಸಿದರು. ಬೋನಿ ಕಪೂರ್ ಅವರನ್ನು ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಶ್ರೀದೇವಿ, ಜಾನ್ವಿಗೆ ಜನ್ಮ ನೀಡಿದರು, ಈ ಕಾರಣದಿಂದಾಗಿ ಶ್ರೀದೇವಿ ಮದುವೆಗೆ ಮುಂಚೆಯೇ ಗರ್ಭಿಣಿಯಾಗಿದ್ದರು ಎಂಬ ಗಾಸಿಪ್ ಗಳು ಹರಿದಾಡಿದ್ದವು. ಜಾನ್ವಿಗೆ ಖುಷಿ ಕಪೂರ್ ಎಂಬ ತಂಗಿ ಕೂಡ ಇದ್ದಾರೆ.
ಜಾನ್ವಿ ಸಿನಿಮಾ ರಂಗದಲ್ಲಿ ನಟಿಸುವುದು ಶ್ರೀದೇವಿಗೆ ಇಷ್ಟವಿರಲಿಲ್ಲ. ಜಾನ್ವಿ ಡಾಕ್ಟರ್ ಆಗಬೇಕು ಎಂದು ಬಯಸುತ್ತಿದ್ದರು. ಆದರೆ ಜಾನ್ವಿಗೆ ನಟನೆಯಲ್ಲಿ ಆಸಕ್ತಿ ಇತ್ತು. ಬೋನಿ ಕಪೂರ್ ಅವರ ಇಚ್ಛೆಯ ಮೇರೆಗೆ, ಜಾನ್ವಿಯನ್ನು ನಟಿಯಾಗಿಸಲು ಶ್ರೀದೇವಿ ಒಪ್ಪಿಗೆ ಸೂಚಿಸಿದರು.
ಜಾನ್ವಿ ಕಪೂರ್ ಅವರ ಆಸ್ತಿ ಮೌಲ್ಯ 8 ಮಿಲಿಯನ್ ಡಾಲರ್ ಅಂದರೆ 58 ಕೋಟಿ ರೂ. ಜಾನ್ವಿ ಪ್ರತಿ ಚಿತ್ರಕ್ಕೆ 5 ಕೋಟಿ ರೂ. ಸಂಭಾವನೆ ಪಡೆಯುತ್ತಾರ. ಮೊದಲ ಚಿತ್ರ ಧಡಕ್ಗೆ ಅವರು ಪಡೆದದ್ದು ಕೇವಲ 45 ಲಕ್ಷ ರೂಪಾಯಿ.
ಜಾನ್ವಿ ಶಶಾಂಕ್ ಖೈತಾನ್ ಅವರ ಧಡಕ್ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರಕ್ಕಾಗಿ ಅಮ್ಮನಿಂದ ತರಬೇತಿ ಪಡೆದಿದ್ದರು. 20 ಜುಲೈ 2018 ರಂದು ಸಿನಿಮಾ ಬಿಡುಗಡೆಯಾಗಿತ್ತು. ಆದರೆ ಅದನ್ನು ನೋಡವ ಅದೃಷ್ಟ ಶ್ರೀದೇವಿಗೆ ಇರಲಿಲ್ಲ. ಶ್ರೀದೇವಿ ಅವರು 24 ಫೆಬ್ರವರಿ 2018 ರಂದು ಇಹಲೋಕ ತ್ಯಜಿಸಿದ್ದರು.
ಜಾನ್ವಿ ಕಳೆದ ಹಲವು ವರ್ಷಗಳಿಂದ ಅಕ್ಷತ್ ರಾಜನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಅಕ್ಷತ್ ಜಾನ್ವಿಯ ಬಾಲ್ಯದ ಗೆಳಯ ಆದರೆ ಈ ಜೋಡಿ ಡೇಟಿಂಗ್ ಸುದ್ದಿಯನ್ನ ನಿರಾಕರಿಸಿದೆ.
ಜಾನ್ವಿ ಕಪೂರ್ ಶೀಘ್ರದಲ್ಲೇ ಆನಂದ್ ಎಲ್ ರೈ ಅವರ ಗುಡ್ ಲಕ್ ಜೆರ್ರಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು 2018 ರಲ್ಲಿ ತಮಿಳಿನಲ್ಲಿ ಬಿಡುಗಡೆಯಾಗಿದ್ದ ಕೋಲಮಾವು ಕೋಕಿಲಾ ಚಿತ್ರದ ಹಿಂದಿ ರೀಮೇಕ್ . ಇದಲ್ಲದೆ, ಜಾನ್ವಿ ತಖ್ತ್, ಮಿಲಿ ಮತ್ತು ದೋಸ್ತಾನಾ ಪಾರ್ಟ್ 2 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.