‘KGF 2’ ಟ್ರೇಲರ್ ನೋಡಿ ಸೆನ್ಸಾರ್ ಬೋರ್ಡ್ ಸದಸ್ಯ ಹೇಳಿದ್ದೇನು..?
ಬೆಂಗಳೂರು : ‘KGF 2’ ರಿಲೀಸ್ ಗೆ ಇಡೀ ಭಾರತೀಯ ಸಿನಿಮಾರಂಗವೇ ಕಾದುಕುಳಿತಿದೆ.. ಅಭಿಮಾನಿಗಳ ಕಾತರತೆ ದಿನದಿಂದ ದಿನಕ್ಕೆ ಹೆಚ್ಚಾಗ್ತಲೇ ಇದೆ.. ಏಪ್ರಿಲ್ 14 ಕ್ಕಕೆ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ..
ಈ ನಡುವೆ ಪ್ರಶಾಂತ್ ನೀಲ್ ಯಶ್ ಕಾಂಬಿನೇಷನ್ ನ ಸಿನಿಮಾದ ಟ್ರೈಲರ್ ರಿಲೀಸ್ ದಿನಾಂಕವನ್ನ ಅನೌನ್ಸ್ ಮಾಡಿಬಿಟ್ಟಿರುವ ಸಿನಿಮಾತಂಡ ಅಭಿಮಾನಿಗಳ ಕಾತರತೆಯನ್ನ ಇಮ್ಮಡಿಗೊಳಿಸಿದೆ.
ಅಂದ್ಹಾಗೆ ಟ್ರೈಲರ್ ಅನ್ನ ಈಗಾಗಲೇ ಸೆನ್ಸಾರ್ ಮಂಡಳಿ ಸದಸ್ಯರು ವೀಕ್ಷಿಸಿದ್ದಾರೆ.. ಟ್ರೈಲರ್ ನೋಡಿದ ಸದಸ್ಯರ ಪೈಕಿ ಒಬ್ಬರಾದ ಉಮೈರ್ ಸಾಂಧು ಅವರು ಟ್ರೈಲರ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ..
ಸಾಗರೋತ್ತರ ಸೆನ್ಸಾರ್ ಬೋರ್ಡ್ ಸದಸ್ಯರಾಗಿರುವ ಇವರು ತಾವು ಕೆಜಿಎಫ್ 2 ಸಿನಿಮಾದ ಸೆನ್ಸಾರ್ ನೋಡಿದ್ದಾಗಿಯೂ ಟ್ರೇಲರ್ ಅತ್ಯದ್ಭುತವಾಗಿದೆ ಎಂದಿದ್ದಾರೆ. ಟ್ರೇಲರ್ ನೋಡಿದ ಮೇಲೆ ನನಗೆ ಮಾತುಗಳೆ ಹೊರಡುತ್ತಿಲ್ಲ. ನಿಮಗಾಗಿ ಮಾನ್ಸ್ಟರ್ ಹಿಟ್ ಬರುತ್ತಿದೆ. ಯಶ್ಗೆ ದೊಡ್ಡ ಅಭಿನಂದನೆಗಳು ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ..
ಅಂದಹಾಗೆ ಮಾರ್ಚ್ 27 – 6.40 ಕ್ಕೆ ಸರಿಯಾಗಿ ಟ್ರೈಲರ್ ರಿಲೀಸ್ ಆಗಲಿದ್ದು , ಸುನಾಮಿಯಂತೆಯೇ ಟ್ರೈಲರ್ ಸೌಂಡ್ ಮಾಡಲಿದೆ.. ಎಲ್ಲಾ ದಾಖಲೆಗಳನ್ನೂ ಧೂಳಿಪಟ ಮಾಡೋ ನಿರೀಕ್ಷೆಯಿದೆ..