KGF 2 : ಏನ್ ಗುರು ಕೆಜಿಎಫ್ ಚಾಪ್ಟರ್ 2 ಹವಾ…?
ಕನ್ನಡ ಚಿತ್ರರಂದ ಹೆಮ್ಮೆ ಕೆಜಿಎಫ್ ಸಿನಿಮಾ ಹಲವು ಮೊದಲುಗಳಿಗೆ ನಾಂದಿಯಾಡಿದೆ. ಸಿನಿಮಾದ ಬಜೆಟ್ ಯಿಂದ ಹಿಡಿದು ಬಾಕ್ಸ್ ಆಫೀಸ್ ಕಲೆಕ್ಷನ್ ವರೆಗೂ ಕೆಜಿಎಫ್ ಸಿನಿಮಾ ಮಾಡಿದ್ದೇ ದಾಖಲೆಯಾಗಿದೆ.
ಅದರಂತೆ ಇದೀಗ ಕೆಜಿಎಫ್ ಸಿನಿಮಾ ಮತ್ತೊಂದು ಅಪರೂಪದ ಹೆಗ್ಗಳಿಕೆ ಪಾತ್ರವಾಗಿದೆ. ಗೂಗಲ್ ಮ್ಯಾಪ್ ನಲ್ಲಿ ಕೆಜಿಎಫ್ ಸಿನಿಮಾದ ಸೆಟ್ ವಿಳಾಸ ಸೃಷ್ಠಿಯಾಗಿದೆ. .
ಕೆಜಿಎಫ್ ಸಿನಿಮಾ ಶೂಟಿಂಗ್ ಮಾಡಿದ ಸ್ಥಳವನ್ನ ಗೂಗಲ್ ನಲ್ಲಿ ಕೆಜಿಎಫ್ ಫಿಲ್ಮ್ ಸೆಟ್ ಎಂದೇ ಮರುನಾಮಕರಣ ಮಾಡಲಾಗಿದೆ. ಈ ಮೂಲಕ ಕೆಜಿಎಫ್ ಸಿನಿಮಾ ಮತ್ತೊಂದು ಹೊಸ ದಾಖಲೆ ಮಾಡಿದೆ.
ಇನ್ನು ಈ ಸಿನಿಮಾ ಏಪ್ರಿಲ್ 14 ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗಲಿದ್ದು, ಅಂದು ಗಲ್ಲಪಟ್ಟಿಗೆಗೆ ಬೆಂಕಿ ಬೀಳೋದಂತೂ ಗ್ಯಾರಂಟಿ ಎನ್ನುತ್ತಿವೆ ಟ್ರೇಡ್ ವರ್ಗಗಳು..