ಕಬ್ಜದಲ್ಲಿ ಉಪ್ಪಿಗೆ ನಾಯಕಿ ಈ ಸೌತ್ ಸ್ಟಾರ್…??
ಭಾರತೀಯ ಸಿನಿಮಾರಂಗದಲ್ಲಿ ಬಹುನಿರೀಕ್ಷೆಯ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾಗಳ ಪೈಕಿ , ಉಪೇಂದ್ರ ನಟನೆಯ ಕಕಬ್ಜ ಕೂಡ ಒಂದು. ಈ ಸಿನಿಮಾ ಸಾಕಷ್ಟು ವಿಶೇಷತೆಗಳಿಮದ ಕೂಡಿದೆ.. ಅದ್ರಲ್ಲೂ ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರು ಭಾರ್ಗವ ಭಕ್ಷಿಯಾಗಿ ಕಾಣಿಸಿಕೊಳ್ತಿದ್ದಾರೆ. ಇಬ್ಬರು ಸೂಪರ್ ಸ್ಟಾರ್ ಗಳು , ಇಬ್ಬರೂ ಕನ್ನಡದ ಹೊರತಾಗಿ ಸೌತ್ ನಲ್ಲೂ ಗುರುತಿಸಿಕೊಂಡಿರುವ ನಟರಾಗಿದ್ದಾರೆ.,. ಇಬ್ಬರ ನಟನೆಯ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಯಿದೆ.
ನಿರ್ದೇಶಕ ಆರ್ ಚಂದ್ರು ನಿರ್ದೇಶನದ ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಂತೆ.. ಹೌದು.. ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಇಬ್ಬರಿಗೂ ನಾಯಕಿಯರು ಇರಲಿದ್ದಾರೆ.. ಅಂದ್ಹಾಗೆ ಉಪ್ಪಿ ಅವರಿಗೆ ಈಗಾಗಲೇ ಸೌತ್ ನ ಸ್ಟಾರ್ ನಟಿ ನಾಯಯಕಿಯಾಗಿ ಫಿಕ್ಸ್ ಆಗಿದ್ದಾರೆ ಎನ್ನಲಾಗಿದೆ.. ಅಂದ್ಹಾಗೆ ಸಿನಿಮಾದ ನಾಯಕಿಇಯಯರ ಬಗ್ಗೆ ಮಾರ್ಚ್ 7 ಅಂದ್ರೆ ನಾಳೆ ಸಿನಿಮಾ ತಂಡ ಅನಾವರಣಗೊಳಿಸಲಿದೆ..
ಮತ್ತೊಂದೆಡೆ ಸಿನಿಮಾದಲ್ಲಿ ಭಾರ್ಗವ ಭಕ್ಷಿಇಯಾಗಿರುವ ಕಿಚ್ಚ ಸುದೀಪ್ ಅವರಿಗೆ ನಾಯಕಿ ಯಾರೆಂಬ ಪ್ರಶ್ನೆ ಇದೆ.. ಇನ್ನೂ ತಮನ್ನಾ ಹೆಸರು ಜೋರಾಗಿ ಕೇಳಿಬರುತ್ತಿದ್ದು ಕಿಚ್ಚನಿಗೆ ತಮನ್ನಾ ನಾಯಕಿಯಾಗಬಹುದಾ ಅನ್ನೋ ಪ್ರಶ್ನೆಗಳು , ಅನುಮಾನಗಳು ಎದ್ದಿವೆ..