ಬೆಂಗಳೂರಿನಲ್ಲಿ ನಡೆಯುತ್ತಿರುವ 13ನೇ ಅಂತರಾಷ್ಟ್ರೀಯ ಸಿನಿಮಾ ಉತ್ಸವ 5 ನೇ ದಿನಕ್ಕೆ ಕಾಲಿಟ್ಟಿದೆ.. ಈ ಉತ್ಸವದಿಂದ ಕೆಲ ಉತ್ತಮ ಕಂಟೆಂಟ್ ಹೊಂದಿರುವ ಜೊತೆಗೆ ಅವಾರ್ಡ್ ವಿನ್ನಿಂಗ್ ಕನ್ನಡ ಸಿನಿಮಾಗಳನ್ನ ಕೈಬಿಡಲಾಗಿದೆ .. ಈ ಪೈಕಿ ರಿಷಬ್ ಶೆಟ್ಟಿ ನಿರ್ಮಾಣ ಸಂಸ್ಥೆಯಲ್ಲಿ ತಯಾರಾಗಿರುವ ‘ಪೆದ್ರೊ’ ಸಿನಿಮಾ ಸಹ ಒಂದು..
ಸಿನಿಮಾ ಉತ್ಸವದಲ್ಲಿ ಅವಕಾಶ ಸಿಗದಕ್ಕೆ ರಿಷಬ್ ಶೆಟ್ಟಿ ಅವರು ಬೇಸರಗೊಂಡಿದ್ದರು.. ಈ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಬೇಸರ ಹೊರಹಾಕಿದ್ದರು.. ಆದ್ರೆ ಬೆಂಗಳೂರಿನ ಸಿನಿಮಾ ಉತ್ಸವದಲ್ಲಿ ರಿಷಬ್ ಶೆಟ್ಟಿ ಅವರಿಗೆ ಅನ್ಯಾಯವಾದರೂ ಕೇರಳದಲ್ಲಿ ಅವರ ಸಿನಿಮಾಗೆ ನ್ಯಾಯ ಸಿಕ್ಕಿದೆ..
ಹೌದು … ಕೆಲವೇ ದಿನಗಳಲ್ಲಿ ಶುರುವಾಗಲಿರುವ ಕೇರಳ ಇಂಟರ್ ನ್ಯಾಷಿನಲ್ ಫಿಲ್ಮ್ ಫೆಸ್ಟಿವೆಲ್ ಗೆ ಪೆದ್ರೊ ಸಿನಿಮಾ ಆಯ್ಕೆಯಾಗಿದೆ. ವರ್ಲ್ಡ್ ಸಿನಿಮಾ ವಿಭಾಗದಲ್ಲಿ ಪೆದ್ರೋ ಪ್ರದರ್ಶನಗೊಳ್ಳಲಿದ್ದು , ರಿಷಬ್ ಅಭಿಮಾನಿಗಳು ಸಂತಸಗೊಂಡಿದ್ದು , ಸಿನಿಮಾಗೆ ಶುಭ ಹಾರೈಸುತ್ತಿದ್ದಾರೆ.. ಅಂದ್ಹಾಗೆ ಈ ಸಿನಿಮಾ ನಾಗೇಶ್ ಹೆಗ್ಡೆ ನಿರ್ದೇಶನದಲ್ಲಿ ಮೂಡಿ ಬಂದಿದೆ. ನಿರ್ದೇಶಕರ ತಂದೆಯೇ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ..