ಬಾಹುಬಲಿ ಕಟ್ಟಪ್ಪನ ಬಗ್ಗೆ ಪ್ರಭಾಸ್ ಹೇಳಿದ್ದೇನು ..??
ಹೈದರಾಬಾದ್ : ಬಾಹುಬಲಿ ಸಿನಿಮಾ ಸೌತ್ ಸಿನಿಮಾ ಇಂಡಸ್ಟ್ರಿಯ ದದಿಕ್ಕನ್ನೇ ಬದಲಾಯಿಸಸಿ , ಬಾಲಿವುಡಡ್ ಹವಾ ಕಡಿಮೆ ಮಾಡಿದ್ದ ಸಿನಿಮಾ… ವಿಶ್ವಕ್ಕೆ ಭಾರತೀಯ ಸಿನಿಮಾರಂಗದ ಪವರ್ ಪರಿಚಯ ಮಾಡಿಸಿದ್ದ ಸಿನಿಮಾ.. ಈ ಸಿನಿಮಾದಲ್ಲಿ ಪ್ರಭಾಸ್ , ರಾಣಾ ದಗ್ಗುಬಾಟಿ , ಅನುಷ್ಕಾ ಶೆಟ್ಟಿ , ತಮನ್ನಾ ಬಾಟಿಯಾ ಸತ್ಯರಾಜ್ ರ ಕಟ್ಟಪಪ್ಪನ ಪಾತ್ರ , ರಮ್ಯಾ ಕೃಷ್ಣನ್ ಅವರ ಪಾತ್ರ ಅತಿ ಹೆಚ್ಚು ಗಮನ ಸೆಳೆದಿತ್ತು..
ಈ ಸನಿಮಾದಲ್ಲಿ ಕಟ್ಟಪ್ಪನ ಹಾಗೂ ಬಾಹುಬಲಿಯ ನಡುವೆ ಆತ್ಮೀಯವಾದ ಬಾಂಧವ್ಯವಿತ್ತು.. ಆದ್ರೆ ಇದು ಸಿನಿಮಾಗಷ್ಟೇ ಸೀಮಿತವಾಗಿಲ್ಲ.. ಹೌದು ಸಿನಿಮಾದ ಹೊರಗೂ ಇವರಿಬ್ಬರ ಸಂಬಂಧ ಅಷ್ಟೇ ಚನಾಗಿದೆ.. ಅದಕ್ಕೆ ಉದಾಹರಣೆ , ಹೈದ್ರಾಬಾದದ್ ನಲ್ಲಿ ನಡೆದ ರಾಧೆ ಶ್ಯಾಮ್ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ನಲ್ಲಿ ಪ್ರಭಾಸ್ ಸತ್ಯರಾಜ್ ಅವರನ್ನ ತಮ್ಮ ಲಕ್ಕಿ ಮ್ಯಾಸ್ಕಟ್ ಎಂದು ಕರೆದಿದ್ದಾರೆ.
ಹೌದು… ಭಾರತೀಯ ಸಿನಿಮಾರಂಗದ ಮೋಸ್ಟ್ ಆಂಟಿಸಿಪೇಟೆಡ್ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ರಾಧೆ ಶ್ಯಾಮ್ ಪ್ರಚಾರದಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ.. ಇದೇ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ನಲ್ಲಿ ಭಾಗಿಯಾಗಿದ್ದ ವೇಳೆ ಮಾತನಾಡಿದ ಪ್ರಭಾಸ್, ಸತ್ಯರಾಜ್ ಅವರು ನನ್ನ ಅದೃಷ್ಟದ ಮ್ಯಾಸ್ಕಾಟ್.
ಅವರೊಂದಿಗೆ ಮಿರ್ಚಿ ಸಿನಿಮಾದಲ್ಲಿ ಕೆಲಸ ಮಾಡಿದ್ದೆ. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ನಂತರ ನಟಿಸಿದ ಬಾಹುಬಲಿ ಸಿನಿಮಾ ಕೂಡ ಬ್ಲಾಕ್ ಬಾಸ್ಟರ್ ಹಿಟ್ ಆಗಿತ್ತು. ರಾಧೆ ಶ್ಯಾಮ್ ನಮ್ಮಿಬ್ಬರ ವೃತ್ತಿ ಜೀವನದಲ್ಲಿ ಮತ್ತೊಂದು ಮೈಲಿಗಲ್ಲು ಆಗಲಿದೆ ಎಂಬ ವಿಶ್ವಾಸ ನನಗಿದೆ. ಈ ಚಿತ್ರದಲ್ಲಿ ಅವರ ಪಾತ್ರವು ಪವರ್ ಫುಲ್ ಮತ್ತು ಕುತೂಹಲಕಾರಿಯಾಗಿದೆ ಎಂದಿದ್ದಾರೆ.