ಮುಂದಿನ ಸಿನಿಮಾಗೆ ಮಲಯಾಳಂ ನಟಿ ಆಯ್ಕೆಯ ಸಲಹೆ ನೀಡಿದ ಪ್ರಭಾಸ್
ಬಾಹುಬಲಿ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಪ್ರಭಾಸ್ ಅವರು ಸದ್ಯ ಸಾಲು ಸಾಲು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ರಾಧೆ ಶ್ಯಾಮ್ ಸಿನಿಮಾ ರಿಲೀಸ್ ಗೆ ಕಕೆಲವೇ ದಿನಗಳಿದ್ದು , ಪ್ರೀ ರಿಲೀಸ್ ನಡಡೆಸಿದೆ.. ಪ್ರಾಚಾರದಲ್ಲಿ ಬಾಹುಬಲಿ ಬ್ಯುಸಿಯಾಗಿದ್ದಾರೆ..
ಜೊತೆಗೆ ಆದದಿಪುರುಷ್ , ಸಲಾರರ್ ನಲ್ಲೂ ಪ್ರಭಾಸ್ ಬ್ಯುಸಿಯಿದ್ದಾರೆ.. ಮುಂದೆ ರಾಜಾ ಡೀಲಕ್ಸ್ , ಸ್ಪಿರಿಟ್ ಸೇರಿ ಇನ್ನೂ ಕೆಲವು ಪ್ರಾಜೆಕ್ಟ್ ಗಳಿವೆ.. ಈ ನಡುವೆ ತಮ್ಮ ರಾಜಾ ಡೀಲಕ್ಸ್ ಸಿನಿಮಾಗಾಗಿ ಹೀಗೊಂದು ಬೇಡಿಕೆಯನ್ನ ಪ್ರಭಾಸ್ ಮುಂದಿಟ್ಟಿದ್ದಾರೆ ಎನ್ನಲಾಗ್ತಿದೆ..
ಅದೇನೆಂದ್ರೆ ಶೀಘ್ರವೇ ಸಿಟ್ಟೇರಲಿರುವ ರಾಜಾ ಡೀಲಕ್ಸ್ ಸಿನಿಮಾಗೆ ಮಲಯಾಳಂ ನಟಿ ಮಾಳವಿಕಾ ಮೋಹನನ್ ನಾಯಕಿಯಾಗಬೇಕೆಂದು ಪ್ರಭಾಸ್ ಸಿನಿಮಾ ತಂಡಕ್ಕೆ ಸಲಹೆ ನೀಡಿದ್ದಾರೆ ಎನ್ನಲಾಗ್ತಿದೆ..
ಹೌದು.. ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿರುವ ಗಾಸಿಪ್ ಪ್ರಕಾರ ನಿರ್ದೇಶಕರ ಬಳಿ ಪ್ರಭಾಸ್ ಮಾಳವಿಕ ಮೋಹನನ್ ರನ್ನ ಆಯ್ಕೆ ಮಾಡುವ ಸಲಹೆ ನೀಡದ್ದಾರೆ ಎನ್ನಲಾಗ್ತಿದೆ.. ಅಂದ್ಹಾಗೆ ಮಾರುತಿ ಎಂಬುವವರು ಈ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿದ್ದಾರೆ..
ಅಂದ್ಹಾಗೆ 28 ವರ್ಷದ ನಟಿ ಮಾಳವಿಕ ಮೋಹನನ್ ಮಾಲಿವುಡ್ ನ ಹಿರಿಯ ಛಾಯಾಗ್ರಾಹಕರಾಗಿರುವ ಕೆ ಯು ಮೋಹನನ್ ಅವರ ಪುತ್ರಿಯಾಗಿದ್ದಾರೆ. ತಮಿಳು ಹಾಗೂ ಮಲಯಾಳಂ ಸಿನಿಮಾಗರಂಗದಲ್ಲಿ ಬ್ಯುಸಿಯಿರುವ ಮಾಳಬಿಕ 2013ರಲ್ಲಿ ತೆರೆಕಂಡಿದ್ದ ಮಲಯಾಳಂ ಸಿನಿಮಾ ಪಟ್ಟಂ ಪೋಲೆ , ರಜನಿಕಾಂತ್ ನಟನೆಯ ಪೆಟ್ಟಾ , ದಳಪತಿ ವಿಜಯ್ ಅಭಿನಯದ ಮಾಸ್ಟರ್ ಸಿನಿಮಾ , ಧನುಷ್ ಅಭಿನಯದ ಮಾರಾನ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ..