ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಝೀರೋ ಕಾಂಟ್ರವರ್ಸಿ ಹೊಂದಿರುವ ರಾಧಿಕಾ ಇಂದು 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಆದ್ರೆ ಅಪ್ಪು ನಿಧನದ ಹಿನ್ನೆಲೆಯಲ್ಲಿ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರುಲು ರಾಧಿಕಾ ಪಂಡಿತ್ ನಿರ್ಧರಿಸಿದ್ದಾರೆ.
2008ರಲ್ಲಿ ತೆರೆಗೆ ಬಂದ ‘ಮೊಗ್ಗಿನ ಮನಸು’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ರಾಧಿಕಾ ಪಂಡಿತ್ ಎಂಟ್ರಿ ಕೊಟ್ಟರು.
ಈ ಸಿನಿಮಾ ರಾಧಿಕಾ ಅವರಿಗೆ ಹೆಸರು ತಂದುಕೊಡ್ತು. ಆ ನಂತರ ಸ್ಯಾಂಡಲ್ವುಡ್ ನಲ್ಲಿ ಬೇಡಿಕೆಯ ನಟಿಯಾಗಿ ಹೊರಹೊಮ್ಮಿ ಸ್ಯಾಂಡಲ್ ವುಡ್ ನ ಸಿಂಡ್ರಲಾ ಅಂತಾ ಅಭಿಮಾನಿಗಳಿಂದ ಕರೆಸಿಕೊಂಡರು.
ಅಂದಹಾಗೆ ರಾಧಿಕಾ ಪಂಡಿತ್ ಅವರು ನಟ ಧ್ರುವ ಸರ್ಜಾ, ಪುನೀತ್ ರಾಜ್ಕುಮಾರ್, ಶಿವರಾಜ್ ಕುಮಾರ್ ಸೇರಿ ಅನೇಕ ಸ್ಟಾರ್ ನಟರ ಜತೆ ತೆರೆಹಂಚಿಕೊಂಡಿದ್ದಾರೆ.
ನಟ ಯಶ್ ಅವರೊಂದಿಗೆ ಮದುವೆಯ ನಂತರ ಬಣ್ಣದ ಬದುಕಿನಿಂದ ದೂರ ಇದ್ದಾರೆ.