ಜೇಮ್ಸ್ :
ಪುನೀತ್ ಗೆ ವಾಯ್ಸ್ ಕೊಡುವಾಗ ನಾನು ಹೆದರಿಕೊಂಡು ಮಾಡಿದೆ. – ಶಿವಣ್ಣ
ನಟಿ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್ ಗಾಗಿ ಅಭಿಮಾನಿಗಳು ಬೆಟ್ಟಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಪ್ಪು ಹುಟ್ಟು ಹಬ್ಬದ ಪ್ರಯುಕ್ತ ಇದೆ ತಿಂಗಳ ಮಾರ್ಚ್ 17 ರಂದು ಚಿತ್ರ ಬಿಡುಗೆಯಾಗಲಿದೆ. ಹಾಗಾಗಿ ನಿನ್ನೆ ಬೆಂಗಳೂರಿನಲ್ಲಿ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು.
ಈ ಕಾರ್ಯಕ್ರಮದ ವೇಳೆ ಶಿವರಾಜ್ ಕುಮಾರ್ ಮಾತನಾಡಿದರು. ಸಾಕಷ್ಟು ವಿಷಯಗಳನ್ನ ಮುಕ್ತವಾಗಿ ಮನಸ್ಸು ಬಿಚ್ಚಿ ಮಾತನಾಡಿದರು.
‘ಮಾತನಾಡೋಕೆ ಕಷ್ಟ ಆಗುತ್ತಿದೆ. ನಾಲ್ಕು ತಿಂಗಳಿಂದ ನಗ್ತೀವೀ, ಊಟ ಮಾಡ್ತೀವಿ, ಶೂಟಿಂಗ್ನಲ್ಲಿ ಭಾಗಿ ಆಗ್ತೀವಿ. ಆದರೆ, ಮನಸ್ಸಲ್ಲಿರೋ ನೋವು ಕಡಿಮೆ ಆಗುತ್ತಿಲ್ಲ. ಬದುಕಬೇಕು ಬದುಕುತ್ತಾ ಇದ್ದೇವೆ. ಅಪ್ಪು ಚಿಕ್ಕ ವಯಸ್ಸಿಗೆ ಹೋದ. ನೆನಪಿಸಿಕೊಂಡಾಗೆಲ್ಲ ನೋವು ಜಾಸ್ತಿನೇ ಆಗುತ್ತದೆ. ಪ್ರೆಸ್ಮೀಟ್ನಲ್ಲಿ ನಾನು ಏನು ಮಾತನಾಡೋಕೆ ಸಾಧ್ಯ? ಇಲ್ಲಿ ಮಾತನಾಡೋದು ಕಷ್ಟ’ ಎಂದರು ಶಿವರಾಜ್ಕುಮಾರ್.
‘ಅಪ್ಪು ವಾಯ್ಸ್ಗೆ ನಾನೇ ಡಬ್ಬಿಂಗ್ ಮಾಡಬೇಕು ಎಂದಾಗ ನಾನು ಹೇಳಿದೆ. ಅವನದ್ದೇ ವಾಯ್ಸ್ ಬಳಕೆ ಮಾಡೋಕೆ ಆಗತ್ತ ನೋಡಿ ಎಂದು ಹೇಳಿದ್ದೆ. ಮಿಮಿಕ್ರಿ ಮಾಡುವವರ ಬಳಿ ಮಾಡಿಸೋಕೆ ಟ್ರೈ ಮಾಡಿ ಎಂದಿದ್ದೆ. ಚೇತನ್ ಅವರು ಟ್ರೈ ಮಾಡಿದರು. ಆದರೆ, ಸರಿಯಾಗಿ ಬರಲಿಲ್ಲ. ನಾನು ತುಂಬಾನೇ ಹೆದರಿಕೊಂಡು ಮಾಡಿದೆ. ಅಪ್ಪು ಅವರದ್ದು ಅದ್ಭುತ ವಾಯ್ಸ್ ಆಗಿತ್ತು. ಸ್ವಲ್ಪ ಟ್ರೈ ಮಾಡಿದ್ದೇನೆ. ಅಪ್ಪು ವಾಯ್ಸ್ಗೆ ಎರಡು ದಿನ ಡಬ್ ಮಾಡಿದ್ದೇನೆ’ ಎಂದರು ಶಿವಣ್ಣ.
ಯಾವಾಗ ಕಾಲ್ ಮಾಡಿದ್ರೂ ಶಿವಣ್ಣ ಅಂತಿದ್ದ. ಯಾವಾಗಲೂ ಹಗ್ ಮಾಡುವಾಗ ಹೃದಯಕ್ಕೆ ತಲೆ ಇಟ್ಟು ಟಚ್ ಆಗುವ ರೀತಿಯಲ್ಲಿ ಹಗ್ ಮಾಡುತ್ತಿದ್ದ. ಸಿನಿಮಾದಲ್ಲಿ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಪುನೀತ್ ಇಂಡಸ್ಟ್ರಿಯವರ ಹಾಗೂ ಅಭಿಮಾನಿಗಳ ಹಾರ್ಟ್ನಲ್ಲಿ ಸದಾ ಇರ್ತಾನೆ. ಅಪ್ಪು ಅನೇಕರಿಗೆ ಸ್ಫೂರ್ತಿ ಆಗಿದ್ದ’ ಎಂದು ಭಾವುಕರಾದರು ಶಿವಣ್ಣ.