ಬಿಕೆಟಿ ಏರಿಯಾದಲ್ಲಿ ‘James’ಗೆ 12 ಕೋಟಿ ಆಫರ್ ಕೊಟ್ಟ ವಿತರಕರು..??
ಕರ್ನಾಟಕದಲ್ಲಿ ಅಪ್ಪು ಅಭಿಮಾನಿಗಳು ಮಾರ್ಚ್ 17 ರಿಂದ ಜಾತ್ರೆ ಶುರುಮಾಡಲಿದ್ದಾರೆ. ಅಪ್ಪು ಹುಟ್ಟುಹಬ್ಬ ಒಂದೆಡೆಯಾದ್ರೆ , ಅವರ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಿಲೀಸ್ ಆಗಿ ಧೂಳೆಬ್ಬಿಸಲಿದೆ.
ವಿಶ್ವಾದ್ಯಂತ 15 ಕ್ಕೂ ಹೆಚ್ಚು ದೇಶಗಳಲ್ಲಿ ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಸಿನಿಮಾ ರಿಲೀಸ್ ಆಗ್ತಿದೆ.. ಅಂದ್ಹಾಗೆ ಈ ಸಿನಿಮಾ ಕನ್ನಡ , ತಮಿಳು , ತೆಲುಗು , ಮಲಯಾಳಂ , ಹಿಂದಿಯಲ್ಲಿ ರಿಲೀಸ್ ಆಗಲಿದೆ.. ಅದ್ಧೂರಿಯಾಗಿಯೇ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ..
ಸಿನಿಮಾದ ಬಗ್ಗೆ ದಿನಕ್ಕೊಂದು ಅಪ್ ಡೇಟ್ಸ್ ಸಿಗ್ತಿದೆ. ಸಿನಿಮಾಗೆ ಏರಿಯಾಗಳ ವ್ಯಾಪಿಯಲ್ಲಿ ವಿತರಕರ ನಡುವೆ ಭಾರೀ ಡಿಮ್ಯಾಂಡ್ ಬರುತ್ತಿದೆ… ಇದೀಗ ಬೆಂಗಳೂರು , ಕೋಲಾರ , ತುಮಕೂರು ಅಂದ್ರೆ ಬಿಕಟಿ ಏರಿಯಾದಲ್ಲಿ ಸಿನಿಮಾದ ವಿತರಣೆ ಹಕ್ಕಿಗೆ ವಿತರಕರು ಮುಗಿಬಿದ್ದಿದ್ದಾರೆ ಎನ್ನಲಾಗ್ತಿದೆ.. ಅದ್ರಲ್ಲೂ ಓರ್ವ ವಿತರಕರಿಂದ ನಿರ್ಮಾಪಕರಿಗೆ ಬರೋಬ್ಬರಿ 12 ಕೋಟಿ ಆಫರ್ ಸಿಕ್ಕಿದ್ಯಂತೆ .. ಆದ್ರೂ ನಿರ್ಮಾಕರೂ ಈ ಆಫರ್ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
ಅಂದ್ಹಾಗೆ ಒಂದೇ ಏರಿಯಾಗೆ ಈ ಪ್ರಮಾಣದಲ್ಲಿ ಹಣ ಕೊಡಲು ಮುಂದಾಗಿರೋದು ಇದೇ ಮೊದಲಂತೆ.. ಆದ್ರೂ ನಿರ್ಮಾಕರು ಯಾಕೆ ಈ ಆಫರ್ ತಿರಸ್ಕರಿಸಿದರು ಎನ್ನುವ ಪ್ರಶ್ನೆ ಕಾಡತೊಡಗಿದೆ. ಅಂದ್ಹಾಗೆ ಜೇಮ್ಸ್ ಸಿನಿಮಾ ರಿಲೀಸ್ ಆದ ಒಂದು ವಾರ ಪೂರ್ತಿ ಮತ್ಯಾವುದೇ ಸಿನಿಮಾಗಳು ರಾಜ್ಯದ ಥಿಯೇಟರ್ ಗಳಲ್ಲಿ ರಿಲೀಸ್ ಆಗುವುದಿಲ್ಲ.. ಒಂದು ವಾರ ಪೂರ್ತಿ ಅಪ್ಪುಗೆ ಥಿಯೇಟರ್ ಗಳಲ್ಲಿ ಗೌರವ ಸೂಚಿಸಲಾಗುತ್ತದೆ. ಬಿಡುಗಡೆ ಆಗುತ್ತಿರುವ ವಾರ ಯಾವುದೇ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಸಿನಿಮಾ ವಿಶ್ವಾದ್ಯಂತ ಸುಮಾರು 4000 ಥಿಯೇಟರ್ ಗಳಲ್ಲಿ ರಿಲೀಸ್ ಆಗುತ್ತಿದೆ..