ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿತ್ತು.. ಆಗಷ್ಟೇ ಬೆಳೆಯುತ್ತಿದ್ದ ನಟರಿಗೆ ರಶ್ಮಿಕಾ ಜೋಡಿಯಾಗಿದ್ದ ಸಿನಿಮಾಗಳೂ ಸೂಪರ್ ಹಿಟ್ ಆಗಿದ್ದವು.. ಇದುವರೆಗೂ ರಶ್ಮಿಕಾಗೆ ಸಿಕ್ಕಿದ್ದೆಲ್ಲಾ ಗೆಲುವೇ..
ಸ್ಟಾರ್ ನಟರ ಸಿನಿಮಾಗಳಲ್ಲಿ ಮಿಂಚುತ್ತಾ ಬಾಲಿವುಡ್ ಗೂ ಪಾದಾರ್ಪಣೆ ಮಾಡಿರೋ ರಶ್ಮಿಕಾ ಇತ್ತೀಚೆಗಷ್ಟೇ ತೆರೆಕಂಡು ಬಾಕ್ಸ್ ಆಫೀಸ್ ನಲ್ಲಿ ಮ್ಯಾಜೆಕ್ ಮಾಡಿದ ಪುಷ್ಪ ಸಿನಿಮಾದ ನಂತರ ಅಂತೂ ರಶ್ಮಿಕಾ ಯಶಸ್ಸಿನಲ್ಲಿ ತೇಲಾಡುತ್ತಿದ್ದರು..
ಆದ್ರೀಗ ರಶ್ಮಿಕಾಗೆ ಮೊದಲ ಸೋಲಾಗಿದೆ.. ಆಡವಾಳ್ಳು ಮೀಕು ಜೋಹಾರ್ಲು ಸಿನಿಮಾ ರಶ್ಮಿಕಾಗೆ ಮೊದಲ ಸೋಲಿನ ರುಚಿ ತೋರಿಸಿದೆ.. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮ್ಯಾಜಿಕ್ ಮಾಡಿಲ್ಲ. ಥಿಯೇಟರ್ ಗಳು ಖಾಲಿ ಖಾಲಿಯಾಗಿವೆ.. ರಶ್ಮಿಕಾ ಪ್ರಸ್ತುತ ಬಹುಬೇಡಿಕೆಯ ನಟಿಯರ ಪೈಕಿ ಒಬ್ಬರು.. ಆದ್ರೆ ಅದೃಷ್ಟದ ರಾಣಿ ರಶ್ಮಿಕಾಗೆ ಈಗ ಸೋಲು ಅಂದ್ರೇನು ಅನ್ನೋದು ಗೊತ್ತಾಗಿದೆ..
ರಶ್ಮಿಕಾ ಮಂದಣ್ಣ ಜೊತೆಗೆ ನಟ ಶರ್ವಾನಂದ್ ಅಭಿನಯದ ಆಡವಾಳ್ಳು ಮೀಕು ಜೋಹಾರ್ಲು ಸಿನಿಮಾಗೆ ಪ್ರೇಕ್ಷರಿಂದ ಅಷ್ಟಾಗಿ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ.. ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ ರಶ್ಮಿಕಾ ಈ ಸಿನಿಮಾ ಒಪ್ಪಿ ತಪ್ಪು ಮಾಡಿದ್ದಾರೆ ಎಂದೆಲ್ಲಾ ಹೇಳ್ತಿದ್ದಾರೆ ನೆಟ್ಟಿಗರು..
ಮಾರ್ಚ್ 04 ಸಿನಿಮಾ ರಿಲೀಸ್ ಆಗಿದ್ದು , ಕಲೆಕ್ಷನ್ ಡಲ್ ಆಗಿದೆ. ಈ ಸಿನಿಮಾದಲ್ಲಿ ರಶ್ಮಿಕಾ, ಶರ್ವಾನಂದ್, ಖುಷ್ಬು ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.. ರಶ್ಮಿಕಾ ಮುಂದೆ ಇನ್ನೂ ಹಲವಾರು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ಧಾರೆ.. ಅವರ ನಟನೆಯ ಬಾಲಿವುಡ್ ನ 2 ಸಿನಿಮಾಗಳು ರಿಲೀಸ್ ಆಗಬೇಕಿದೆ.. ಪುಷ್ಪ 2 ಸಿನಿಮಾದಲ್ಲಿ ರಶ್ಮಿಕಾ ಬ್ಯುಸಿಯಿರಲಿದ್ದಾರೆ..
ಪುಷ್ಪ 2 ಸಿನಿಮಾ ಸೂಪರ್ ಹಿಟ್ ಆಗೋದ್ರಲ್ಲಿ ಡೌಟೇ ಇಲ್ಲ.. ಆದ್ರೆ ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿರುವ ರಶ್ಮಿಕಾ ಸಿನಿಮಾಗಳು ರಿಲೀಸ್ ಆದ ನಂತರ ಅವರ ಬಾಲಿವುಡ್ ಭವಿಷ್ಯ ನಿರ್ಧಾರವಾಗುವ ಸಾಧ್ಯತೆಯಿದೆ.