ತಬಲಾ ಜಗತ್ತಿನ “ಉಸ್ತಾದ್” ಜಾಕಿರ್ ಹುಸೇನ್ 71ನೇ ಹುಟ್ಟುಹಬ್ಬ
ಇಂದು ಖ್ಯಾತ ತಬಲಾ ವಾದಕ ಜಾಕಿರ್ ಹುಸೇನ್ ಅವರ 71ನೇ ಹುಟ್ಟುಹಬ್ಬ. ಹುಸೇನ್ ತನ್ನ ಬೆರಳು ಮತ್ತು ಕೈಗಳ ಚಲನೆಯಿಂದ ಮಾಯಾಲೋಕವನ್ನೇ ಸೃಷ್ಟಿಸುವ ಮಾಂತ್ರಿಕ. ಅದಕ್ಕೆಂದೆ ಅವರನ್ನು ‘ಉಸ್ತಾದ್’ ಜಾಕಿರ್ ಹುಸೇನ್ ಎಂದು ಕರೆಯುತ್ತಾರೆ.
ಜಾಕಿರ್ ಹುಸೇನ್ 9 ಮಾರ್ಚ್ 1951 ರಂದು ಮುಂಬೈನಲ್ಲಿ ಜನಿಸಿದರು. ತಮ್ಮ ತಂದೆ ಅಲ್ಲಾ ರಖಾ ಖಾನ್ ಅವರಿಂದ ತಬಲಾ ವಾದ್ಯದ ಓಂಕಾರ ಕಲಿತುಕೊಂಡರು. ಅವರ ತಂದೆ ಸ್ವತಃ ಪ್ರಸಿದ್ಧ ತಬಲಾ ವಾದಕರಾಗಿದ್ದರು.
ಜಾಕಿರ್ ಹುಸೇನ್ ಕೇವಲ ಮೂರು ವರ್ಷ ವಯಸ್ಸಿನಲ್ಲೇ ತನ್ನ ತಂದೆಯಿಂದ ಪಖಾವಾಜ್ ತಾಳವನ್ನ ನುಡಿಸುವುದು ಕಲಿತಿದ್ದರು. ಕೇವಲ 11 ನೇ ವಯಸ್ಸಿನಲ್ಲಿ, ಅವರು ತಮ್ಮ ಮೊದಲ ಸಂಗೀತ ಕಚೇರಿಯನ್ನು ಅಮೆರಿಕಾದಲ್ಲಿ ನೀಡಿದ್ದರು. 1973 ರಲ್ಲಿ ತಮ್ಮ ಮೊದಲ ಆಲ್ಬಂ ‘ಲಿವಿಂಗ್ ಇನ್ ದಿ ಮೆಟೀರಿಯಲ್ ವರ್ಲ್ಡ್’ ಅನ್ನು ಪ್ರಾರಂಭಿಸಿದ್ದರು. ಜಾಕಿರ್ ಹುಸೇನ್ ಅವರ ಈ ಆಲ್ಬಂ ಸಾರ್ವಜನಿಕರಿಂದ ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿತು.
ಹುಸೇನ್ ಭಾರತದಲ್ಲಷ್ಟೇ ಅಲ್ಲದೆ ವಿಶ್ವದಲ್ಲೇ ಬಹಳ ಪ್ರಸಿದ್ಧಿ ಪಡೆದಿದ್ದಾರೆ. ಯುಎಸ್ ನ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಆಲ್-ಸ್ಟಾರ್ ಗ್ಲೋಬಲ್ ಕನ್ಸರ್ಟ್‌ನಲ್ಲಿ ಭಾಗವಹಿಸಲು ವೈಟ್ ಹೌಸ್‌ಗೆ ಆಹ್ವಾನಿಸಿದ್ದ ಮೊದಲ ಭಾರತೀಯ ಸಂಗೀತಗಾರ ಜಾಕಿರ್ ಹುಸೇನ್. 1992 ರಲ್ಲಿ ಬಿಡುಗಡೆಯಾದ ‘ದ ಪ್ಲಾನೆಟ್ ಡ್ರಮ್’ ಮತ್ತು 2009 ರಲ್ಲಿ ‘ಗ್ಲೋಬಲ್ ಡ್ರಮ್ ಪ್ರಾಜೆಕ್ಟ್’ ಗಾಗಿ ಎರಡು ಬಾರಿ ಸಂಗೀತ ಜಗತ್ತಿನಲ್ಲಿ ಅತಿದೊಡ್ಡ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಇದರೊಂದಿಗೆ ಪದ್ಮಶ್ರೀ, ಪದ್ಮವಿಭೂಷಣ ಮತ್ತು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಹುಸೇನ್ ಅವರಿಗೆ ತಬಲಾ ನುಡಿಸುವ ಆಸಕ್ತಿ ಮಾತ್ರವಲ್ಲ, ನಟನೆಯಲ್ಲೂ ಒಲವು ಇತ್ತು. 1983 ರಲ್ಲಿ, ಜಾಕಿರ್ ಹುಸೇನ್ ‘ಹೀಟ್ ಅಂಡ್ ಡಸ್ಟ್’ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಇದರ ನಂತರ, ಅವರು 1988 ರಲ್ಲಿ ‘ದಿ ಪರ್ಫೆಕ್ಟ್ ಮರ್ಡರ್’, 1992 ರಲ್ಲಿ ‘ಮಿಸ್ ಬ್ಯಾಟಿ ಚಿಲ್ಡ್ರನ್’ ಮತ್ತು 1998 ರಲ್ಲಿ ‘ಸಾಜ್’ ಚಿತ್ರದಲ್ಲಿ ನಟನೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.
1978 ರಲ್ಲಿ, ಜಾಕಿರ್ ಹುಸೇನ್ ಕಥಕ್ ನೃತ್ಯಗಾರ್ತಿ ಆಂಟೋನಿಯಾ ಮಿನಿಕೋಲಾ ಅವರನ್ನು ವಿವಾಹವಾದರು. ಅವರು ಇಟಾಲಿಯನ್ ಮತ್ತು ಹುಸೇನ್ ಅವರ ಮ್ಯಾನೇಜರ್ ಕೂಡ ಆಗಿದ್ದರು. ಈ ದಂಪತಿಗಳಿಗೆ ಅನಿಸಾ ಖುರೇಷಿ ಮತ್ತು ಇಸಾಬೆಲ್ಲಾ ಖುರೇಷಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಭಾರತೀಯ ಶಾಸ್ತ್ರೀಯ ಸಂಗೀತ ಕ್ರೀಡಾಂಗಣಕ್ಕೆ ಅಲ್ಲ, ಅದು ಕೋಣೆಯ ಸಂಗೀತ ಎಂದು ಜಾಕಿರ್ ಹುಸೇನ್ ಆಗಾಗ್ಗೆ ಹೇಳುತ್ತಿರುತ್ತಾರೆ.
On the tune of Zakir Hussain’s tabla, the world says ‘Wow Ustad’, this skill was inherited from his father