ನವರಸ ನಾಯಕ ಜಗ್ಗೇಶ್ ಅವರು ಈ ಬಾರಿ ಬರ್ತ್ ಡೇ ಆಚರಿಸಿಕೊಳ್ಳುತ್ತಿಲ್ಲ.. ಪ್ರತಿ ವರ್ಷದಂತೆ ಈ ಬಾರಿ ಮಂತ್ರಾಲಯದಲ್ಲಿ ಅಭಿಮಾನಿಗಳ ಜೊತೆಗೆ ಜಗ್ಗೇಶ್ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ.. ಈ ಬಗ್ಗೆ ಟ್ವೀಟ್ ಮಾಡಿ ಜಗ್ಗೇಶ್ ಅವರು ಅಭಿಮಾನಿಗಳಿಗೆ ತಿಳಿಸಿದ್ಧಾರೆ..
ಅಪ್ಪು ಅವರ ಅಗಲಿಕೆ ನೋವಿನಲ್ಲಿರುವ ಜಗ್ಗೇಶ್ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಎಲ್ಲ ಸಡಗರ ಸಂಭ್ರಮದಿಂದ ದೂರವಿರಲು ನಿರ್ಧಾರ ಮಾಡಿದ್ದಾರೆ. ಅಂದ್ಹಾಗೆ ಮಾರ್ಚ್ 17 ರಂದೇ ಜಗ್ಗೇಶ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಬ್ಬರದ್ದೂ ಹುಟ್ಟುಹಬ್ಬ.. ಆದರೆ ಈ ಬಾರಿ ಅಪ್ಪು ಅವರು ನಮ್ಮೊಂದಿಗಿಲ್ಲ.. ಆದ್ರೂ ಅವರ ಹುಟ್ಟುಹಬ್ಬದ ದಿನ ಅವರ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ರಿಲೀಸ್ ಆಗುತ್ತಿದೆ.. ಅಭಿಮಾನಿಗಳು ಜೇಮ್ಸ್ ಜಾತ್ರೆ ಶುರು ಮಾಡಲು ತಯಾರಿ ನಡೆಸಿಕೊಳ್ತಿದ್ಧಾರೆ..
ಅದೇ ದಿನವೇ ಜಗ್ಗೇಶ್ ಅಅವರ ಹುಟ್ಟು ಹಬ್ಬ… ಆದ್ರೆ ಬರ್ತ್ ಡೇ ಆಚರಿಸಿಕೊಳ್ಳದೇ ಇರಲು ನಿರ್ಧಾರ ಮಾಡಿದ್ದಾರೆ.. ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್ ಅವರು… “ಈ ಬಾರಿ ನನ್ನ 59ನೇ ಹುಟ್ಟು ಹಬ್ಬವನ್ನು ಆಚರಿಸುವುದಿಲ್ಲ ಹಾಗೂ ಮನಸ್ಸೂ ಇಲ್ಲ. ಕಾರಣ ಪ್ರತಿ ಮಾರ್ಚ್ 17ಕ್ಕೆ ತಪ್ಪದೇ ಬರುತ್ತಿದ್ದ ಪುನೀತ್ ಕರೆ ಮತ್ತೆಂದೂ ಬರದಂತಾಗಿದೆ” ಎಂದು ಬರೆದುಕೊಂಡು , ಅಪ್ಪು ಜೊತೆಗಿನ ಕೊನೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ.