ಮಾರ್ಚ್ 11 ಕ್ಕೆ ಜೇಮ್ಸ್ ಇಂಟ್ರಡಕ್ಷನ್ ಹಾಡು ರಿಲೀಸ್..!!
ವಿಶ್ವಾದ್ಯಂತ 15 ಕ್ಕೂ ಹೆಚ್ಚು ದೇಶಗಳಲ್ಲಿ ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಸಿನಿಮಾ ರಿಲೀಸ್ ಆಗ್ತಿದೆ.. ಅಂದ್ಹಾಗೆ ಈ ಸಿನಿಮಾ ಕನ್ನಡ , ತಮಿಳು , ತೆಲುಗು , ಮಲಯಾಳಂ , ಹಿಂದಿಯಲ್ಲಿ ರಿಲೀಸ್ ಆಗಲಿದೆ.. ಅದ್ಧೂರಿಯಾಗಿಯೇ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ..
ಇತ್ತೀಚೆಗೆ ಸಿನಿಮಾದ ಟೀಸರ್ ರಿಲೀಸ್ ಆಗಿತ್ತು.. ಟೀಸರ್ ಭರ್ಜರಿ ಸೌಂಡ್ ಮಾಡಿದ ಕೆಲವೇ ಕೆಲವು ದಿನಗಳಲ್ಲಿ ಸಿನಿಮಾದ ಟ್ರೇಡ್ ಮಾರ್ಕ್ ಸಾಂಗ್ ರಿಲೀಸ್ ಆಗಿ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ.. ಇನ್ನೇನು ಸಿನಿಮಾ ರಿಲೀಸ್ ಗೆ ಕೌಂಟ್ ಡೌನ್ ಶುರುವಾಗಿದೆ. ಮಾರ್ಚ್ 17 ಕ್ಕೆ ಸಿನಿಮಾ ರಿಲೀಸ್ ಆಗಲಿದೆ..
ಈ ಗ್ಯಾಪ್ ಅಲ್ಲಿ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಕೊಡುವ ಪ್ಲಾನ್ ನಲ್ಲಿದೆ ಸಿನಿಮಾ ತಂಡ.. ಹೌದು ಆ ಸರ್ಪ್ರೈಸ್ ಅಪ್ಪು ಅಭಿಮಾನಿಗಳಿಗೆ ಮಾರ್ಚ್ 11 ಕ್ಕೆ ಸಿಗಲಿದೆ.. ಅಂದ್ಹಾಗೆ ಅಂದು ಜೇಮ್ಸ್ ತಂಡ ಇಂಟ್ರಡಕ್ಷನ್ ಹಾಡನ್ನ ರಿಲೀಸ್ ಮಾಡಲಿದ್ದು , ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ..