James : ವೀರೇಶ್ ಥಿಯೇಟರ್ ಮುಂದೆ ಅಪ್ಪು ಅವರ 30 ಕಟೌಟ್..!
ಕರ್ನಾಟಕದಲ್ಲಿ ಅಪ್ಪು ಅಭಿಮಾನಿಗಳು ಮಾರ್ಚ್ 17 ರಿಂದ ಜಾತ್ರೆ ಶುರುಮಾಡಲಿದ್ದಾರೆ. ಅಪ್ಪು ಹುಟ್ಟುಹಬ್ಬ ಒಂದೆಡೆಯಾದ್ರೆ , ಅವರ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಿಲೀಸ್ ಆಗಿ ಧೂಳೆಬ್ಬಿಸಲಿದೆ. ವಿಶ್ವಾದ್ಯಂತ 15 ಕ್ಕೂ ಹೆಚ್ಚು ದೇಶಗಳಲ್ಲಿ ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಸಿನಿಮಾ ರಿಲೀಸ್ ಆಗ್ತಿದೆ.. ಅಂದ್ಹಾಗೆ ಈ ಸಿನಿಮಾ ಕನ್ನಡ , ತಮಿಳು , ತೆಲುಗು , ಮಲಯಾಳಂ , ಹಿಂದಿಯಲ್ಲಿ ರಿಲೀಸ್ ಆಗಲಿದೆ.. ಅದ್ಧೂರಿಯಾಗಿಯೇ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ..
ಬೆಂಗಳೂರಿನ ನಗರಾದ್ಯಂತ ಪುನೀತ್ ರಾಜ್ಕುಮಾರ್ ಅವರ ಕಟೌಟ್ಗಳನ್ನು ನಿಲ್ಲಿಸುವ ಕಾರ್ಯ ಭರದಿಂದ ಸಾಗುತ್ತಿದೆ.
‘ಜೇಮ್ಸ್’ ಮಾರ್ಚ್ 17ರಂದು ಎಲ್ಲೆಡೆ ರಿಲೀಸ್ ಆಗುತ್ತಿದೆ. ಈ ಸಿನಿಮಾವನ್ನು ಅದ್ಧೂರಿಯಾಗಿ ಬರ ಮಾಡಿಕೊಳ್ಳು ಅಪ್ಪು ಅಭಿಮಾನಿಗಳು ನಿರ್ಧಾರ ಮಾಡಿದ್ದಾರೆ. ಈಗಾಗಲೇ ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಕಟೌಟ್ ತಲೆ ಎತ್ತಿದೆ.
ಇದೀಗ ಮಾಗಡಿ ರಸ್ತೆಯಲ್ಲಿ ಇರುವ ವೀರೇಶ್ ಥಿಯೇಟರ್ ಮುಂಭಾಗ ಬರೋಬ್ಬರಿ 30 ಕಟೌಟ್ ಗಳನ್ನ ನಿಲ್ಲಿಸಲು ಪುನೀತ್ ಅಭಿಮಾನಿಗಳು ಪ್ಲ್ಯಾನ್ ಮಾಡಿದ್ದಾರೆ.
‘ಜೇಮ್ಸ್ ಎಂಬುದು ನಮಗೆ ಸಿನಿಮಾ ಮಾತ್ರ ಅಲ್ಲ. ಅದು ನಮ್ಮ ಎಮೋಷನ್. ಇದು ಪುನೀತ್ ಅಭಿನಯದ 30ನೇ ಸಿನಿಮಾ. ಹಾಗಾಗಿ ಈ ಬಾರಿ ವೀರೇಶ್ ಚಿತ್ರಮಂದಿರದಲ್ಲಿ 30 ಕಟೌಟ್ಗಳನ್ನು ನಿರ್ಮಿಸುತ್ತಿದ್ದೇವೆ’ ಎಂದು ಅಪ್ಪು ಅಭಿಮಾನಿಗಳು ಹೇಳಿಕೊಂಡಿದ್ದಾರೆ.
ಇನ್ನು ಈ ಚಿತ್ರಕ್ಕೆ ಚೇತನ್ ಕುಮಾರ್ ನಿರ್ದೇಶನ ಮಾಡಿದ್ದು, ಪುನೀತ್ಗೆ ನಾಯಕಿಯಾಗಿ ಪ್ರಿಯಾ ಆನಂದ್ ಅಭಿನಯಿಸಿದ್ದಾರೆ. ಪುನೀತ್ ಪಾತ್ರಕ್ಕೆ ಶಿವರಾಜ್ಕುಮಾರ್ ಧ್ವನಿ ನೀಡಿದ್ದಾರೆ.