ತಾರೆ ಜಮೀನ್ ಪರ್ ಬಾಲಕ “ಇಶಾನ್ ಅವಸ್ತಿ” 15 ವರ್ಷಗಳ ನಂತರ ಹೇಗಿದ್ದಾರೆ ಗೊತ್ತಾ ?
ಕೆಲವೊಂದು ಸಿನಿಮಾಗಳು ಮತ್ತು ಅವುಗಳ ಪಾತ್ರ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಬಿಡುತ್ತವೆ. ಸಿನಿಮಾ ಬಂದು ದಶಕಗಳೆ ಕಳೆದರೂ ಪಾತ್ರಗಳು ಕಾಡುತ್ತಿರುತ್ತವೆ. ಅಂಥಹದ್ದೇ ಒಂದು ಚಿತ್ರ ಬಾಲಿವುಡ್ ನ ತಾರೆ ಜಮೀನ್ ಪರ್
2007ರಲ್ಲಿ ತೆರೆಕಂಡ ‘ತಾರೆ ಜಮೀನ್ ಪರ್’ ಎಂಬ ಸೈಕಲಾಜಿಕಲ್ ಸಿನಿಮಾದಲ್ಲಿ ಜಾಸ್ತಿ ಮಾತನಾಡದ ಹುಡುಗನಾಗಿ ತಮ್ಮದೇ ಲೋಕದಲ್ಲಿ ಮುಳುಗಿರುತ್ತಿದ್ದ ಇಶಾನ್ ಅವಸ್ಥಿ ಪಾತ್ರ ಕೂಡ ತಮ್ಮ ನಟನಾ ಕೌಶಲ್ಯದಿಂದ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ.
ಈ ಪಾತ್ರಕ್ಕೆ ಜೀವ ತುಂಬಿರುವ ಕಲಾವಿದನ ನಿಜವಾದ ಹೆಸರು ದರ್ಶೀಲ್ ಸಫಾರಿ. ಈ ಸಿನಿಮಾದ ಚಿತ್ರೀಕರಣದ ವೇಳೆ ದರ್ಶೀಲ್‌ಗೆ ಕೇವಲ 10 ವರ್ಷ. ಇಂದು ಅಂದರೆ ಮಾರ್ಚ್ 9, 2022 ರಂದು ದರ್ಶೀಲ್ ಅವರಿಗೆ 25 ವರ್ಷ ತುಂಬಿದೆಸಿನಿಮಾ ತೆರೆಕಂಡ 15 ವರ್ಷಗಳಲ್ಲಿ ದರ್ಶಿಲ್ ಸಾಕಷ್ಟು ಬದಲಾಗಿದ್ದಾರೆ.
ಇಂದು ದರ್ಶೀಲ್ ಸಫಾರಿ ತಮ್ಮ 25 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 15 ವರ್ಷಗಳ ನಂತರ ದರ್ಶೀಲ್ ಸಫಾರಿಯ ಲುಕ್ ಸಂಪೂರ್ಣ ಬದಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈತನ ಚಿತ್ರಗಳನ್ನ ನೋಡಿದರೆ… ಈ ಅರೇ… ಇದು ತಾರೆ ಜಮೀನ್ ಪರ್ ಚಿತ್ರದಲ್ಲಿ ನಟಿಸಿದ್ದ ಇಶಾನ್ ಅವಸ್ಥಿನಾ ಅಂತ ಆಶ್ಚರ್ಯಕ್ಕೊಳಗಾಗುತ್ತೀರ..
‘ತಾರೆ ಜಮೀನ್ ಪರ್’ ಚಿತ್ರದಲ್ಲಿ ಡಿಸ್ಲೆಕ್ಸಿಯಾದಿಂದ ಬಳಲುತ್ತಿರುವ ಮಗುವಿನ ಪಾತ್ರವನ್ನು ನಿರ್ವಹಿಸಿದ ದರ್ಶೀಲ್ ಸಫಾರಿ ಅನೇಕ ಶೋಗಳು ಮತ್ತು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಅವರು ತಮ್ಮ ನಟನಾ ಕೌಶಲ್ಯವನ್ನು ಪ್ರದರ್ಶಿಸುತ್ತಿದ್ದಾರೆ. ‘ಬಮ್ ಬಮ್ ಬೋಲೆ’, ‘ಜೋಕೆಕೋಮನ್’ ಮತ್ತು ‘ಮಿಡ್ನೈಟ್ಸ್ ಚಿಲ್ಡ್ರನ್’ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅಲ್ಲದೇ ‘ಝಲಕ್ ದಿಖ್ಲಾ ಜಾ’ ಸೀಸನ್ 5 ಸೇರಿದಂತೆ ಹಲವಾರು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಇದರೊಂದಿಗೆ ಹಲವು ಮ್ಯೂಸಿಕ್ ವಿಡಿಯೋ ಅಲ್ಬಂಗಳಲ್ಲಿ ಕಾಣಿಸಿಕೊಂಡಿದ್ದಾರೆ.
ದರ್ಶೀಲ್ ತಮ್ಮ ಅಭಿನಯದಿಂದ ಪ್ರೇಕ್ಷಕರು ಮತ್ತು ವಿಮರ್ಶಕರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಆದರೆ ಆ ಬಳಿಕ ದರ್ಶೀಲ್ ಸಿನಿಮಾ ಹಾಗೂ ಬಾಲಿವುಡ್‌ನಿಂದ ನಾಪತ್ತೆಯಾಗಿದ್ದಾರೆ. ಅವರು ಕೊನೆಯದಾಗಿ ಸುಶ್ಮಿತಾ ಸೇನ್ ಅವರ ಮಗಳು ರೆನೀ ಸೇನ್ ಜೊತೆಯಾಗಿ ‘ಸುತ್ತಬಾಜಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
taare Zameen Par boy “Ishaan Awasthi” How do you know 15 years later?