ಉಪೇಂದ್ರ ಯಾವುದನ್ನೂ ನೇರವಾಗಿ ಹೇಳದ ಬುದ್ದಿವಂತ.. ಯಾವಾಗಲೂ ಜನರನ್ನ ಕನ್ಫ್ಯೂಸ್ ಮಾಡಿಸುವ ಅವರ ಇದೇ ಕ್ರೇಜ್ ಮುಂದುವರೆದಿದೆ. ಇದೀಗ ಮತ್ತೊಮ್ಮೆ ಅಭಿಮಾನಿಗಳ ತಲೆಗೆ ಉಪ್ಪಿ ಹುಳ ಬಿಟ್ಟಿದ್ಧಾರೆ.
‘11.03, 12:46 ಸೇವ್ ದಿಸ್ ಡೇಟ್’……. ಹೀಗೊಂದು ಮಸೇಜ್ ಕಳುಹಿಸಿ ಸೈಲೆಂಟ್ ಆಗಿದ್ದಾರೆ ಉಪ್ಪಿ..
ಇತ್ತ ಉಪ್ಪಿ ಟ್ವೀಟ್ ಹಿಂದಿನ ಮರ್ಮವೇನಿರಬಹುದು.. ಹೀಗ್ಯಾಕೆ ಟ್ವೀಟ್ ಮಾಡಿದ್ರು.. ರಾಜಕೀಯದ ಅಪ್ ಡೇಟಾನಾದ್ರೂ ಕೊಡ್ತಾರಾ..?
ಕಬ್ಜ ಸಿನಿಮಾದಲ್ಲಿ ಬ್ಯುಸಿಯಿರುವ ಉಪ್ಪಿ ಸದ್ಯ ಸಿನಿಮಾವೊಂದಕ್ಕೆ ಆಕ್ಷನ್ ಕಟ್ ಹೇಳ್ತಿದ್ಧಾರೆ.. ಉಪ್ಪಿ ಡಯರೆಕ್ಷನ್ ಸಿನಿಮಾ ಒಂದು ಬರುತ್ತಿದೆ ಎಂದ್ರೆ ಆ ಸಿನಿಮಾದ ಬಗ್ಗೆ ಜನರಿಗೆ ಯಾವ ಪರಿ ಕ್ರೇಜ್ ಇರುತ್ತೆ ಅನ್ನೋದನ್ನ ಮತ್ತೆ ಹೇಳಬೇಕಾದ ಅವಶ್ಯಕತೆ ಇಲ್ಲ.. ಈ ಸಿನಿಮಾ ಬಗ್ಗೆ ಯಾವುದಾದರೂ ಅಪ್ ಡೇಟ್ ಕೊಡುತ್ತಾರಾ… ಅಥವ ಕಬ್ಜದ ಹೊಸ ಅಪ್ ಡೇಟ್ ನೀಡುತ್ತಾರಾ..?? ಅಥವ ಹೊಸ ಸಿನಿಮಾದ ಬಗ್ಗೆ ಏನಾದ್ರೂ ಸುಳಿವು ಸಿಗಲಿದ್ಯಾ ಅನ್ನೋ ಕ್ಯೂರಿಯಾಸಿಟಿ ಹುಟ್ಟಿಸಿದೆ.