Saturday, January 28, 2023
  • ಸಿನಿ ಕಾರ್ನರ್
  • ಚಂದನವನ
  • ಕೋಸ್ಟಲ್ ವುಡ್
  • ಬಾಲಿವುಡ್
  • ಟಾಲಿವುಡ್
  • ಕಾಲಿವುಡ್
  • ವಿಮರ್ಶೆ
  • ಮಾಲಿವುಡ್
  • More
    • ಟಿ ವಿ
    • ವಿಶೇಷ
    • ಗ್ಯಾಲರಿ
Cini Bazaar
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
  • Home
  • Sandalwood
  • Bollywood
  • Tollywood
  • Kollywood
  • Mollywood
  • Coastal Wood
  • Cini Corner
  • More News
    • South Cinemas
    • Special
    • Gallery
No Result
View All Result
Cini Bazaar
No Result
View All Result
Home ವಿಶೇಷ

ಬೆಂಗಳೂರಿನಲ್ಲಿ ‘ಸಮಷ್ಟಿ’ ತಂಡದ ‘ಮಿಸ್. ಸದಾರಮೆ’ನಾಟಕದ 50ನೇ ಪ್ರಯೋಗ

admin by admin
March 10, 2022
in ವಿಶೇಷ, ಸಿನಿ ಕಾರ್ನರ್
0
ಬೆಂಗಳೂರಿನಲ್ಲಿ ‘ಸಮಷ್ಟಿ’ ತಂಡದ ‘ಮಿಸ್. ಸದಾರಮೆ’ನಾಟಕದ 50ನೇ ಪ್ರಯೋಗ
Share on FacebookShare on TwitterShare on WhatsApp

ಬೆಂಗಳೂರಿನಲ್ಲಿ ‘ಸಮಷ್ಟಿ’ ತಂಡದ ‘ಮಿಸ್. ಸದಾರಮೆ’ನಾಟಕದ 50ನೇ ಪ್ರಯೋಗ

ಬೆಂಗಳೂರು: ‘ಸಮಷ್ಟಿ’ ಕನ್ನಡ ರಂಗತಂಡವು ‘ಮಿಸ್. ಸದಾರಮೆ’(ಬೆಳ್ಳಾವೆ ನರಹರಿ ಶಾಸ್ತ್ರಿಯವರಿಂದ ವಿರಚಿತವಾದ ಮೂಲ ಹಾಸ್ಯ ನಾಟಕ ‘ಸದಾರಮಾ ನಾಟಕಂ’ ನ ಪರಿಷ್ಕೃತ ಆವೃತ್ತಿ, ನಿರ್ದೇಶನ – ನೀನಾಸಂ ಪದವೀಧರ ಮಂಜುನಾಥ್. ಎಲ್. ಬಡಿಗೇರ್) ಎನ್ನುವ ಕನ್ನಡ ನಾಟಕದ 49 ಮತ್ತು 50 ನೆಯ ಪ್ರದರ್ಶನವನ್ನು ಮಾರ್ಚ್ ತಿಂಗಳ ದಿನಾಂಕ 12 ರಂದು ರಂಗಶಂಕರದಲ್ಲಿ ಪ್ರದರ್ಶಿಸಲಿದೆ.

ಮಿಸ್. ಸದಾರಮೆ
ಮಿಸ್. ಸದಾರಮೆ ನಾಟಕವು ಬೆಳ್ಳಾವೆ ನರಹರಿ ಶಾಸ್ತ್ರಿಯವರಿಂದ ವಿರಚಿತವಾದ ಮೂಲ “ಸದಾರಮಾ ನಾಟಕಂ” ನ ಪರಿಷ್ಕೃತ ಆವೃತ್ತಿ. ಮೂಲತಃ ಈ ನಾಟಕವು ಗುಬ್ಬಿ ಕಂಪೆನಿಯಲ್ಲಿ ಸಾವಿರಾರು ಪ್ರಯೋಗಗಳನ್ನು ಕಂಡು ನಂತರ ಹಿರಣ್ಣಯ್ಯನವರಿಂದ ಮತ್ತೆ ಹಲವಾರು ಪ್ರಯೋಗಗಳನ್ನು ಕಂಡು ಪ್ರಸಿದ್ದವಾಗಿದೆ. ನಂತರ ಇದನ್ನು ಕೆ.ವಿ. ಸುಬ್ಬಣ್ಣನವರು ಪ್ರಸ್ತುತ ಸನ್ನಿವೇಶಕ್ಕೆ ಬದಲಾಯಿಸಿ “ಮಿಸ್. ಸದಾರಮೆ” ಎಂದು ಹೆಸರಿಸಿ ಬಿ.ವಿ. ಕಾರಂತರ ನಿರ್ದೇಶನದಲ್ಲಿ ನೀನಾಸಂ ತಿರುಗಾಟದಲ್ಲಿ ನೂರಾರು ಪ್ರದರ್ಶನಗಳನ್ನ ಮಾಡಿಸಿದರು. ಈ ನಾಟಕವು ಕನ್ನಡದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ಇತರ ಕೆಲವು ಭಾಷೆಗಳಲ್ಲೂ ಪ್ರಯೋಗವಾದ ದಾಖಲೆಗಳಿವೆ.

ವರ್ತಕ ಬಂಗಾರ ಸೆಟ್ಟಿಯ ಮಗಳಾದ ಸದಾರಮೆಯಿಂದ ಆಕರ್ಶಿತನಾದ ರಾಜಕುಮಾರ, ರಾಜ್ಯ-ಕೋಶಾದಿಗಳನ್ನು ಬಿಟ್ಟು ಮದುವೆಯಾಗಿ ಅವಳೊಂದಿಗೆ ದೇಶಾಂತರ ಹೊರಟು ಹೋಗುತ್ತಾನೆ. ವಿಧಿಯ ವೈಪರೀತ್ಯದಿಂದಾಗಿ ಗಂಡ-ಹೆಂಡತಿಯರು ಒಬ್ಬರಿಂದೊಬ್ಬರು ಅಗಲಿ, ಮುಗ್ದೆಯಾದ ಸದಾರಮೆ ಹಲವಾರು ಕಷ್ಟ-ಕಾರ್ಪಣ್ಯಗಳಿಗೆ ಸಿಲುಕಿಕೊಳ್ಳುತ್ತಾಳೆ. ಇವನ್ನೆಲ್ಲಾ ಯಶಸ್ವಿಯಾಗಿ ಎದುರಿಸಿ ಕೊನೆಗೆ ಅವರು ಮತ್ತೆ ಒಂದಾಗುತ್ತಾರೆ. ಇಡೀ ನಾಟಕವು ಹಾಸ್ಯ ಸನ್ನಿವೇಶಗಳಿಂದ ಕೂಡಿದ್ದು, ಕಂಪನಿ ನಾಟಕ ಶೈಲಿಯ ಹಾಡುಗಳಿಂದ ವೈಭವೀಕರಿಸಲ್ಪಟ್ಟಿದೆ. ನಿರ್ದೇಶಕರು ನಾಟಕದ ಮೂಲ ಕತೆಗೆ ಹೊಸ ವ್ಯಾಖ್ಯಾನವನ್ನು ನಿಡುವ ಪ್ರಯತ್ನವನ್ನು ಮಾಡಿದ್ದಾರೆ.

ಪ್ರದರ್ಶನ : ಶನಿವಾರ, 12 ನವೆಂಬರ್ 2022 ರಂದು ರಂಗಶಂಕರದಲ್ಲಿ ಸಂಜೆ 3.30 ಮತ್ತು 7.30 ಕ್ಕೆ.

ನಿರ್ದೇಶಕರ ಬಗ್ಗೆ: ಮಂಜುನಾಥ್ ಎಲ್ ಬಡಿಗೇರ ಇವರು ನೀನಾಸಂ ರಂಗಶಿಕ್ಷಣ ಕೇಂದ್ರದ ಪದವೀಧರರಾಗಿದ್ದು, ತಿರುಗಾಟದಲ್ಲಿ ನಟರಾಗಿ ದುಡಿದಿದ್ದಾರೆ. ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಶಾಸ್ತ್ರೀಯವಾಗಿ ಯಕ್ಷಗಾನವನ್ನು ಅಭ್ಯಾಸ ಮಾಡಿರುವ ಇವರು ರಾಮನಗರದ ಜಾನಪದ ಲೋಕದಲ್ಲಿ ಜಾನಪದ ಡಿಪೆÇ್ಲಮಾ ಮಾಡಿರುತ್ತಾರೆ. ಪ್ರಸ್ತುತ ಬೆಂಗಳೂರಿನ ‘ಸಮಷ್ಟಿ’ ತಂಡದಲ್ಲಿ ನಟರಾಗಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದುವರೆಗೆ ಇವರು ಹರಿಣಾಭಿಸರಣ, ಬೊಮ್ಮನಹಳ್ಳಿಯ ಕಿಂದರಿ ಜೋಗಿ, ಕಥನ, ಸಾಫಲ್ಯ, ಪರಿತ್ಯಕ್ತ, ಕೈದಿ, ಪ್ರಮೀಳಾರ್ಜುನೀಯಂ, ಚಿತ್ರಪಟ ರಾಮಾಯಣ, ಸಂಗ್ಯಾಬಾಳ್ಯಾ, ಮುದಿದೊರೆ ಮತ್ತು ಮೂರು ಮಕ್ಕಳು ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ. ನಟನಾಗಿ ಅಭಿನಯಿಸಿದ ನಾಟಕಗಳು- ಆಷಾಡದ ಒಂದು ದಿನ, ಸಾಂಬಶಿವ ಪ್ರಹಸನ, ನವಿಲು ನಿಂತಾವ, ಕಾರ್ಮುಗಿಲ ಮಿಂಚು, ಜಾತಕರಿಂಗಣ, ಊರುಭಂಗ, ಮಿಸ್. ಸದಾರಮೆ, ಅವಸ್ಥೆ, ಮೊದಲಗಿತ್ತಿ, ಅಮನಿ, ಹರಿಣಾಭಿಸರಣ, ಸಾಫಲ್ಯ, ಶಾಂಡಿಲ್ಯ ಪ್ರಹಸನ ಮುಂತಾದವು.

ತಂಡದ ಬಗ್ಗೆ :
ಸಮಷ್ಟಿ ತಂಡವು 2000 ದಲ್ಲಿ ಹುಟ್ಟಿಕೊಂಡ ತಂಡ. ಹೊಸ ಪ್ರತಿಭೆಗಳನ್ನು ಹುಡುಕಿ ಅವರಲ್ಲಿ ರಂಗಾಸಕ್ತಿಯನ್ನು ಬೆಳೆಸುವುದು ಇದರ ಉದ್ದೇಶ. ಇದಕ್ಕಾಗಿ ಹಲವಾರು ಉಚಿತ ರಂಗಶಿಬಿರಗಳನ್ನು ಇದುವರೆಗೆ ನಡೆಸಿದೆ. ಸಾಹಿತ್ಯಾಸಕ್ತಿಯನ್ನು ಬೆಳೆಸುವ ಉದ್ದೇಶದಿಂದ ಆರಂಭಿಸಿದ ‘ಸಮಷ್ಟಿ ಸಾಹಿತ್ಯ ಸಂಜೆ’ ಯು ಇದುವರೆಗೆ 50ಕ್ಕೂ ಹೆಚ್ಚಿನ ಕಾರ್ಯಕ್ರಮಗಳನ್ನು ನೀಡಿದೆ.

ಈವರೆಗೆ ಇದು ‘ಆಷಾಡದ ಒಂದು ದಿನ’, ‘ಸಾಂಬಶಿವ ಪ್ರಹಸನ’, ‘ಮೃಚ್ಛಕಟಿಕ’, ‘ಹದ್ದು ಮೀರಿದ ಹಾದಿ’, ‘ಅಲೆಗಳಲ್ಲಿ ರಾಜಹಂಸಗಳು’, ‘ಹರಿಣಾಭಿಸರಣ’, ‘ಕಥನ’, ‘ಮಿಸ್. ಸದಾರಮೆ’ ‘ಕಥೆ ಹೇಳತೀವಿ’ ‘ಸಾಫಲ್ಯ’ ‘ಅವಾಂತರ’ ‘ಶಾಂಡಿಲ್ಯ ಪ್ರಹಸನ’ ‘ನಾಯೀ ಕಥೆ’, ‘ಪ್ರಮೀಳಾರ್ಜುನೀಯಂ’ ‘ಚಿರಕುಮಾರ ಸಭಾ’, ‘ವಿಶಾಕೆ’, ‘ಚಿತ್ರಪಟ’ ಮುಂತಾದ ನಾಟಕಗಳನ್ನು ಯಶಸ್ವಿಯಾಗಿ ರಂಗಕ್ಕೆ ತಂದಿದೆ. ಇದಲ್ಲದೇ ನೀನಾಸಂನ ‘ಪ್ರಯಾಣ’ ತಂಡದ ‘ಕರ್ಣಾದರ್ಶ’ ಮತ್ತು ‘ಕೊಳಲು ಭೂಮಿಗೀತ’ ಹಾಗೂ ‘ಜನಮನದಾಟ’ ತಂಡದ ‘ರಹಸ್ಯ ವಿಶ್ವ ಮತ್ತು ತಬರನ ಕಥೆ’ ‘ಸೂರ್ಯನ ಕುದುರೆ’ ‘ಬಾಬಾ ಸಾಹೇಬ್ ಅಂಬೇಡ್ಕರ್’ ನಾಟಕಗಳ ಪ್ರದರ್ಶನಗಳನ್ನು ಆಯೋಜಿಸಿರುತ್ತದೆ.

Tags: bengalurucinibazaardramatheater club
ShareTweetSend
Join us on:

Recent Posts

  • Sandalwood : ‘ಹೊಂದಿಸಿ ಬರೆಯಿರಿ’ – ಪತ್ರದ ಮೂಲಕ ಮನೆ ಮನೆಗೂ ಬರಲಿದೆ ಸಿನಿಮಾ ಆಮಂತ್ರಣ
  • Uorfi Javed : ಗಾರ್ಬೇಜ್ ಕವರ್ ಫ್ರಾಕ್ ಧರಿಸಿದ ಉರ್ಫಿ..!!
  • KGF 2 : ಫಸ್ಟ್ ಡೇ ಕಲೆಕ್ಷನ್ ಬ್ರೇಕ್ ಮಾಡಿದ ‘ಪಠಾಣ್’…!!!
  • Yash : Pepsi ಜಾಹಿರಾತಿಯಲ್ಲಿ ರಾಕಿ ಭಾಯ್ – ಫ್ಯಾನ್ಸ್ ಬೇಸರ
  • Venky75 : ವಿಕ್ಟರಿ ವೆಂಕಟೇಶ್ ‘ಸೈಂದವ್’ ಚಿತ್ರದ ಫಸ್ಟ್ ಲುಕ್ ಹೇಗಿದೆ..??

Recent Comments

No comments to show.

Archives

  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021

Categories

  • Beauty
  • Bollywood
  • KGF 2
  • Life style
  • More
  • Music
  • North Cinemas
  • Tips & Tricks
  • Trends
  • Uncategorized
  • World Cinemas
  • ಕಾಲಿವುಡ್
  • ಕೋಸ್ಟಲ್ ವುಡ್
  • ಗ್ಯಾಲರಿ
  • ಚಂದನವನ
  • ಟಾಲಿವುಡ್
  • ಟಿ ವಿ
  • ದಕ್ಷಿಣ ಸಿನಿಮಾಗಳು
  • ಬಾಲಿವುಡ್
  • ಮಾಲಿವುಡ್
  • ವಿಮರ್ಶೆ
  • ವಿಶೇಷ
  • ಸಿನಿ ಕಾರ್ನರ್
No Result
View All Result

Categories

Beauty Bollywood KGF 2 Life style More Music North Cinemas Tips & Tricks Trends Uncategorized World Cinemas ಕಾಲಿವುಡ್ ಕೋಸ್ಟಲ್ ವುಡ್ ಗ್ಯಾಲರಿ ಚಂದನವನ ಟಾಲಿವುಡ್ ಟಿ ವಿ ದಕ್ಷಿಣ ಸಿನಿಮಾಗಳು ಬಾಲಿವುಡ್ ಮಾಲಿವುಡ್ ವಿಮರ್ಶೆ ವಿಶೇಷ ಸಿನಿ ಕಾರ್ನರ್

Contact

#779, Ground Floor, 11th Block, 4th Cross, Opp St Sophia High School, Papareddy Palya, 2nd Stage, Nagarabhavi, Bengaluru- 560072

Recent Posts

  • Sandalwood : ‘ಹೊಂದಿಸಿ ಬರೆಯಿರಿ’ – ಪತ್ರದ ಮೂಲಕ ಮನೆ ಮನೆಗೂ ಬರಲಿದೆ ಸಿನಿಮಾ ಆಮಂತ್ರಣ
  • Uorfi Javed : ಗಾರ್ಬೇಜ್ ಕವರ್ ಫ್ರಾಕ್ ಧರಿಸಿದ ಉರ್ಫಿ..!!
  • KGF 2 : ಫಸ್ಟ್ ಡೇ ಕಲೆಕ್ಷನ್ ಬ್ರೇಕ್ ಮಾಡಿದ ‘ಪಠಾಣ್’…!!!
  • Yash : Pepsi ಜಾಹಿರಾತಿಯಲ್ಲಿ ರಾಕಿ ಭಾಯ್ – ಫ್ಯಾನ್ಸ್ ಬೇಸರ
  • Venky75 : ವಿಕ್ಟರಿ ವೆಂಕಟೇಶ್ ‘ಸೈಂದವ್’ ಚಿತ್ರದ ಫಸ್ಟ್ ಲುಕ್ ಹೇಗಿದೆ..??
  • About Us
  • Privacy Policy

© 2022 Cini Bazaar - All Rights Reserved | Powered by Kalahamsa Infotech Pvt. ltd.

No Result
View All Result

© 2022 Cini Bazaar - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram