ಬಾಲಯ್ಯ ಸಿನಿಮಾ ಸೆಟ್ ನಲ್ಲಿ ಕನ್ನಡದ ‘ಕರಿಚಿರತೆ’…!!!
ಸ್ಯಾಂಡಲ್ ವುಡ್ ನ ಕರಿಚಿರತೆ,,, ದುನಿಯಾ ವಿಜಯ್ ಸಲಗ ಸಿನಿಮಾದಲ್ಲಿ ನಿರ್ದೇಶಕನಾಗಿಯೂ ಸಕ್ಸಸ್ ಕಂಡ ನಂತರ ಮತ್ತೊಂದು ಹೊಸ ಪ್ರಯೋಗದಂತೆ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟಿರುವ ವಿಚಾರ ಎಲ್ರಿಗೂ ಗೊತ್ತಿದೆ.. ಜೊತೆಗೆ ವಿಲ್ಲನ್ ಆಗಿ ಕಾಣಿಸಿಕೊಳ್ತಿರುವುದು,,, ಅದ್ರಲ್ಲೂ ತೆಲುಗಿನ ಸ್ಟಾರ್ ನಟ ಬಾಲಯ್ಯ ಸಿನಿಮಾದಲ್ಲಿ ಅನ್ನುವುದು ವಿಶೇಷ.. ನಂದಮುರಿ ಬಾಲಕೃಷ್ಣ ಅವರ 107 ಸಿನಿಮಾ ಮೂಲಕ ದುನಿಯಾ ವಿಜಯ್ ಅವರು ಟಾಲಿವುಡ್ ಪ್ರವೇಶ ಮಾಡುತ್ತಿದ್ದಾರೆ. ಈ ಬಗ್ಗೆ ಕೆಲ ಸಮಯದ ಹಿಂದೆಯೇ ಘೋಷಣೆಯಾಗಿತ್ತು. ಇದೀಗ ಸಿನಿಮಾದ ಶೂಟಿಂಗ್ ನಲ್ಲಿ ದುನಿಯಾ ವಿಜಯ್ ಭಾಗವಹಿಸಿದ್ದಾರೆ.
‘ಎನ್ಬಿಕೆ 107’ ಚಿತ್ರಕ್ಕೆ ಗೋಪಿಚಂದ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.. ಮೈತ್ರಿ ಮೂವಿ ಮೇಕರ್ಸ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಈ ಸಿನಿಮಾದಲ್ಲಿ ಶೃತಿ ಹಾಸನ್ ಹಾಗೂ ವರಲಕ್ಷ್ಮಿ ಶರತ್ ಕುಮಾರ್ ಕೂಡ ನಟಿಸುತ್ತಿದ್ದಾರೆ. ಇನ್ನು ಶೂಟಿಂಗ್ ನಲ್ಲಿ ಭಾಗವಹಿಸಿರುವ ದುನಿಯಾ ವಿಜಯ್ ಅವರನ್ನ ನಿರ್ದೇಶಕ ಗೋಪಿಚಂದ್ ಸ್ವಾಗತಿಸಿದ್ದಾರೆ. ಆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅಂದಹಾಗೆ ಕೆಲವೇ ದಿನಗಳ ಹಿಂದೆ ದುನಿಯಾ ವಿಜಯ್ ತಮ್ಮ ಹೊಸ ಚಿತ್ರ ‘ಭೀಮ’ವನ್ನು ಅನೌನ್ಸ್ ಮಾಡಿದ್ದರು..