ವಿದ್ಯಾಬಾಲನ್ ‘ಜಲ್ಸಾ’ ಟೀಸರ್ ರಿಲೀಸ್
ಬಾಲಿವುಡ್ ನ ವರ್ಸಟೈಲ್ ನಟಿಯಾಗಿ ಗುರುತಿಸಿಕೊಂಡಿರುವ ನಟಿ ವಿದ್ಯಾಬಾಲನ್ ಅವರ ಅಭಿನಯದ ಜಲ್ಸಾ ಸಿನಿಮಾದ ಟಿಸರ್ ರಿಲೀಸ್ ಆಗಿ , ಉತ್ತಮ ರೆಸ್ಪಾನ್ಸ್ ಪಡೆದುಕೊಳ್ತಿದೆ.
ಸಿನಿಮಾದಲ್ಲಿ ವಿದ್ಯಾಬಾಲನ್ ಲುಕ್ , ಅವರ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ.. ಅಂದ್ಹಾಗೆ ಈ ಸಿನಿಮಾ ಮಾರ್ಚ್ 18ಕ್ಕೆ ನೇರವಾಗಿ ಒಟಿಟಿ ಫ್ಲಾಟ್ ಫಾರ್ಮ್ ಆದ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ.
ವಿದ್ಯಾ ಬಾಲನ್ ಮತ್ತು ಶೆಫಾಲಿ ಷಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನ ನಿರ್ವಹಿಸಿದ್ದಾರೆ. ಈ ಸಿನಿಮಾಗೆ ಸುರೇಶ್ ತ್ರಿವೇಣಿ ಆಕ್ಷನ್ ಕಟ್ ಹೇಳಿದ್ದಾರೆ.
ಇವರ ಹೊರತಾಗಿ ರೋಹಿಣಿ , ಮಾನವ್ ಕೌಲ್, ಇಕ್ಬಾಲ್ ಖಾನ್, ವಿಧಾತ್ರಿ ಬಂಡಿ, ಶ್ರೀಕಾಂತ್ ಮೋಹನ್ ಯಾದವ್ ಸೇರಿದಂತೆ ಹಲವರ ತಾರಾಬಳಗವಿದೆ.